ಶಿವಮೊಗ್ಗದಲ್ಲಿ ಬ್ರಹ್ಮಶ್ರೀ ನಾರಾಯಣಗುರು, ಶ್ರೀ ನುಲಿಯ ಚಂದಯ್ಯ ಜಯಂತಿ, ಸಂಸದರು ಏನೆಲ್ಲ ಹೇಳಿದರು?

ಶಿವಮೊಗ್ಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರು ಮತ್ತು ಶರಣ ಶ್ರೀ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮವನ್ನು ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಯಿತು.

ಸಂಸದ ಬಿ.ವೈ. ರಾಘವೇಂದ್ರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿದರು. ಸಂಸದ ರಾಘವೇಂದ್ರ ಏನೆಲ್ಲ ಹೇಳಿದರು. ಇಲ್ಲಿದೆ ಪಾಯಿಂಟ್ಸ್‌,

Narayana-Guru-Jayanthi-in-Shivamogga-Kuvempu-Rangamanidra

point-1

ಮಾನವನಿಗೆ ಒಂದೇ ಜಾತಿ, ಒಂದೇ ಮತ. ಎಲ್ಲರೂ ಸಮಾನರು ಎಂದು ಸಾರಿದವರು ಬ್ರಹ್ಮಶ್ರೀ ನಾರಾಯಣ ಗುರು. ನೂಲುವ ಕಾಯಕದ ಮೂಲಕ ಸ್ವಾಭಿಮಾನದ ಬದುಕು ಮತ್ತು ಕಾಯಕದ ಮಹತ್ವವನ್ನು ಜಗತ್ತಿಗೆ ಸಾರಿದವರು ನುಲಿಯ ಚಂದಯ್ಯ. ಇಂತಹ ಮಹಾನ್ ದಾರ್ಶನಿಕರ ಹಾದಿಯಲ್ಲಿ ನಾವು ಸಾಗಬೇಕು.

point-2

ಬ್ರಹ್ಮಶ್ರೀ ನಾರಾಯಣ ಗುರುಗಳು ಜಾತಿ ಪದ್ಧತಿ ವಿರುದ್ಧ ಸಮರ ಸಾರಿ, ಅಸ್ಪೃಶ್ಯತೆ ಮತ್ತು ತಾರತಮ್ಯದ ವಿರುದ್ಧ ಹೋರಾಡಿ, ಕೆಳ ಜಾತಿಯವರಿಗೆ ಶಿಕ್ಷಣ ಮತ್ತು ಮೂಲಭೂತ ಹಕ್ಕುಗಳನ್ನು ಕೊಡಿಸುವ ಮೂಲಕ ಕ್ರಾಂತಿಕಾರಿ ಬದಲಾವಣೆ ತಂದರು. ಕೆಳವರ್ಗದವರು ಸೇರಿದಂತೆ ಎಲ್ಲರಿಗೂ ಶಿಕ್ಷಣ ಸಿಗಬೇಕು ಹಾಗೂ ಮನುಷ್ಯ ಮನುಷ್ಯತ್ವ ಹೊಂದಿ ಬದುಕಬೇಕು ಎಂದು ಹೋರಾಡಿದರು. ಈ ಮೂಲಕ ಸಾಮರಸ್ಯ, ಸೌಹಾರ್ದಯುತ ಜೀವನ ಕಟ್ಟಿದ ದಾರ್ಶನಿಕರು.

point-3

ನುಲಿಯ ಚಂದಯ್ಯನವರು ಹುಲ್ಲನ್ನು ತಂದು ಹೊಸೆದು ಹಗ್ಗ ಮಾಡಿ ಕಾಯಕದ ಮಹತ್ವವನ್ನು ಜಗತ್ತಿಗೇ ಸಾರಿದಋು. ಇವರು ರಚಿಸಿರುವ ವಚನಗಳು ಇಂದಿಗೂ ನಮ್ಮ ಜೀವನದ ಹಾಸುಹೊಕ್ಕಾಗಿವೆ. ಆಧುನಿಕ ತಾಂತ್ರಿಕತೆ, ಎಐ ಕಾಲದಲ್ಲಿಯೂ ತಂದೆ, ತಾಯಿ ಪ್ರೀತಿ ಮಮತೆ, ಗುರುಹಿರಿಯರ ಮಾರ್ಗದರ್ಶನ, ಹಾರೈಕೆಗಳು ಗಟ್ಟಿಯಾಗಿವೆ. ಆಧುನಿತೆಯ ನಡುವೆಯೂ ನಮ್ಮ ಹಿರಿಯರ, ದಾರ್ಶನಿಕರ ಹಾದಿಯಲ್ಲಿ ನಡೆದು ಎಲ್ಲವನ್ನು ಒಟ್ಟೊಟ್ಟಿಗೆ ತೆಗೆದುಕೊಂಡು ಹೋಗಬೇಕು ಎಂದು ಸಂಸದ ರಾಘವೇಂದ್ರ ಹೇಳಿದರು. 

ಶಾಸಕ ಎಸ್.ಎನ್. ಚನ್ನಬಸಪ್ಪ, ಅಪರ ಜಿಲ್ಲಾಧಿಕಾರಿ ಅಭಿಷೇಕ್.ವಿ ಮಾತನಾಡಿದರು. ಇದೇ ವೇಳೆ ನಿವೃತ್ತ ಪ್ರಾಧ್ಯಾಪಕ ಪ್ರೊ. ಹೆಚ್. ಕಲ್ಲನ, ಕುವೆಂಪು ವಿವಿ ಪ್ರಾಧ್ಯಾಪಕಿ ಡಾ. ಶುಭಾ ಮರವಂತೆ ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್. ಉಮೇಶ್ ಸೇರಿ ವಿವಿಧ ಸಮಾಜಗಳ ಪ್ರಮುಖರು, ಅಧಿಕಾರಿಗಳು ಇದ್ದರು.