ಶಿವಮೊಗ್ಗದ ಬಿ.ಎಸ್‌.ಸಿ ಟೆಕ್ಸ್‌ಟೈಲ್ಸ್‌ ಶೋ ರೂಂ ಉದ್ಘಾಟನೆಯ ದಿನಾಂಕ ಪ್ರಕಟ, ಯಾವಾಗ? ಯಾರೆಲ್ಲ ಬರ್ತಿದ್ದಾರೆ?

ಶಿವಮೊಗ್ಗ: ನಗರದ ಬಿ.ಹೆಚ್. ರಸ್ತೆಯ ಪಾರೇಖ್ ವಿನಾಯಕ ಮಾಲ್‌ನಲ್ಲಿ ಬಿ.ಎಸ್.ಸಿ. ಟೆಕ್ಸ್‌ಟೈಲ್ಸ್‌ ಶೋರೂಂ ಉದ್ಘಾಟನೆಗೆ ದಿನಾಂಕ ನಿಗದಿಯಾಗಿದೆ. ಅಕ್ಟೋಬರ್ 12ರ ಬೆಳಿಗ್ಗೆ 10:30ಕ್ಕೆ ಶೋ ರೂಂ ಆರಂಭವಾಗಲಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಮತ್ತು ರಾಜ್ಯ ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ನೂತನ ಶೋರೂಂ ಉದ್ಘಾಟಿಸಲಿದ್ದಾರೆ.

BS-Channabasappa-and-Sons-Shop-in-Shimoga-city.

ಸಂಸದ ಬಿ.ವೈ.ರಾಘವೇಂದ್ರ, ಸಚಿವ ಮಧು ಬಂಗಾರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದರಾದ ಬಸವರಾಜ ಬೊಮ್ಮಾಯಿ, ಡಾ. ಪ್ರಭಾಕರ್‌ ಕೋರೆ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕರಾದ ಚನ್ನಬಸಪ್ಪ, ಬಿ.ಕೆ.ಸಂಗಮೇಶ್ವರ, ಶಾರದಾ ಪೂರ್ಯಾನಾಯ್ಕ್‌, ಶಾಂತನಗೌಡ, ಗೋಪಾಲಕೃಷ್ಣ ಬೇಳೂರು, ಡಿ.ಎಸ್.ಅರುಣ್‌, ಡಾ.ಧನಂಜಯ ಸರ್ಜಿ ಸೇರಿ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

1938ರಲ್ಲಿ ದಾವಣಗೆರೆಯಲ್ಲಿ ಆರಂಭಗೊಂಡ ಬಿ.ಎಸ್.ಸಿ. ಸಂಸ್ಥೆಯು ಜವಳಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದೆ. ದಾವಣಗೆರೆ, ಬೆಳಗಾವಿ ನಂತರ ಶಿವಮೊಗ್ಗದಲ್ಲಿ ಮಳಿಗೆ ಆರಂಭಿಸುತ್ತಿದೆ. ಸಂಸ್ಥೆಯ ನಿರ್ದೇಶಕ ಬಿ.ಸಿ. ಉಮಾಪತಿ, ಮ್ಯಾನೇಜಿಂಗ್ ಡೈರೆಕ್ಟರ್ ಬಿ.ಯು. ಚಂದ್ರಶೇಖರ್ ಹಾಗೂ ನಿರ್ದೇಶಕ ವೇದ್ ಬಂಕಾಪುರ ಅವರ ನೇತೃತ್ವದಲ್ಲಿ ನೂತನ ಶೋರೂಂ ಉದ್ಘಾಟನೆಯಾಗಲಿದೆ.