BREAKING NEWS – ಭದ್ರಾ ನೀರು ನಿರ್ವಹಣಾ ಪ್ರಾಧಿಕಾರ ಸಭೆ, ಯಾರೆಲ್ಲ ಭಾಗಿಯಾಗಿದ್ದಾರೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 6 SEPTEMBER 2023

SHIMOGA : ಭದ್ರಾ ಜಲಾಶಯದಿಂದ (Bhadra Dam) ನೀರು ಹರಿಸುವ ವಿಚಾರ ಕುರಿತು ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ನೀರು ನಿರ್ವಹಣಾ ಸಲಹಾ ಸಮಿತಿ ಸಭೆ ಆರಂಭವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಮಲವಗೊಪ್ಪದ ಭದ್ರಾ ಕಾಡಾ ಕಚೇರಿಯಲ್ಲಿ ಸಭೆ ನಡೆಯುತ್ತಿದೆ.

ಯಾರೆಲ್ಲ ಭಾಗಿಯಾಗಿದ್ದಾರೆ?
ಸಭೆಯಲ್ಲಿ ಶಿವಮೊಗ್ಗ, ದಾವಣಗೆರೆ ಜಿಲ್ಲೆಯ ಕೆಲ ಶಾಸಕರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒಗಳು, ಉಪ ವಿಭಾಗಾಧಿಕಾರಿಗಳು, ರೈತ ಮುಖಂಡರು, ಅಧಿಕಾರಿಗಳು ಭಾಗವಹಿಸಿದ್ದಾರೆ.

AVvXsEh23M3GmpfLkoWOR3oj42ZYNdR82ptiWxZNM55hwuo2BBS8BiN42NFyHcyTiUMq9HyzpKOyLXRAYO7gJX6PWTBfHO54V 86CFCvTpjfK1q3hVxZEg1j6hNIl3XHxugje0pNeAIrtU9 PYn1NFDYpiiiUSm3gQvu5JX3BpjqvBMkCOcsDLt5NT1F7P46vE X

ಮೂರು ಜಿಲ್ಲೆಯ ರೈತರ ನಿರೀಕ್ಷೆ
ಮುಂಗಾರ ಹಂಗಾಮಿಗೆ ಭದ್ರಾ ಜಲಾಶಯದಿಂದ 100 ದಿನ ನೀರು ಹರಿಸಲಾಗುತ್ತಿದೆ. ಈಗ ನೀರು ಹರಿಸಿದರೆ ಬೇಸಿಗೆ ಹಂಗಾಮಿಗೆ ನೀರು ಉಳಿಯುವುದಿಲ್ಲ. ಇದರಿಂದ ಅಚ್ಚಕಟ್ಟು ಪ್ರದೇಶದ ರೈತರಿಗೆ ಸಮಸ್ಯೆ ಆಗಲಿದೆ. ನೀರು ಹರಿಸುವುದನ್ನು ಕೂಡಲೆ ನಿಲ್ಲಿಸಬೇಕು ಎಂದು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ದಾವಣಗೆರೆ ಭಾಗದ ರೈತರು ನೀರು ನಿಲ್ಲಿಸದಂತೆ ಆಗ್ರಹಿಸುತ್ತಿದ್ದಾರೆ. ವಿವಾದದ ಹಿನ್ನೆಲೆ ಅಚ್ಚುಕಟ್ಟು ಅಚ್ಚುಕಟ್ಟು ಪ್ರಾಧಿಕಾರದ ನೀರು ನಿರ್ವಹಣೆ ಸಲಹಾ ಸಮಿತಿ ಸಭೆ ಆಯೋಜಿಸಲಾಗಿದೆ. ಸಭೆಯ ನಿರ್ಧಾರದತ್ತ ಮೂರು ಜಿಲ್ಲೆಯ ರೈತರು ಚಿತ್ತ ನೆಟ್ಟಿದ್ದಾರೆ.

AVvXsEhgAS4BPDleDrcmq2Cx2WdPTw9fq3nB3wkBnH9qhD4l6gvX6tA6IjZmc5Qg3dOP7S5xB9Q4fLeJLlWT vicnbZsKHwIEdMFPweU8msKuQecZ x0GIq8SN883pqYSb5d7zT6ABaN0tG d5Ngdm6Cgtd2is9S6ihg

ಕಾಡಾ ಕಚೇರಿ ಮುಂದೆ ಹೋರಾಟ
ಇನ್ನು, ಸಭೆ ಹಿನ್ನೆಲೆ ಭದ್ರಾ ಕಾಡಾ ಕಚೇರಿ ಮುಂಭಾಗ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಆದ್ದರಿಂದ ಕಾಡಾ ಕಚೇರಿ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment