ಕಳೆದ ವಾರ ಕೂಲ್‌ ಕೂಲ್‌ ವಾತಾವರಣ, ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಹೆಚ್ಚಾಯ್ತು ತಾಪಮಾನ, ಇವತ್ತು ಎಷ್ಟಿದೆ ಉಷ್ಣಾಂಶ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 17 MAY 2023

SHIMOGA : ಒಂದೆಡೆ ನೈಋತ್ಯ ಮುಂಗಾರು ಮೂರ್ನಾಲ್ಕು ದಿನ ವಿಳಂಬವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನೊಂದೆಡೆ ಶಿವಮೊಗ್ಗದಲ್ಲಿ ಬಿಸಿಲಿನ ಝಳ (centigrade) ಪುನಃ ಹೆಚ್ಚಾಗುತ್ತಿದೆ.

BH-Road-in-front-of-Sahyadri-College.

ಶಿವಮೊಗ್ಗದಲ್ಲಿ ಮೇ 17ರಂದು ತಾಪಮಾನ 37 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಮತ್ತೆ ಜನರು ಬಿಸಿಲಿನ ಧಗೆಗೆ ಹೈರಾಣಾಗಿದ್ದಾರೆ.

ಸುಳಿಗಾಳಿಯಿಂದ ಜಿಲ್ಲೆಯಲ್ಲಿ ಮಳೆಯಾಗಿತ್ತು

ಮೇ ತಿಂಗಳ ಆರಂಭದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಬಿಸಿಲು ಹೆಚ್ಚಾಗಿತ್ತು. ಇದರ ಪರಿಣಾಮ ಉಷ್ಣಾಂಶವು ಏರಿಕೆಯಾಗಿತ್ತು. ಜಿಲ್ಲೆಯಲ್ಲಿ 39 ಡಿಗ್ರಿ ಸೆಲ್ಸಿಯಸ್‌ (centigrade) ಉಷ್ಣಾಂಶ ದಾಖಲಾಗಿತ್ತು. ಬಂಗಾಳ ಕೊಲ್ಲಿಯಲ್ಲಿ ಸುಳಿಗಾಳಿಯ ಪರಿಣಾಮ ರಾಜ್ಯದ ವಿವಿಧೆಡೆ ಮಳೆಯಾಗಿತ್ತು. ಇದರಿಂದ ತಾಪಮಾನ ಕಡಿಮೆಯಾಗಿತ್ತು.

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ಕಳೆದ ವಾರ ಮಳೆಯಾಗಿದ್ದರಿಂದ ತಾಪಮಾನ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿತ್ತು. ಜಿಲ್ಲೆಯಲ್ಲಿ 25 ಡಿಗ್ರಿ ಸೆಲ್ಸಿಯಸ್‌ವರೆಗೆ ಉಷ್ಣಾಂಶ ಕಡಿಮೆಯಾಗಿತ್ತು. ಹಾಗಾಗಿ ಜನರು ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.

Rain-in-Shivamogga-City

ಮತ್ತೆ ಹೆಚ್ಚಾಯ್ತು ಬಿಸಿಲು, ಧಗೆ

ಜಿಲ್ಲೆಯಲ್ಲಿ ಮತ್ತೆ ತಾಪಮಾನದಲ್ಲಿ ಏರಿಕೆಯಾಗಿದೆ. ಕಳೆದ ಮೂರ್ನಾಲ್ಕು ದಿನದಿಂದ ಉಷ್ಣಾಂಶ ಗರಿಷ್ಠ ಮಟ್ಟಕ್ಕೆ ಹೆಚ್ಚಳವಾಗಿದೆ. ಜಿಲ್ಲೆಯಲ್ಲಿ ಸದ್ಯ 37 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವಿದೆ. ಇನ್ನು ಕೆಲವು ದಿನ ಗರಿಷ್ಠ ಮಟ್ಟದ ಉಷ್ಣಾಂಶವೆ ಇರುವ ಸಾಧ್ಯತೆ ಇದೆ.

ಬಿಸಿಲಿನ ಝಳಕ್ಕೆ ಬಸವಳಿದಿರುವ ಜನರು ಫ್ಯಾನ್‌, ಏಸಿ ