ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 4 ನವೆಂಬರ್ 2019
ಲಂಡನ್’ನಿಂದ ಶಿವಮೊಗ್ಗಕ್ಕೆ ತಂದು ಒಂದೂವರೆ ವರ್ಷವಾದರು ಬಸವಣ್ಣನ ಪ್ರತಿಮೆ ಸ್ಥಾಪನೆಗೆ ಮಹಾನಗರ ಪಾಲಿಕೆ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ, ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ವಿಭಿನ್ನವಾಗಿ ಪ್ರತಿಭಟನೆ ನಡೆಸಲಾಯಿತು.
ಮಹಾನಗರ ಪಾಲಿಕೆ ಸದಸ್ಯ ಹೆಚ್.ಸಿ.ಯೋಗೇಶ್, ಬಸವಣ್ಣನ ವೇಷ ಧರಿಸಿ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಡಿವಿಎಸ್ ಕಾಲೇಜು ಸರ್ಕಲ್’ನಿಂದ ಮೆರವಣಿಗೆ ಮೂಲಕ ಬಂದು ಮಹಾನಗರ ಪಾಲಿಕೆ ಮೇಯರ್ ಲತಾ ಗಣೇಶ್ ಅವರಿಗೆ ಮನವಿ ಸಲ್ಲಿಸಿದರು.
ಮಹಾಸಭಾ ಅಧ್ಯಕ್ಷ ರುದ್ರಮುನಿ, ಪ್ರಧಾನ ಕಾರ್ಯದರ್ಶಿ ಮಹೇಶ ಮೂರ್ತಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪಾಲಿಕೆ ಸಭೆಗೆ ಬಸವಣ್ಣನ ಎಂಟ್ರಿ
ಇವತ್ತು ಮಹಾನಗರ ಪಾಲಿಕೆ ಸಾಮಾನ್ಯ ಸಭೆ ನಡೆಯುತ್ತಿತ್ತು. ಪ್ರತಭಟನೆಯಲ್ಲಿ ಬಸವಣ್ಣನ ವೇಷ ಧರಿಸಿ ಬಂದಿದ್ದ ಹೆಚ್.ಸಿ.ಯೋಗೇಶ್ ಅವರು ಸಭೆಗೆ ಬಂದರು. ಅವರ ವೇಷ ಗಮನಿಸಿದ ಪಾಲಿಕೆ ಸದಸ್ಯರು ಪುಳಕಿತರಾದರು. ಕೆಲವರು ಯೋಗೇಶ್ ಅವರೊಂದಿಗೆ ನಿಂತು ಫೋಟೊ ಕ್ಲಿಕ್ಕಿಸಿಕೊಂಡರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422