| No.1 News Website |
| ಶಿವಮೊಗ್ಗ ಲೈವ್ ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್ ಹೊಂದಿರುವ ವೆಬ್‌ಸೈಟ್. ನೀವು ನಮ್ಮ ವಾಟ್ಸಪ್ ಗ್ರೂಪ್ ಸೇರಲು » ಇಲ್ಲಿ ಕ್ಲಿಕ್ ಮಾಡಿ. |
![]()
ಶಿವಮೊಗ್ಗ ಲೈವ್.ಕಾಂ | SHIMOGA | 26 ಡಿಸೆಂಬರ್ 2019
ಕಂಕಣ ಸೂರ್ಯಗ್ರಹಣದ ಪರಿಣಾಮ ಇವತ್ತು ಬೆಳಗ್ಗೆ ಶಿವಮೊಗ್ಗ ನಗರ ಬಿಕೋ ಅನ್ನುತ್ತಿತ್ತು. ಬಂದ್ ವಾತಾವರಣ ನಿರ್ಮಾಣವಾಗಿತ್ತು. ಬೆಳಗ್ಗೆ 11 ಗಂಟೆಯಾದರು ರಸ್ತೆಯಲ್ಲಿ ವಾಹನ ಸಂಚಾರವಿಲ್ಲ, ಅಂಗಡಿಗಳು ತೆಗೆದಿಲ್ಲ, ಸ್ಕೂಲು ಕಾಲೇಜುಗಳಲ್ಲಿ ಮಕ್ಕಳಿಲ್ಲ, ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದ ಸ್ಥಿತಿ ನಿರ್ಮಾಣವಾಗಿತ್ತು.
ಎಲ್ಲೆಲ್ಲಿ ಹೇಗಿತ್ತು ಪರಿಸ್ಥಿತಿ?
ಕಚೇರಿಗಳು, ಸ್ಕೂಲು, ಕಾಲೇಜಿನ ಟೈಮ್ ಆಗಿರುವುದರಿಂದ ಬೆಳಗ್ಗೆ 9 ಗಂಟೆ ಹೊತ್ತಿಗೆ ಶಿವಮೊಗ್ಗ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ. ಆದರೆ ಇವತ್ತು ಖಾಸಗಿ ಮತ್ತು ಸರ್ಕಾರಿ ಬಸ್ ನಿಲ್ದಾಣಗಳು ಬಿಕೋ ಅನ್ನುತ್ತಿದ್ದವು. ಖಾಸಗಿ ಬಸ್ ನಿಲ್ದಾಣದಲ್ಲಿ 10 ಗಂಟೆಯಾದರೂ ಜನರಿರಲಿಲ್ಲ. ಬಸ್ಸುಗಳು ಖಾಲಿ ಖಾಲಿಯಾಗಿ ತೆರಳುತ್ತಿದ್ದವು.

ಇವತ್ತು ಬಸ್ಸಿದೆ ಜನಾನೇ ಇಲ್ಲ..!
ಬೆಳಗ್ಗೆ ಹೊತ್ತು ಸರ್ಕಾರಿ ಬಸ್ ನಿಲ್ದಾಣದಲ್ಲಿ ಭದ್ರಾವತಿ ಕಡೆಗೆ ತೆರಳುವ ಬಸ್ಸುಗಳು ನಿಲ್ಲುವ ಜಾಗದಲ್ಲಿ ಭಾರೀ ಜನರಿರುತ್ತಾರೆ. ಪ್ರತಿ ಬಸ್ಸು ಭರ್ತಿಯಾಗಿ ತೆರಳುತ್ತಿತ್ತು. ಇವತ್ತು ಶಿವಮೊಗ್ಗ – ಭದ್ರಾವತಿ ಬಸ್ಸುಗಳು ಸಾಲುಗಟ್ಟಿ ನಿಂತಿದ್ದವು. ಆದರೆ ಬಸ್ಸು ಹತ್ತಲು ಪ್ರಯಾಣಿಕರೆ ಇರಲಿಲ್ಲ. ಪ್ರತಿ ಬಸ್ಸಿನಲ್ಲೂ ಮೂರ್ನಾಲ್ಕು ಪ್ರಯಾಣಿಕರಷ್ಟೇ ಕಾಣಿಸುತ್ತಿದ್ದರು.


