‘ಸಹನೆಗು ಮಿತಿ ಇದೆ’, ವಾರ್ನಿಂಗ್‌ ನೀಡಿದ ಶಾಸಕ, ಕಾಂಗ್ರೆಸ್‌ ಚಿಹ್ನೆ ಬದಲಿಗೆ ಕಾರಣ ತಿಳಿಸಿದ ಸಂಸದ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS, 17 JANUARY 2025

ಶಿವಮೊಗ್ಗ : ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಗೋವುಗಳ ಕೆಚ್ಚಲು ಕೊಯ್ದ ಪ್ರಕರಣ ಖಂಡಿಸಿ, ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಬಿಜೆಪಿ ಮತ್ತು ಗೋ ರಕ್ಷಾ ಪರಿವಾರದ ಕಾರ್ಯಕರ್ತರು ಇವತ್ತು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ (Protest) ನಡೆಸಿದರು. ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಯಾರೆಲ್ಲ ಏನೆಲ್ಲ ಹೇಳಿದರು?

ಭಿನ್ನಮತ ಮುಚ್ಚಿ ಹಾಕಲು, ಅಧಿಕಾರ ಸುಭದ್ರಗೊಳಿಸಲು ಕಾಂಗ್ರೆಸ್‌ ಸರ್ಕಾರ ತುಷ್ಠೀಕರಣ ನೀತಿ ಅನುಸರಿಸುತ್ತಿದೆ. ಈ ಘಟನೆ ಅದೇ ಷಡ್ಯಂತ್ರದ ಭಾಗವಾಗಿದೆ. ನಂಜನಗೂಡಿನಲ್ಲಿ ದೇವರಿಗೆ ಬಿಟ್ಟಿದ್ದ ಹಸುವಿನ ಬಾಲ ತುಂಡರಿಸಲಾಗಿದೆ. ಹಿಂದು, ಮುಸ್ಲಿಮರ ಮಧ್ಯೆ ಬೆಂಕಿ ಹಚ್ಚಿ ಕಾಂಗ್ರೆಸ್‌ ಪಕ್ಷ ಬೇಳೆ ಬೇಯಿಸಿಕೊಳ್ಳಲು ಹೊರಟಿದೆ. ಈ ಹಿಂದೆ ಕಾಂಗ್ರೆಸ್‌ ಪಕ್ಷಕ್ಕೆ ಹಸು ಮತ್ತು ಕರುವಿನ ಚಿಹ್ನೆ ಇತ್ತು. ಯಾವಾಗ ಇವರು ಹಾಲು ಕುಡಿದು ವಿಷ ಕೊಡುತ್ತಾರೆ ಎಂದು ಅರಿವಾಯಿತೋ, ಚುನಾವಣಾ ಆಯೋಗ ಆ ಚಿಹ್ನೆಯನ್ನು ಕಸಿದುಕೊಂಡಿದೆ.

– ಬಿ.ವೈ.ರಾಘವೇಂದ್ರ, ಶಿವಮೊಗ್ಗ ಸಂಸದ

RED-LINE

BJP-protest-against-chamarajapete-issue

ಗೋ ಸಂರಕ್ಷಣೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ನಾವು ಮಾಡುತ್ತೇವೆ. ಸಹನೆ ನಮ್ಮ ದೌರ್ಬಲ್ಯವಲ್ಲ. ಮುಸ್ಲಿಮರು ನೆಮ್ಮದಿಯಿಂದ ಬಾಳಬೇಕಾದರೆ ಗೋ ಹತ್ಯೆ ನಿಲ್ಲಬೇಕು. ಹಿಂದೂಗಳು ತೀರ್ಮಾನ ಮಾಡಿದರೆ ನೀವು ತಡೆದುಕೊಳ್ಳಲು ಆಗುವುದಿಲ್ಲ.

– ಎಸ್‌.ಎನ್.ಚನ್ನಬಸಪ್ಪ, ಶಾಸಕ

RED-LINE

ಪ್ರತಿಭಟನೆಯಲ್ಲಿ ಪ್ರಮುಖರಾದ ನಾರಾಯಣ ವರ್ಣೇಕರ್‌, ದೇವರಾಜ್‌, ದತ್ತಾತ್ರಿ, ರಾಜೇಶ್‌ ಗೌಡ, ಆನಂದರಾವ್‌ ಜಾಧವ್‌, ಮಾಲತೇಶ್‌, ರಾಮೇಶ್‌ ಜಾಧವ್‌, ದೀನದಯಾಳ್‌, ಜ್ಞಾನೇಶ್ವರ್‌, ಸುರೇಖಾ ಮುರಳೀಧರ್‌ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.

ಇದನ್ನೂ ಓದಿ » ಕ್ವಿಂಟಾಲ್‌ಗಟ್ಟಲೆ ಅಡಿಕೆ ಕದ್ದಿದ್ದ ಮೂವರು ಅರೆಸ್ಟ್‌, ಏನೇನೆಲ್ಲ ವಶಕ್ಕೆ ಪಡೆಯಲಾಯ್ತು?

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment