ಮ್ಯಾಮ್‌ಕೋಸ್‌ ವಾರ್ಷಿಕ ಮಹಾಸಭೆ, ಸದಸ್ಯರಿಗೆ ಬಸ್‌ ವ್ಯವಸ್ಥೆ, ಟೈಮಿಂಗ್‌ ಏನು?

ಶಿವಮೊಗ್ಗ: ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘದ (ಮ್ಯಾಮ್‌ಕೋಸ್‌) ವಾರ್ಷಿಕ ಮಹಾಸಭೆಯು ಆಗಸ್ಟ್ 30 ರಂದು ಬೆಳಿಗ್ಗೆ 11 ಗಂಟೆಗೆ ಸಾಗರ ರಸ್ತೆಯ ಪೆಸೆಟ್ ಕಾಲೇಜು ಆವರಣದಲ್ಲಿ ನಡೆಯಲಿದೆ. ಸಭೆಗೆ ಆಗಮಿಸುವ ಸದಸ್ಯರ ಅನುಕೂಲಕ್ಕಾಗಿ ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದ ಸಂಘದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದ ಸಮೀಪದ ಲಕ್ಷ್ಮಿ ಮೆಡಿಕಲ್ಸ್ ಎದುರಿನಿಂದ ಬೆಳಿಗ್ಗೆ 8:30 ಕ್ಕೆ ಹಾಗೂ ರೈಲು ನಿಲ್ದಾಣದಿಂದ ಬೆಳಗ್ಗೆ 9:15ಕ್ಕೆ ಪೆಸೆಟ್ ಕಾಲೇಜ್‌ವರೆಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಸಂಘದ ಸದಸ್ಯರು ಇದರ ಉಪಯೋಗ ಪಡೆದುಕೊಳ್ಳುವಂತೆ ತಿಳಿಸಲಾಗಿದೆ.

SHIMOGA-NEWS-GRAPHICS-BY-SHIVAMOGGA-LIVE

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