ಗಾಂಧಿ ಬಜಾರ್’ನಲ್ಲಿ ಜನರಿಲ್ಲ
ಬೆಳಗ್ಗೆಯಿಂದ ರಾತ್ರಿವರೆಗೂ ಗಾಂಧಿ ಬಜಾರ್ ಗಿಜಿಗುಡುತ್ತಲೇ ಇರುತ್ತದೆ. ಆದರೆ ಇವತ್ತು ಬೆಳಗ್ಗೆ 11 ಗಂಟೆಯಾದರೂ ಗಾಂಧಿ ಬಜಾರ್ ಖಾಲಿ ಖಾಲಿ ಕಾಣುತ್ತಿತ್ತು. ಕೆಲವು ಅಂಗಡಿಗಳಷ್ಟೇ ತೆರೆದಿದ್ದವು.

ಬಿ.ಹೆಚ್.ರೋಡಲ್ಲಿ ವಾಹನಗಳಿಲ್ಲ
ಶಿವಮೊಗ್ಗ ನಗರದೊಳಗಿನ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಬಹಳ ಕಡಿಮೆ ಇತ್ತು. ಬಿ.ಹೆಚ್.ರಸ್ತೆ, ನೆಹರು ರಸ್ತೆ, ಸವಳಂಗ ರಸ್ತೆ ಸೇರಿದಂತೆ ಎಲ್ಲ ಪ್ರಮುಖ ರಸ್ತೆಗಳಲ್ಲೂ ವಾಹನಗಳಿರಲಿಲ್ಲ. ಸಿಟಿ ಬಸ್, ಸರ್ಕಾರಿ ಬಸ್ಸುಗಳು, ಕೆಲವು ಆಟೋ, ಕಾರು, ಲಾರಿಗಳು, ಕೆಲವೇ ಕೆಲವು ದ್ವಿಚಕ್ರ ವಾಹನಗಳು ರಸ್ತೆಗಿಳಿದಿದ್ದವು.

ಅಂಗಡಿಗಳು ಬಂದ್, ಹೊಟೇಲ್’ಗಳು ಇಲ್ಲ
ಗ್ರಹಣದ ಪರಿಣಾಮ ಶಿವಮೊಗ್ಗ ನಗರದ ಬಹುತೇಕ ಅಂಗಡಿಗಳು ಕ್ಲೋಸ್ ಆಗಿದ್ದವು. ಸಾಮಾನ್ಯವಾಗಿ ಬೆಳಗಿನ ಜಾವದಲ್ಲೇ ತೆರೆಯುತ್ತಿದ್ದ ಹಲವು ಹೊಟೇಲ್’ಗಳು, ಟೀ, ಕಾಫಿ ಅಂಗಿಡಗಳ ಬಾಗಿಲು ಕೂಡ ಕ್ಲೋಸ್ ಆಗಿತ್ತು. ಇನ್ನು, ತೆರೆದಿದ್ದ ಕೆಲವೇ ಕೆಲವು ಹೊಟೇಲ್’ಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿತ್ತು.

