ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 27 ಸೆಪ್ಟೆಂಬರ್ 2021
ಸಂಯುಕ್ತ ಕಿಸಾನ್ ಮಂಚ್ ಕರೆ ನೀಡಿರುವ ಭಾರತ್ ಬಂದ್’ಗೆ ಶಿವಮೊಗ್ಗದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಸ್, ಆಟೊ, ಟ್ರಾಕ್ಸ್ ಸಂಚಾರ ಎಂದಿನಂತೆ ಇದೆ. ಜನಜೀವನದಲ್ಲೂ ಯಾವುದೇ ವ್ಯತ್ಯಾಸವಾಗಿಲ್ಲ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಭಾರತ್ ಬಂದ್’ಗೆ ಖಾಸಗಿ ಬಸ್ ಮಾಲೀಕರು, ಆಟೊ ಚಾಲಕರು ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಶಿವಮೊಗ್ಗ ನಗರದಲ್ಲಿ ಬೆಳಗ್ಗೆಯಿಂದ ಬಸ್ ಸಂಚಾರ ಎಂದಿನಂತೆ ಆರಂಭವಾಗಿದೆ.
ರಸ್ತೆಗಿಳಿದ ಸರ್ಕಾರಿ, ಖಾಸಗಿ ಬಸ್
ಖಾಸಗಿ ಬಸ್ಸುಗಳು ಶಿವಮೊಗ್ಗ ಜಿಲ್ಲೆಯ ಜೀವನಾಡಿಯಾಗಿವೆ. ಈ ಬಸ್ಸುಗಳ ಸಂಚಾರ ಎಂದಿನಂತೆ ಆರಂಭವಾಗಿದೆ. ಬೆಳಗ್ಗೆಯಿಂದಲೇ ಜಿಲ್ಲೆಯ ವಿವಿಧೆಡೆಗೆ ಬಸ್ಸುಗಳು ಸಂಚಾರ ಆರಂಭಿಸಿವೆ. ಇನ್ನು KSRTC ಬಸ್ಸುಗಳು ಕೂಡ ರಸ್ತೆಗಿಳಿದಿವೆ. ದೂರದೂರುಗಳಿಗೆ ಈಗಾಗಲೆ ಬಸ್ಸು ಸಂಚಾರ ಆರಂಭಿಸಿವೆ. ಎರಡೂ ನಿಲ್ದಾಣದಲ್ಲಿ ಪ್ರಯಾಣಿಕರು ದೊಡ್ಡ ಸಂಖ್ಯೆಯಲ್ಲಿದ್ದಾರೆ.
ಆಟೋ, ಟ್ರಾಕ್ಸ್ ಸಂಚಾರ ಶುರು
ಶಿವಮೊಗ್ಗ ನಗರದಲ್ಲಿ ಆಟೋ ಮತ್ತು ಟ್ರಾಕ್ಸ್ ಸಂಚಾರವು ಯಥಾಸ್ಥಿತಿಯಲ್ಲಿದೆ. ಆಟೋ ಮಾಲೀಕರು ಮತ್ತು ಚಾಲಕರು ನೈತಿಕ ಬೆಂಬಲ ಘೋಷಿಸಿದ್ದಾರೆ. ಹಾಗಾಗಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ನಗರದ ವಿವಿಧೆಡೆ ಆಟೋಗಳ ಸಂಚಾರ ಎಂದಿನಂತೆ ಇದೆ. ಇನ್ನು ಶಿವಮೊಗ – ಭದ್ರಾವತಿ ನಡುವೆ ಸಂಚರಿಸುವ ಟ್ರಾಕ್ಸ್’ಗಳು ಕೂಡ ರಸ್ತೆಗಿಳಿದಿವೆ. ಇವುಗಳ ಸಂಚಾರವು ಸಾಮಾನ್ಯ ದಿನದ ಹಾಗೆಯೇ ಇದೆ.
ಆಂಗಡಿಗಳ ಬಾಗಿಲು ಓಪನ್
ಶಿವಮೊಗ್ಗ ನಗರದಲ್ಲಿ ಬೆಳಗ್ಗೆಯಿಂದಲೇ ಅಂಗಡಿಗಳ ಬಾಗಿಲು ತೆಗೆಯಲಾಗಿದೆ. ವ್ಯಾಪಾರ, ವಹಿವಾಟು ಆರಂಭವಾಗಿದೆ. ವಿವಿಧ ಬಡಾವಣೆಗಳಲ್ಲಿನ ದಿನಸಿ ಅಂಗಡಿಗಳು, ಮೆಡಿಕಲ್ ಶಾಪ್’ಗಳು, ಹೊಟೇಲ್, ಕ್ಯಾಂಟೀನ್’ಗಳ ಬಾಗಿಲು ತೆಗೆದು ವ್ಯಾಪಾರ ಶುರು ಮಾಡಲಾಗಿದೆ. ಜನ ಜೀವನ ಕೂಡ ಎಂದಿನಂತೆಯೇ ಇದೆ.
ಉಳಿದಂತೆ ನೆಹರೂ ರಸ್ತೆ, ಗಾಂಧಿ ಬಜಾರ್, ಬಿ.ಹೆಚ್.ರಸ್ತೆಯಲ್ಲಿ ಬೆಳಗ್ಗೆ 10 ಗಂಟೆ ನಂತರ ವಹಿವಾಟು ಆರಂಭವಾಗಲಿದೆ. ಹಾಗಾಗಿ ಇಲ್ಲಿ ಅಂಗಡಿಗಳನ್ನು ಬಂದ್ ಆಗಿವೆ. ಇದರ ಹೊರತು ಶಿವಮೊಗ್ಗ ನಗರದಲ್ಲಿ ಜನಜೀವನ ಎಂದಿನಂತೆಯೇ ಇದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200