ಕೊನೆಗೂ ಅನಾವರಣವಾಯ್ತು ಬಸವೇಶ್ವರರ ಪುತ್ಥಳಿ, ಲಂಡನ್ನಲ್ಲಿ ಮಾತ್ರವಿದೆ ಇಂತಹ ಪ್ರತಿಮೆ, ಇದರ ಬಗ್ಗೆ ಗೊತ್ತಿರಬೇಕಾದ 10 ವಿಚಾರ ಇಲ್ಲಿದೆ

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ಜುಲೈ 2021

ಲಂಡನ್‍ನಿಂದ ಶಿವಮೊಗ್ಗಕ್ಕೆ ಬಂದಿದ್ದ ಜಗಜ್ಯೋತಿ ಬಸವೇಶ್ವರರ ಪುತ್ಥಳಿ ಕೊನೆಗೂ ಅನಾವರಣವಾಗಿದೆ. ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಿಂದ ವರ್ಚುವಲ್‍ ವಿಡಿಯೋ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಸವೇಶ್ವರ ಪುತ್ಥಳಿಯನ್ನು ಅನಾವರಣಗೊಳಿಸಿದರು.

ಇದೆ ಸಂದರ್ಭ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಮಾನತೆ, ಸಮ ಸಮಜಾದ ತತ್ವವನ್ನು ಸಾರಿದವರು. ಶ್ರಮಿಕ ಸಮಾಜದವರಿಗೆ ಸಮಾನತೆ ಬಗ್ಗೆ 12ನೇ ಶತಮಾನದಲ್ಲೇ ಜಗತ್ತಿಗೆ ತಿಳಿಸಿದ್ದವರು. ಅವರ ಪ್ರತಿಮೆ ಅನಾವರಣ ಆಗುತ್ತಿರುವುದು ಸಂತೋಷವನ್ನುಂಟು ಮಾಡಿದೆ ಎಂದು ತಿಳಿಸಿದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ಶರಣ ಪರಂಪರಯೇ ಇದೆ. ಇಲ್ಲಿ ಬಸವಣ್ಣನವರ ಪುತ್ಥಳಿ ಅನಾವರಣಗೊಳ್ಳುತ್ತಿರುವುದು ನಮ್ಮ ಸೌಭಾಗ್ಯ. ಇದೊಂದು ಪುಣ್ಯದ ಕೆಲಸವಾಗಿದೆ ಎಂದರು.

ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಸರ್ವ ಜಾತಿಯವರು ಸಹೋದರರಂತೆ ಬಾಳುತ್ತಿದ್ದಾರೆ. ಬಸವಣ್ಣನವರ ಪುತ್ಥಳಿ ಇಲ್ಲಿ ಪ್ರತಿಷ್ಠಾಪನೆ ಆಗುತ್ತಿರುವುದು ಹಮ್ಮೆಯ ವಿಷಯವಾಗಿದೆ ಎಂದರು.

ಈ ಪುತ್ಥಳಿ ಬಗ್ಗೆ ಗೊತ್ತಿರಬೇಕಾದ 10 ಪಾಯಿಂಟ್ ಇಲ್ಲಿದೆ

1 – ಲಂಡನ್‍ ದೇಶದ ಲ್ಯಾಂಬೆತ್‍ ನಗರದಲ್ಲಿ ಥೇಮ್ಸ್ ನದಿ ದಂಡೆ ಮೇಲೆ, ಜಗಜ್ಯೋತಿ ಬಸವೇಶ್ವರರ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ. ಅಲ್ಲಿನ ಮೇಯರ್ ಆಗಿದ್ದ ನೀರಜ್ ಪಟೇಲ್ ಅವರು ಈ ಬಸವೇಶ್ವರರ ಪುತ್ಥಳಿಯನ್ನು ಮಾಡಿಸಿದ್ದರು.

2 – 2015ರ ನವೆಂಬರ್ 14ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಲಂಡನ್ ಭೇಟಿ ವೇಳೆ ಪುತ್ಥಳಿಯ ಅನಾವರಣ ಮಾಡಿದ್ದರು.

3 – ನೀರಜ್ ಪಟೇಲ್ ಅವರು ಒಂದೇ ಮಾದರಿಯ ಎರಡು ಪುತ್ಥಳಿಗಳನ್ನು ಮಾಡಿಸಿದ್ದರು. ಲಂಡನ್‍ನಲ್ಲಿ ಒಂದು ಪುತ್ಥಳಿಯ ಪ್ರತಿಷ್ಠಾಪನೆ ಮಾಡಲಾಗಿದ್ದು, ಎರಡನೆ ಪುತ್ಥಳಿಯನ್ನು ಶಿವಮೊಗ್ಗ ನಗರಕ್ಕೆ ಕೊಡುಗೆಯಾಗಿ ನೀಡಿದ್ದರು. 2018ರ ನವೆಂಬರ್ 22ರಂದು ಈ ಪುತ್ಥಳಿ ಶಿವಮೊಗ್ಗಕ್ಕೆ ಆಗಮಿಸಿತ್ತು.

