ಶಿವಮೊಗ್ಗದಲ್ಲಿ ಬಸ್‌ ಸಿಗದೆ ಪ್ರಯಾಣಿಕರ ಪರದಾಟ, ರೂಟ್‌ ಗೊತ್ತಿಲ್ಲದೆ ಡ್ರೈವರ್‌ಗಳ ಪೇಚಾಟ, ಕಾರಣವೇನು?

SHIVAMOGGA LIVE NEWS | 10 MAY 2023

Shivamogga-Live-Number-1-Website

SHIMOGA : ಚುನಾವಣಾ ಕಾರ್ತವ್ಯಕ್ಕೆ ಕೆಎಸ್‌ಆರ್‌ಟಿಸಿ ಬಸ್ಸುಗಳನ್ನು (Bus) ನಿಯೋಜನೆ ಮಾಡಿರುವುದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಇನ್ನು, ಬಿಎಂಟಿಸಿ ಬಸ್ಸುಗಳು ಶಿವಮೊಗ್ಗದಲ್ಲಿ ಸಂಚರಿಸುತ್ತಿದ್ದು, ಚಾಲಕರು ಮಾರ್ಗ ಗೊತ್ತಾಗದೆ ಗೊಂದಲಕ್ಕೀಡಾಗಿದ್ದಾರೆ.

BMTC-Bus-to-Shimoga-during-Election

ವಿಧಾನಸಭೆ ಚುನಾವಣೆಗೆ ಶಿವಮೊಗ್ಗ ವಿಭಾಗದ ಕೆಎಸ್‌ಆರ್‌ಟಿಸಿ ಬಸ್ಸುಗಳನ್ನು ನಿಯೋಜನೆ ಮಾಡಲಾಗಿದೆ. ಇದರಿಂದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬಸ್‌ಗಳಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ.

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ಕಾದು ಕಾದು ಸುಸ್ತಾದ ಪ್ರಯಾಣಿಕರು

ಬೆಂಗಳೂರು, ದಾವಣಗೆರೆ ಸೇರಿದಂತೆ ವಿವಿಧೆಡೆಗೆ ತೆರಳಲು ಹೆಚ್ಚಿನ ಪ್ರಯಾಣಿಕರು ನಿಲ್ದಾಣಕ್ಕೆ ಆಗಮಿಸಿದ್ದಾರೆ. ಆದರೆ ಬಸ್ಸುಗಳು ಸಿಗದೆ ಗಂಟೆಗಟ್ಟಲೆ ಕಾದು ಹೈರಾಣಾಗಿದ್ದಾರೆ. ಗಂಟೆಗೊಂದು ಬಸ್‌ ಬರುತ್ತಿರುವುದರಿಂದ ಎಲ್ಲಾ ಸೀಟುಗಳು ಕ್ಷಣಮಾತ್ರದಲ್ಲಿ ಭರ್ತಿಯಾಗುತ್ತಿವೆ.

ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಮತದಾನ ಬಿರುಸು, ಯಾವ್ಯಾವ ಕ್ಷೇತ್ರದಲ್ಲಿ ಎಷ್ಟಾಗಿದೆ ವೋಟಿಂಗ್?

ʼದಾವಣಗೆರೆಯಲ್ಲಿ ಮತ ಚಲಾಯಿಸಲು ಹೋಗಬೇಕಿದೆ. ಆದರೆ ಎಷ್ಟೊತ್ತಿಗೋ ಒಂದೊಂದು ಬಸ್‌ (Bus) ಬರುತ್ತೆ. ಮಕ್ಕಳನ್ನು ಕಂಕುಳಲ್ಲಿ ಇಟ್ಟುಕೊಂಡು ಬಸ್‌ ಸೀಟ್‌ ಹಿಡಿಯೋದೇ ಕಷ್ಟವಾಗಿದೆʼ ಅನ್ನುತ್ತಾರೆ ಗೃಹಿಣಿ ಸವಿತಾ.

