ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ
SHIVAMOGGA LIVE NEWS | 7 DECEMBER 2023
SHIMOGA : ನಗರದ 100 ಅಡಿ ರಸ್ತೆಯಲ್ಲಿ ವೀಲಿಂಗ್ ಮಾಡಿದ ಆರೋಪದ ಹಿನ್ನೆಲೆ ಇಬ್ಬರು ಯುವಕರು ಮತ್ತು ಬೈಕ್ ಮಾಲೀಕನಿಗೆ ದಂಡ ವಿಧಿಸಲಾಗಿದೆ.
ಯಮಹಾ ಆರ್‌ಎಕ್ಸ್ ಬೈಕ್‌ನಲ್ಲಿ ಆಗಸ್ಟ್ 15ರಂದು ಇಬ್ಬರು ಯುವಕರು 100 ಅಡಿ ರಸ್ತೆಯಲ್ಲಿ ವೀಲಿಂಗ್ ಮಾಡಿದ್ದರು. ಅಪಾಯಕಾರಿ ಸ್ಥಿತಿಯಲ್ಲಿ ವಾಹನ ಚಲಾಯಿಸಿದ ಆರೋಪದ ಹಿನ್ನೆಲೆ ಪಶ್ಚಿಮ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪಿಎಸ್‌ಐ ತಿರುಮಲೇಶ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಧೀಶರಾದ ಮಾಯಪ್ಪ ಅವರು ಮೂವರಿಗೆ ದಂಡ ವಿಧಿಸಿದ್ದಾರೆ. ವೀಲಿಂಗ್ ಮಾಡಿದ ಇಲಿಯಾಸ್ ನಗರದ ಫೈಸಲ್ ಅಹ್ಮದ್‌ಗೆ 11 ಸಾವಿರ ರೂ., ಟ್ಯಾಂಕ್ ಮೊಹಲ್ಲಾದ ಸೋಫಿಯನ್ ಖಾನ್‌ಗೆ 8 ಸಾವಿರ ರೂ., ಬೈಕ್‌ನ ಮಾಲೀಕ ಇಲಿಯಾಸ್ ನಗರದ ಮೊಹಮ್ಮದ್ ಸೈಫುಲ್ಲಾಗೆ 4500 ರೂ. ಡಂಡ ವಿಧಿಸಲಾಗಿದೆ. ಕಿರಣ್ ಕುಮಾರ್ ಅವರು ಸರ್ಕಾರಿ ಅಭಿಯೋಜಕರಾಗಿ ವಾದಿಸಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ – ಅರಣ್ಯ ಇಲಾಖೆ ಅಧಿಕಾರಿಗಳಿಂದ ದಾಳಿ, ಮಾಲು ಸಹಿತ ನಾಲ್ವರು ಅರೆಸ್ಟ್