ಕೋರ್ಟು, ಡಿ.ಸಿ.ಆಫೀಸ್’ನಲ್ಲೂ ಜನರಿಲ್ಲ
ಜನರಷ್ಟೆ ಅಲ್ಲ, ಸರ್ಕಾರಿ ಕಚೇರಿ, ಕೋರ್ಟಿಗು ಗ್ರಹಣದ ಬಿಸಿ ತಟ್ಟಿತ್ತು. ಅಧಿಕಾರಿಗಳು ಮತ್ತು ಜನರು ಕೂಡ ಕೋರ್ಟು, ಕಚೇರಿಗಳಿಗೆ ಬಂದಿರಲಿಲ್ಲ. ಬೆಳಗ್ಗೆ 10.30 ಆದರೂ ಜಿಲ್ಲಾಧಿಕಾರಿ ಕಚೇರಿ ಆವರಣ ಖಾಲಿ ಖಾಲಿಯಾಗಿತ್ತು. ಪಾರ್ಕಿಂಗ್’ನಲ್ಲಿ ವಾಹನ ಸಂಖ್ಯೆ ತುಂಬಾ ವಿರಳವಾಗಿತ್ತು.

ಸ್ಕೂಲು, ಕಾಲೇಜುಗಳಲ್ಲಿ ಮಕ್ಕಳಿಲ್ಲ
ಗ್ರಹಣದ ಪರಿಣಾಮ ಸ್ಕೂಲು, ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇತ್ತು. ಕೆಲವು ಶಾಲೆ, ಕಾಲೇಜುಗಳಲ್ಲಿ ಉಪನ್ಯಾಸಕರು ಗೈರಾಗಿದ್ದರು.



ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | shivamoggalive@gmail.com
ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್ ಮೇಲೆ ಕ್ಲಿಕ್ ಮಾಡಿ, ಸುದ್ದಿ ಓದಿ.
- ಕೋಟೆ ದೇವಸ್ಥಾನದಲ್ಲಿ 30 ದಿನ ಸೀತಾಕಲ್ಯಾಣ ಶತಮಾನೋತ್ಸವ, ಏನೇನೆಲ್ಲ ಕಾರ್ಯಕ್ರಮ ಇರಲಿದೆ?
- BREAKING NEWS – ಶಿವಮೊಗ್ಗದ ಖ್ಯಾತ ಡಾಕ್ಟರ್ ಮತ್ತು ಪುತ್ರ ನೇಣಿಗೆ ಶರಣು
- ಬಿಸ್ಕತ್ತು, ಕೇಕ್, ಪಿಜ್ಜಾ, ಬೇಕರಿ ಉತ್ಪನ್ನಗಳ ತಯಾರಿಕೆ ತರಬೇತಿ, ಯಾರೆಲ್ಲ ಭಾಗವಹಿಸಬಹುದು?
- ಕ್ರೆಡಿಟ್ ಕಾರ್ಡ್ನಿಂದ ಹಣ ಕಡಿತ, ಎಸ್ಬಿಐಗೆ ಬಿಸಿ ಮುಟ್ಟಿಸಿದ ಶಿವಮೊಗ್ಗ ಗ್ರಾಹಕ ನ್ಯಾಯಾಲಯ
- ಶಿಕಾರಿಪುರದಲ್ಲಿ ಎತ್ತಿನಗಾಡಿ ಏರಿ ಸರ್ಕಾರದ ವಿರುದ್ಧ ವಿಜಯೇಂದ್ರ ಗುಟುರು, ಏನೇನು ಹೇಳಿದರು?
- ಶಿವಮೊಗ್ಗ ಸಿಟಿಯಲ್ಲಿ ಕಾಲೇಜು ಬಸ್ ಅಡ್ಡಗಟ್ಟಿದ ಅಪರಿಚಿತರು, ಮುಂದೇನಾಯ್ತು?
- BREAKING NEWS – ಶಿವಮೊಗ್ಗದ ಪ್ರಯಾಣಿಕರಿಗು ತಟ್ಟಿದ ಇಂಡಿಗೋ ರದ್ದು ಬಿಸಿ
- BREAKING NEWS – ಶಿವಮೊಗ್ಗ ಜಿಲ್ಲಾಧಿಕಾರಿ ಕಾರು ಜಪ್ತಿಗೆ ಕೋರ್ಟ್ ಆದೇಶ, ಯಾಕೆ?
![]()