ಬೆಂಗಳೂರಿಗೆ ಬಿಎಂಟಿಸಿ ಬಸ್‌

ಇನ್ನು, ಬೆಂಗಳೂರಿನಿಂದ ಶಿವಮೊಗ್ಗ ರೂಟ್‌ನಲ್ಲಿ ಕೆಎಸ್‌ಅರ್‌ಟಿಸಿ ಬಸ್‌ಗಳ ಕೊರತೆ ಅಗಿದ್ದರಿಂದ ಬಿಎಂಟಿಸಿ ಬಸ್ಸುಗಳನ್ನು ನಿಯೋಜಿಸಲಾಗಿತ್ತು. ಇದೆ ಬಸ್ಸುಗಳು ಈಗ ಶಿವಮೊಗ್ಗ ಬೆಂಗಳೂರು ಮಾರ್ಗದಲ್ಲಿ ಸಂಚರಿಸುತ್ತಿವೆ. ಪ್ರಯಾಣಿಕರ ಸಂಖ್ಯೆ ಅಧಿಕವಾಗಿರುವುದರಿಂದ ಬಸ್ಸುಗಳು ಬಂದ ಕ್ಷಣ ಹೊತ್ತಲ್ಲೇ ಸೀಟುಗಳು ಭರ್ತಿಯಾಗುತ್ತಿವೆ.

BMTC bus to Shimoga city

ಟಿಕೆಟ್‌ ವಿಚಾರದಲ್ಲಿ ಗೊಂದಲ

ಇತ್ತ ಬಿಎಂಟಿಸಿ ಚಾಲಕರಿಗೆ ಶಿವಮೊಗ್ಗ – ಬೆಂಗಳೂರು ಮಾರ್ಗದ ಪರಿಚಯವಿಲ್ಲ. ಹಾಗಾಗಿ ಅಲ್ಲಲ್ಲಿ ಮಾರ್ಗ ಕೇಳಿಕೊಂಡು ತೆರಳುತ್ತಿದ್ದಾರೆ. ಇನ್ನು, ಬಿಎಂಟಿಸಿ ಬಸ್ಸುಗಳಲ್ಲಿ ವಿತರಣೆ ಮಾಡುತ್ತಿರುವ ಟಿಕೆಟ್‌ ಗೊಂದಲ ಮತ್ತು ಕಾನೂನು ಬಾಹಿರವಾಗಿದೆ. ಶಿವಮೊಗ್ಗ ಬೆಂಗಳೂರು ಅಥವಾ ಬೆಂಗಳೂರು ಶಿವಮೊಗ್ಗ ಎಂದು ಟಿಕೆಟ್‌ ವಿತರಣೆ ಮಾಡುವ ಬದಲು ಬೆಂಗಳೂರಿನ ರೂಟ್‌ನ ಟಿಕೆಟ್‌ಗಳನ್ನೇ ವಿತರಿಸಲಾಗುತ್ತಿದೆ.

ʼಬೆಂಗಳೂರು ಮಾರ್ಗದ ಬಸ್ಸುಗಳಲ್ಲಿ ಸಿಟಿ ಮಾರ್ಕೆಟ್‌ನ ಟಿಕೆಟ್‌ ಕೊಡಲಾಗುತ್ತಿದೆ. ಒಂದು ವೇಳೆ ಅವಘಡ ಸಂಭವಿಸಿದರೆ, ಈ ಟಿಕೆಟ್‌ ಬಳಸಿ ಇನ್ಷುರೆನ್ಸ್‌ ಪಡೆಯಲು ಆಗುವುದಿಲ್ಲ. ಬಸ್ಸುಗಳು ಇಲ್ಲದಿದ್ದರೆ ಕಡೇ ಪಕ್ಷ ಟಿಕೆಟ್‌ ವಿತರಣೆಗೆ ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕಿತ್ತುʼ ಅನ್ನುತ್ತಾರೆ ಬಸ್ಸಿನಲ್ಲಿ ತೆರಳುತ್ತಿರುವ ವಕೀಲ ಶಿವರಾಂ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಮೇ 10, 2023

ಮೈತ್ರಾದೇವಿ ಯಡಿಯೂರಪ್ಪ ಸ್ಮರಣಾರ್ಥ ಚಿನ್ನದ ಪದಕ

ಮೈತ್ರಾದೇವಿ ಯಡಿಯೂರಪ್ಪ ಸ್ಮರಣಾರ್ಥ ಚಿನ್ನದ ಪದಕ

ಶಿವಮೊಗ್ಗ, ಹೊಸನಗರದ ವಿವಿಧೆಡೆ ಇವತ್ತು ಇಡೀ ದಿನ ಕರೆಂಟ್‌ ಇರಲ್ಲ

ಶಿವಮೊಗ್ಗ, ಹೊಸನಗರದ ವಿವಿಧೆಡೆ ಇವತ್ತು ಇಡೀ ದಿನ ಕರೆಂಟ್‌ ಇರಲ್ಲ

Hulikal Ghat Closed for Traffic Following Landslide; Alternate Routes Announced

Hulikal Ghat Closed for Traffic Following Landslide; Alternate Routes Announced

ಹುಲಿಕಲ್ ಘಾಟಿ: ಎಲ್ಲಾ ವಾಹನ ಸಂಚಾರ ಬಂದ್, ಪರ್ಯಾಯ ಮಾರ್ಗ ಪ್ರಕಟ

ಹುಲಿಕಲ್ ಘಾಟಿ: ಎಲ್ಲಾ ವಾಹನ ಸಂಚಾರ ಬಂದ್, ಪರ್ಯಾಯ ಮಾರ್ಗ ಪ್ರಕಟ

Three killed, several injured in soil cave-in at Hulikal Ghat

Three killed, several injured in soil cave-in at Hulikal Ghat

BREAKING NEWS – ಹುಲಿಕಲ್‌ ಘಾಟಿಯಲ್ಲಿ ಘೋರ ದುರ್ಘಟನೆ, ಕಾರ್ಮಿಕರು ಸಾವು

BREAKING NEWS – ಹುಲಿಕಲ್‌ ಘಾಟಿಯಲ್ಲಿ ಘೋರ ದುರ್ಘಟನೆ, ಕಾರ್ಮಿಕರು ಸಾವು

PU RESULT: ಶಿವಮೊಗ್ಗದ ಮಹೀನ್‌ ಖಾನಮ್‌ ಅಫ್ರಿದಿ ಮನೆಯಲ್ಲಿ ಸಂಭ್ರಮ, ಪಡೆದ ಅಂಕಗಳೆಷ್ಟು?

PU RESULT: ಶಿವಮೊಗ್ಗದ ಮಹೀನ್‌ ಖಾನಮ್‌ ಅಫ್ರಿದಿ ಮನೆಯಲ್ಲಿ ಸಂಭ್ರಮ, ಪಡೆದ ಅಂಕಗಳೆಷ್ಟು?

ಇವತ್ತಿನ ಅಡಿಕೆ ರೇಟ್‌, ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿಯಲ್ಲಿ ಎಷ್ಟಿದೆ ಅಡಿಕೆ ಧಾರಣೆ?

ಇವತ್ತಿನ ಅಡಿಕೆ ರೇಟ್‌, ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿಯಲ್ಲಿ ಎಷ್ಟಿದೆ ಅಡಿಕೆ ಧಾರಣೆ?

ಶಿವಮೊಗ್ಗ ಜಿಲ್ಲೆಯಲ್ಲಿ ಯುವನಿಧಿ ಪ್ರಚಾರ, ಯಾವ್ಯಾವ ದಿನ ಯಾವ್ಯಾವ ಕಾಲೇಜಿನಲ್ಲಿ ಕಾರ್ಯಕ್ರಮ?

ಶಿವಮೊಗ್ಗ ಜಿಲ್ಲೆಯಲ್ಲಿ ಯುವನಿಧಿ ಪ್ರಚಾರ, ಯಾವ್ಯಾವ ದಿನ ಯಾವ್ಯಾವ ಕಾಲೇಜಿನಲ್ಲಿ ಕಾರ್ಯಕ್ರಮ?

ಪುಟ್ಟಪ್ಪ ಕ್ಯಾಂಪ್‌ನಲ್ಲಿ ಬೆಳಗ್ಗೆ ಕೊಟ್ಟಿಗೆಗೆ ಬಂದ ಮಹಿಳೆ ಕಾದಿತ್ತು ಆಘಾತ, ಆಗಿದ್ದೇನು?

ಪುಟ್ಟಪ್ಪ ಕ್ಯಾಂಪ್‌ನಲ್ಲಿ ಬೆಳಗ್ಗೆ ಕೊಟ್ಟಿಗೆಗೆ ಬಂದ ಮಹಿಳೆ ಕಾದಿತ್ತು ಆಘಾತ, ಆಗಿದ್ದೇನು?

Leave a Comment