ಬಿಗಿ ಬಂದೋಬಸ್ತ್ ನಡುವೆ ಶಿವಮೊಗ್ಗದಲ್ಲಿ ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 28 ಡಿಸೆಂಬರ್ 2019

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಜಾಯಿಂಟ್ ಆಕ್ಷನ್ ಕಮಿಟಿ ವತಿಯಿಂದ ನಗರದ ಈದ್ಗಾ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಭೆ ಆಯೋಜಿಸಲಾಗಿತ್ತು. ಬಿಗಿ ಭದ್ರತೆ ನಡುವೆ ಸಮಾವೇಶ ನಡೆಯಿತು.

81005194 2246693142098421 2448301787317272576 n.jpg? nc cat=105& nc eui2=AeENmoKGu8rOimHPcgvv4xzHNiTY8 ItPF aaSN4ltXQPQF5QFCg 1Kl5Pnc3rnwJ8cavBSIT mBa0Q5Jo tZ18sdeILEv0qA6LM4tqyytEBwQ& nc ohc=WHUejsQja7wAQmQueVV5cBsjcC IqTK1AofO9V9i rc5PioUykoQNjN5Q& nc ht=scontent.fblr11 1

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಹೈಕೋರ್ಟ್ ವಕೀಲ ಬಾಲನ್, CAA, NPR ಮತ್ತು NRC ಕಾಯ್ದೆಗಳು ಒಂದೇ ನಾಣ್ಯದ ಎರಡು ಮುಖ. ಇದನ್ನು ಜಾರಿ ಮಾಡಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಮಾನವ ವಿರೋಧಿಗಳು, ದೇಶದ್ರೋಹಿಗಳು. ಆಘ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದಿಂದ ಹಿಂದುಗಳು ಬರಬಹುದು. ಆದರೆ ಶ್ರೀಲಂಕಾದಿಂದ ಮಾತ್ರ ಬರಬಾರದು. ಇದೆಂತಹ ಕಾನೂನು. ಏಕೆಂದರೆ ಶ್ರೀಲಂಕಾದಲ್ಲಿ ಬ್ರಾಹ್ಮಣ ಹಿಂದುಗಳಿಲ್ಲ ಎಂದು ಪೌರತ್ವ ನೀಡುತ್ತಿಲ್ಲ ಎಂದು ಆರೋಪಿಸಿದರು.

ಮುಸ್ಲಿಂ ಧರ್ಮಗುರು ಶಾವುದ್ ಅಮಿದ್ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡುವಾಗ ಯಾರು ಜಾತಿ, ಧರ್ಮವನ್ನು ನೋಡಲಿಲ್ಲ. ಈಗ ಪೌರತ್ವಕ್ಕಾಗಿ ಜಾತಿ, ಧರ್ಮ ಎತ್ತಿಹಿಡಿಯುತ್ತಿದ್ದಾರೆ.  ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಮೌಲಾನಾ ಅಜಾದ್ ಸೇರಿದಂತೆ ವೀರಸೇನಾನಿಗಳು ದೇಶದ ಐಕ್ಯತೆಗಾಗಿ ಶ್ರಮಿಸಿದ್ದರು. ಆದರೆ ಈಗಿನ ಸರ್ಕಾರ ಸಂಘ ಪರಿವಾರದ ಅಜೆಂಡಾವನ್ನು ಮುಂದಿಟ್ಟಕೊಂಡು ಜಾತಿ, ಧರ್ಮದ ವಿಚಾರದಲ್ಲಿ ಒಡೆದು ಆಳುವ ನೀತಿ ಅನುಸರಿಸುತ್ತಿದೆ.ದೇಶವನ್ನು ಇಬ್ಬಾಗಿಸುವ, ಮನುಷ್ಯ ವಿರೋಧಿಯಾಗಿರುವ ಇದನ್ನು ಪ್ರತಿಯೊಬ್ಬರು ವಿರೋಧಿಸಬೇಕು ಎಂದರು.

ಪ್ರಗತಿಪರ ಚಿಂತಕ ಹರ್ಷ ಕುಮಾರ್ ಕುಗ್ವೆ ಮಾತನಾಡಿ, ದೇಶದಲ್ಲಿರುವ ಅಲ್ಪಸಂಖ್ಯಾತರ ಮೇಲೆ ಧರ್ಮ ಹಾಗೂ ಅಹಾರ ಸಂಸ್ಕೃತಿಯ ಹೆಸರಿನಲ್ಲಿ ಹಲ್ಲೆ ಮಾಡುತ್ತಿದ್ದಾರೆ. ಸ್ವದೇಶದ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಲಾಗದ ಕೇಂದ್ರ ಸರ್ಕಾರ ಈಗ ಹೊರ ದೇಶದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುತ್ತೇವೆ ಎಂದು ಹೇಳುತ್ತಿರುವುದು ಯಾವ ನ್ಯಾಯ ಎಂದು ಕೇಂದ್ರದ ನಡೆಯನ್ನು ಪ್ರಶ್ನಿಸಿದರು.

80379697 2246693248765077 3076758302764302336 o.jpg? nc cat=105& nc eui2=AeGC3t7FhkA2 KrUdb7MxqkjDVwYcLpbX8JrtjUi8GAaT B4S6 NVCRceu5wuIGTBTOXmBTokt8icBWVFAryCtnfPv2LnjmToq3zl89FKGBg Q& nc ohc=5eGwipd9cwoAQlTFxm3ZpT1nBLrilT om7LuOxTu0iwR0TcwgDyldB6TA& nc ht=scontent.fblr11 1

ಪ್ರತಿಭಟನಾ ಸಭೆಯಲ್ಲಿ ಪ್ರಮುಖರಾದ ಅಬ್ದುಲ್ ಸತ್ತಾರ್ ಬೇಗ್, ವಕೀಲರಾದ ಕೆ.ಪಿ.ಶ್ರೀಪಾಲ್, ಮುಕ್ತಿ ಮುಜೀಬುಲ್ಲಾ, ಡಿಎಸ್ಎಸ್ ಮುಖಂಡ ಗುರುಮೂರ್ತಿ, ಹಾಲೇಶಪ್ಪ ಸೇರಿದಂತೆ ಹಲವರು ಇದ್ದರು.

80512159 2246693462098389 2159194791160578048 n.jpg? nc cat=103& nc eui2=AeE PHuH6rONN4MlhiZWPaZN2tb yYzV3Ilxd0RmUH982sj e nseM7viadmGdqcoJq3CUDpWK0FVfPHnevPfKx2KjDcKrLpt9h S3e1Vrx1A& nc ohc=QIeMJ76OoKQAQljdELunPGvU1TLP7ChVMElgEBOFi VK xro7ZueNp7AQ& nc ht=scontent.fblr11 1

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment