ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 22 ಜನವರಿ 2020
ಆಯನೂರಿನ ಧರ್ಮಶ್ರೀ ಸೇವಾ ಟ್ರಸ್ಟ್’ನಿಂದ ಜ.30ರಂದು ಪೆಸಿಟ್ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿರುವ ಸಾಮೂಹಿಕ ವಿವಾಹದಲ್ಲಿ ಮಗಳ ಮದುವೆಯನ್ನು ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ತಿಳಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಆದಿಚುಂಚನಗಿರಿ ಶ್ರೀ, ಬೆಕ್ಕಿನ ಕಲ್ಮಠದ ಸ್ವಾಮೀಜಿ, ವಿವಿಧ ಸಮಾಜಕ್ಕೆ ಸೇರಿದ ಸ್ವಾಮೀಜಿಗಳು, ಗಣ್ಯರು ಪಾಲ್ಗೊಳ್ಳುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಾಮೂಹಿಕ ವಿವಾಹಕ್ಕೆ ಆರಂಭದಲ್ಲಿ ಹೆಚ್ಚಿನ ಪ್ರತಿಕ್ರಿಯೆ ಬಂದಿರಲಿಲ್ಲ. 101 ಜೋಡಿ ವಿವಾಹ ಮಾಡಲು ನಿರ್ಧರಿಸಲಾಗಿತ್ತು. ಇದರಲ್ಲಿ ಎಲ್ಲ ಜಾತಿಯವರೂ ಇದ್ದಾರೆ. ಮೂರ್ನಾಲ್ಕು ಜೋಡಿ ಅಂತರ್ಜಾತಿ ವಿವಾಹವೂ ನಡೆಯುತ್ತಿದೆ. ಅಂತಹ ಪ್ರಕರಣಗಳಲ್ಲಿ ಎರಡೂ ಕಡೆಯ ಪಾಲಕರು ಆಗಮಿಸಿ ಒಪ್ಪಿಗೆ ಸೂಚಿಸಿದ್ದಾರೆ ಎಂದರು.
ಮಂಟಪದಲ್ಲಿ 33 ಜೋಡಿ ಪರಿಶಿಷ್ಟ ಜಾತಿ, ಪಂಗಡದವರೇ ಇದ್ದಾರೆ. ಇನ್ನುಳಿದಂತೆ ಕುರುಬ, ದೇವಾಂಗ, ಮಡಿವಾಳ, ವೀರಶೈವ, ಮರಾಠ, ಬೋವಿ, ಬಂಜಾರ ಸಮುದಾಯದವರಿದ್ದಾರೆ.
ಅಂದು ಬೆಳಗ್ಗೆ 8ಕ್ಕೆ ವಧು-ವರರ ಕಡೆಯವರು ಆಗಮಿಸುತ್ತಾರೆ. 10.30ಕ್ಕೆ ವಿವಾಹ ಸಮಾರಂಭ ನಡೆಯಲಿದೆ. ಶಿವಮೊಗ್ಗ ಮಾತ್ರವಲ್ಲದೆ ಹೊರ ಜಿಲ್ಲೆಯವರೂ ಇದ್ದಾರೆ. ವಿವಾಹದ ಬಳಿಕ ಮಠಾಧೀಶರು ಆಶೀರ್ವಚನ ನೀಡುವರು ಎಂದು ತಿಳಿಸಿದರು.
ಟ್ರಸ್ಟ್‌ನ ಧರ್ಮದರ್ಶಿ ಮಂಜುಳಾ ಮಂಜುನಾಥ ಮಾತನಾಡಿ, ಮಗಳ ಮದುವೆ ವೇಳೆ ಸಾಮೂಹಿಕ ವಿವಾಹ ಮಾಡುತ್ತಿರುವುದು ಸಂತಸ ತಂದಿದೆ. ಮೊದಲು ಬೀಗರನ್ನು ಕೇಳಿದಾಗ ಖುಷಿಯಿಂದ ಒಪ್ಪಿಗೆ ಸೂಚಿಸಿದರು. ಇದಕ್ಕೆ ಎಲ್ಲರೂ ಬೆನ್ನೆಲುಬಾಗಿ ನಿಂತಿದ್ದಾರೆ ಎಂದರು.
ಸಾಮೂಹಿಕ ವಿವಾಹದ ಸಂಚಾಲಕ ಕೆ.ಜಿ.ಕುಮಾರಸ್ವಾಮಿ, ಬಿ.ಮಧುಸೂದನ್, ಶಶಿಧರ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
MLC Ayanur Manjunath’s Daughter to get married in Mass Marriage in Shimoga. CM BS yedyurappa participates in the event.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422