ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಹೊರ ಬರುತ್ತಿದ್ದಂತೆ ದಂಗಾದ ವ್ಯಕ್ತಿ, ದೂರು ದಾಖಲು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 28 APRIL 2023

SHIMOGA : ರೈಲ್ವೆ ನಿಲ್ದಾಣದ ಮುಂದೆ ನಿಲ್ಲಿಸಿದ್ದ ಸ್ಪ್ಲೆಂಡರ್‌ ಪ್ಲಸ್‌ ಬೈಕ್‌ (Bike Theft) ಕಳ್ಳತನವಾಗಿದೆ. ಕಳ್ಳಹಳ್ಳಿಯ ನಿವೃತ್ತ ನೌಕರ ಶೇಖರಪ್ಪ ಎಂಬುವವರು ಬೈಕ್‌ ನಿಲ್ಲಿಸಿ ಬೆಂಗಳೂರಿಗೆ ಹೋಗಿ ರಾತ್ರಿ ಹಿಂತಿರುಗಿದಾಗ ಬೈಕ್‌ ನಾಪತ್ತೆಯಾಗಿತ್ತು.

ಶೇಖರಪ್ಪ ಅವರು ಜನಶತಾಬ್ದಿ ರೈಲಿಗೆ ಬೆಂಗಳೂರಿಗೆ ತೆರಳಿದ್ದರು. ತಮ್ಮ  ಬೈಕನ್ನು ರೈಲ್ವೆ ನಿಲ್ದಾಣದ ಮುಂದಿರುವ ಆಸ್ಪತ್ರೆಯ ತಡೆಗೋಡೆ ಪಕ್ಕದಲ್ಲಿ ನಿಲ್ಲಿಸಿದ್ದರು. ರಾತ್ರಿ 8 ಗಂಟೆಗೆ ಬೆಂಗಳೂರಿನಿಂದ ಹಿಂತಿರುಗಿದಾಗ ಬೈಕ್‌ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿದ ಅವರು, ಬಳಿಕ ಜಯನಗರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಹೆಂಡತಿ ಜೊತೆ ಲಾಡ್ಜ್‌ಗೆ ಬಂದ ವ್ಯಕ್ತಿ, ಬಾತ್‌ ರೂಂಗೆ ಹೋಗಿ ಹೊರ ಬಂದಾಗ ಕಾದಿತ್ತು ಶಾಕ್‌

shivamogga live news whatsappa number

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : April 28, 2023

Leave a Comment