201910078 1160313744448534 8497670934895384150 n.jpg? nc cat=105&ccb=1 3& nc sid=730e14& nc ohc=sHo9IUZf8icAX 5M4v0&tn=XgSJ3kUX1No5RJvs& nc ht=scontent.fblr20 1

4 – ಶಿವಮೊಗ್ಗದ ಬೆಕ್ಕಿನಕಲ್ಮಠದಲ್ಲಿ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಮೆರವಣಿಗೆ ನಡೆಸಲಾಯಿತು. ಮಹಾನಗರ ಪಾಲಿಕೆಗೆ ಪುತ್ಥಳಿ ಹಸ್ತಾಂತರ ಮಾಡಲಾಯಿತು. ಆಗಿನಿಂದ ಈ ಪುತ್ಥಳಿ ಪಾಲಿಕೆ ಆವರಣದಲ್ಲಿ ಸೇಫ್‍ ಲಾಕರ್‍ನಲ್ಲಿ ಬಂಧಿಯಾಗಿತ್ತು.

5 – 2018-19ನೇ ಸಾಲಿನ ಬಜೆಟ್‍ನಲ್ಲಿ ಬಸವೇಶ್ವರರ ಪ್ರತಿಮೆ ಸ್ಥಾಪನೆಗೆ ಮಹಾನಗರ ಪಾಲಿಕೆ 25 ಲಕ್ಷ ರೂ. ಅನುದಾನವನ್ನು ಮೀಸಲಿಟ್ಟಿತ್ತು.

6 – ಪುತ್ಥಳಿ ಸ್ಥಾಪನೆ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಆದರೆ ನ್ಯಾಯಾಲದ ನಿರ್ದೇಶನದ ಹಿನ್ನೆಲೆ ಈ ಪ್ರಸ್ತಾನೆ ಹಿಂದಕ್ಕೆ ಬಂದಿತ್ತು.

214759725 1434047390290010 3011405839562841066 n.jpg? nc cat=111&ccb=1 3& nc sid=730e14& nc ohc=rm2mkQgPMxkAX8C R f& nc ht=scontent.fblr20 1

7 – ಸಾರ್ವಜನಿಕ ಸ್ಥಳದಲ್ಲಿ ಪುತ್ಥಳಿಗಳ ಸ್ಥಾಪನೆಗೆ ನ್ಯಾಯಾಲಯ ಅವಕಾಶ ನಿರಾಕರಿಸಿದೆ. ಈ ನಿರ್ದೇಶನದ ಹಿನ್ನೆಲೆಯಲ್ಲಿ ಬಸವೇಶ್ವರರ ಪುತ್ಥಳಿ ಪಾಲಿಕೆಯಲ್ಲೇ ಉಳಿದಿತ್ತು.

8 – ಪುತ್ಥಳಿ ಸ್ಥಾಪನೆ ಮಾಡವಂತೆ ಶಿವಮೊಗ್ಗದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಕಾರ್ಪೊರೇಟರ್ ಹೆಚ್.ಸಿ.ಯೋಗೇಶ್ ಅವರು ಒಮ್ಮೆ ಬಸವೇಶ್ವರರಂತೆ ಡ್ರೆಸ್ ಧರಿಸಿ ಪಾದಯಾತ್ರೆ ಮಾಡಿದ್ದರು.

9 – ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಸವೇಶ್ವರರ ಪುತ್ಥಳಿ ಸ್ಥಾಪನೆ ಸಂಬಂಧ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದರು. ಅದರಂತೆ ಕಳೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

10 – ಸಂಪುಟದಲ್ಲಿ ಒಪ್ಪಿಗೆ ಸಿಗುತ್ತಿದ್ದಂತೆ ಗಾಂಧಿ ಪಾರ್ಕ್ ಮುಂಭಾಗ ಸ್ಥಳ ಗುರುತಿಸಿ, ಮಹಾನಗರ ಪಾಲಿಕೆ ವತಿಯಿಂದ ಬಸವೇಶ್ವರರ ಪುತ್ಥಳಿ ಸ್ಥಾಪಿಸಲಾಯಿತು. ಶುಕ್ರವಾರ ಪಾಲಿಕೆ ಆವರಣದಿಂದ ಪುತ್ಥಳಿಯನ್ನು ಮೆರವಣಿಗೆ ಮೂಲಕ ತಂದು ಪ್ರತಿಷ್ಠಾಪಿಸಲಾಯಿತು. ಇವತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪುತ್ಥಳಿಯ ಅನಾವರಣ ಮಾಡಿದರು.

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

Leave a Comment