ಶಿವಮೊಗ್ಗದ ಜಿಮ್ ಒಂದರ ಮಾಲೀಕರ ವಿರುದ್ಧ ತರಬೇತುದಾರರಿಂದಲೇ ಕೇಸ್, ಕಾರಣವೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | SHIMOGA | 8 ಜುಲೈ 2022

ನಗರದ ಫಿಟ್‌ನೆಸ್‌ ಸಂಸ್ಥೆಯ ತರಬೇತುದಾರನಿಗೆ ಪಿಎಫ್ ಹಣದಲ್ಲಿ ವಂಚನೆ ಆಗಿದ್ದು, ಸಂಸ್ಥೆಯ ಮಾಲೀಕ ಸೇರಿ ಮೂವರ ಮೇಲೆ ನ್ಯಾಯಾಲಯದ ಮೂಲಕ ಪ್ರಕರಣ ದಾಖಲಿಸಲಾಗಿದೆ. ಮೂವರು ತರಬೇತುದಾರರು ಪ್ರಕರಣ ದಾಖಲು ಮಾಡಿದ್ದಾರೆ.

Shimoga Nanjappa Hospital

ಪಿಎಫ್ ವಂಚನೆ ಆರೋಪ

ಫಿಟ್‌ನೆಸ್‌ ಸಂಸ್ಥೆಯಲ್ಲಿ ಕೆಲಸ ಮಾಡಿದ ತರಬೇತುದಾರರಿಗೆ ಪ್ರತಿ ತಿಂಗಳ ಸಂಬಳದಲ್ಲಿ ಪಿಎಫ್, ಇಎಸ್ಐ ಎಂದು 1,935 ರೂ. ಕಡಿತ ಮಾಡಿಕೊಳ್ಳಲಾಗಿದೆ. ಆದರೆ ಪಿಎಫ್ ಖಾತೆಗೆ ಹಣ ಕೇವಲ 312 ರೂ. ಜಮಾ ಮಾಡಲಾಗಿದೆ. ಇನ್ನು, ಇಎಸ್ಐ ಖಾತೆಯನ್ನೇ ತೆಗೆದಿರಲಿಲ್ಲ. ಹಾಗಾಗಿ ಮೂವರು ತರಬೇತುದಾರರು ಕೆಲಸ ತೊರೆದಿದ್ದಾರೆ. ತಮ್ಮ ಬಾಕಿ ಹಣ ಮತ್ತು ಪಿಎಫ್, ಇಎಸ್ಐ ಹಣ ನೀಡುವಂತೆ ಕೇಳಿದ್ದಾರೆ.

ನ್ಯಾಯಾಲಯದ ಮೊರೆ ಹೋದರು

ಹಲವು ಬಾರಿ ಪ್ರಶ್ನಿಸಿ ಬಾಕಿ ಹಣ ನೀಡುವಂತೆ ಮನವಿ ಮಾಡಿದರೂ ಮಾಲೀಕರು ಸತಾಯಿಸಿದ್ದಾರೆ. ಇದರಿಂದ ನೊಂದ ತರಬೇತುದಾರರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಖಾಸಗಿ ದೂರು ದಾಖಲಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯ, ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದೆ.

ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಚಾಕು ತೋರಿಸಿ ಬೆದರಿಕೆ, ಹಣ, ಮೊಬೈಲ್ ಕಸಿದ ದುಷ್ಕರ್ಮಿಗಳು

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment