BREAKING NEWS | ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ ಬೆಂಗಳೂರಿಂದ ಬಾಂಬ್ ನಿಷ್ಕ್ರಿಯ ದಳ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 5 NOVEMBER 2023

SHIMOGA : ರೈಲ್ವೆ ನಿಲ್ದಾಣದ ಎದುರಿಗೆ ಅನುಮಾನಾಸ್ಪದ ಬಾಕ್ಸ್ ಪತ್ತೆ ಹಿನ್ನಲೆ ಪರಿಶೀಲನೆಗೆ ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಆಗಮಿಸಿದೆ. ಬಾಂಬ್ ನಿರೋಧಕ ಸೂಟ್ ಧರಿಸಿ ಪರಿಶೀಲನೆ ಆರಂಭಿಸಿದ್ದಾರೆ.

ರೈಲ್ವೆ ನಿಲ್ದಾಣದ ಎದುರಿಗೆ ಅನುಮಾನಾಸ್ಪದವಾಗಿ ಎರಡು ಬಾಕ್ಸ್ ಪತ್ತೆಯಾಗಿದೆ. ಎರಡು ದಿನದ ಹಿಂದೆ ಕಾರಿನಲ್ಲಿ ಬಂದ ಕೆಲವರು ಈ ಬಾಕ್ಸ್ ಇರಿಸಿದ್ದರು ಎಂದು ಹೇಳಲಾಗುತ್ತಿದೆ. KA 17 ನೋಂದಣಿಯ ಓಮ್ನಿ ಕಾರಿನಲ್ಲಿ ಬಂದು ಬಾಕ್ಸ್ ಇರಿಸಲಾಗಿದೆ ಎಂದು ತಿಳಿದು ಬಂದಿದೆ.

ಬೆಂಗಳೂರಿನಿಂದ ಬಂದ ತಂಡ ಬಾಕ್ಸ್ ಪರಿಶೀಲನೆ ನಡೆಸಿದೆ‌. ಮುನ್ನೆಚ್ಚರಿಕೆ ಕ್ರಮವಾಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಇದನ್ನೂ ಓದಿ – ಅನುಮಾನಾಸ್ಪದ ಬಾಕ್ಸ್ ಪತ್ತೆ ಕೆಸ್, CCTVಯಲ್ಲಿ ಪತ್ತೆಯಾಯ್ತು ಕಾರ್, ಓರ್ವನ ವಿಚಾರಣೆಗೆ ಟೀಮ್

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment