SHIVAMOGGA LIVE NEWS | 10 JANUARY 2025
ಶಿವಮೊಗ್ಗ : ನವಜಾತ ಶಿಶುವೊಂದನ್ನು (Baby) ಕಟುಕ ತಾಯಿ ಕೈ ಚೀಲದಲ್ಲಿ ಹಾಕಿ ರಸ್ತೆ ಬದಿ ಇಟ್ಟು ಹೋಗಿದ್ದಾಳೆ. ಮಗವನ್ನು ಗಮನಿಸಿದ ಸ್ಥಳೀಯರು ಕೂಡಲೆ ಮಕ್ಕಳು ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ.
ಶಿವಮೊಗ್ಗ – ಸಾಗರ ರಸ್ತೆಯ ಶ್ರೀರಾಮಪುರ ಬಳಿ ನವಜಾತ ಶಿಶು ಪತ್ತೆಯಾಗಿದೆ. ಒಂದು ದಿನದ ಹಿಂದಷ್ಟೆ ಜನಿಸಿರುವ ಮಗು ಎಂದು ಹೇಳಲಾಗುತ್ತಿದೆ. ವೃದ್ಧೆಯೊಬ್ಬರು ಮಗುವನ್ನು ರಕ್ಷಿಸಿ ಸ್ನಾನ ಮಾಡಿಸಿ, ರಕ್ಷಣೆ ಮಾಡಿದ್ದಾರೆ. ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ.
ಮೆಗ್ಗಾನ್ ಆಸ್ಪತ್ರೆಯ ಮಕ್ಕಳು ಮತ್ತು ಹರಿಗೆ ವಿಭಾಗಕ್ಕೆ ಮಗುವನ್ನು ದಾಖಲು ಮಾಡಲಾಗಿದೆ. ಸದ್ಯ ಮಗು ಆರೋಗ್ಯವಾಗಿದೆ. ಆಸ್ಪತ್ರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಅಧಿಕಾರಿಗಳು, ಮಕ್ಕಳ ಸಹಾಯವಾಣಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಇದನ್ನೂ ಓದಿ » ಆಲ್ಕೊಳ ಸಮೀಪ ಆಳದ ಚಾನಲ್‌ಗೆ ಬಿದ್ದ ಕುದುರೆ, ಜೀವದ ಹಂಗು ತೊರೆದು ರಕ್ಷಣೆ, ಹೇಗಿತ್ತು ಕಾರ್ಯಾಚರಣೆ?