ಶಿವಮೊಗ್ಗದಲ್ಲಿ ರಸ್ತೆ ಬದಿ ನಿಂತಿದ್ದವನಿಗೆ ಬಂದು ಡಿಕ್ಕಿ ಹೊಡೆದ ಬೈಕ್, ಚಿಕಿತ್ಸೆ ವೆಚ್ಚ ನೀಡದ್ದಕ್ಕೆ ಕಂಪ್ಲೇಂಟ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 18 JANUARY 2023

SHIMOGA | ರಸ್ತೆ ಬದಿಯಲ್ಲಿ (road side) ಬೈಕ್ ನಿಲ್ಲಿಸಿಕೊಂಡು ಸ್ನೇಹಿತರೊಂದಿಗೆ ಮಾತನಾಡುತ್ತಿದ್ದ ಯುವಕನಿಗೆ ಎದುರಿನಿಂದ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಇಬ್ಬರು ಬೈಕ್ ಸವಾರರು ಗಾಯಗೊಂಡಿದ್ದಾರೆ.

Shimoga Map Graphics

ಶಿವಮೊಗ್ಗದ ಬೊಮ್ಮನಕಟ್ಟೆ ರೈಲ್ವೆ ಗೇಟ್ ಬಳಿ ಘಟನೆ ಸಂಭವಿಸಿದೆ. ಬೊಮ್ಮನಕಟ್ಟೆಯ ಸುನಿಲ್ (32) ಮತ್ತು ದಾವಣಗೆರೆಯ ಅರುಣ್ (27) ಗಾಯಗೊಂಡಿದ್ದಾರೆ.

ಹೇಗಾಯ್ತು ಘಟನೆ?

ಸುನಿಲ್ ಅವರ ತಾಯಿ ಊರಿಗೆ ಹೋಗಿದ್ದರು. ಆದ್ದರಿಂದ ರಾತ್ರಿ ಊಟ ಪಾರ್ಸಲ್ ತರಲು ಸುನಿಲ್ ಬೈಕಿನಲ್ಲಿ ತೆರಳಿದ್ದರು. ಬೊಮ್ಮನಕಟ್ಟೆ ಮುಖ್ಯ ರಸ್ತೆಯಲ್ಲಿ ಸ್ನೇಹಿತರು ಸಿಕ್ಕಿದ್ದರಿಂದ ಬೈಕ್ ನಿಲ್ಲಿಸಿಕೊಂಡು ರಸ್ತೆ ಬದಿಯಲ್ಲಿ (road side)ಸುನಿಲ್ ಮಾತನಾಡುತ್ತಿದ್ದರು. ಆಗ ರೈಲ್ವೆ ಗೇಟ್ ಕಡೆಯಿಂದ ವೇಗವಾಗಿ ಬಂದ ಸ್ಪ್ಲೆಂಡರ್ ಬೈಕು, ಸುನಿಲ್ ಬೈಕಿಗೆ ಡಿಕ್ಕಿ ಹೊಡೆದಿದೆ.

Shimoga Live 3 Million Views

ಸುನಿಲ್ ಬಲಗಾಲಿಗೆ ಗಾಯವಾಗಿದೆ. ಎದುರಿನಿಂದ ಬಂದು ಡಿಕ್ಕಿ ಹೊಡೆದ ಸ್ಪ್ಲೆಂಡರ್ ಬೈಕಿನ ಸವಾರ ಅರುಣ್ ಎಂಬಾತನಿಗು ಗಾಯವಾಗಿದೆ. ಇಬ್ಬರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ವೆಚ್ಚ ಭರಿಸುವುದಾಗಿ ಅರುಣ್ ಕಡೆಯವರು ತಿಳಿಸಿದ್ದರು. ಆದರೆ ಈತನಕ ಚಕಾರವೆತ್ತದ ಹಿನ್ನೆಲೆ ಸುನಿಲ್ ಕುಟುಂಬದವರು ದೂರು ನೀಡಿದ್ದಾರೆ.

ಇದನ್ನೂ ಓದಿ – ನಿಷೇಧಿತ ಸಂಘಟನೆ ಹೆಸರಿನಲ್ಲಿ ಇನ್‍ಸ್ಟಾಗ್ರಾಮ್ ಮೂಲಕ ಯುವಕನಿಗೆ ಬೆದರಿಕೆ, ಒಬ್ಬ ಅರೆಸ್ಟ್

ಶಿವಮೊಗ್ಗ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ –  ಶಿವಮೊಗ್ಗದ ಈ ಅಂಗಡಿಯ ಬಟ್ಟೆ ಆರೋಗ್ಯ ಕಾಪಾಡುತ್ತೆ, ಇದಕ್ಕೆ ವಿದೇಶದಲ್ಲೂ ಇದೆ ಭಾರಿ ಬೇಡಿಕೆ, ಎಲ್ಲಿದೆ ಅಂಗಡಿ?

road side

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment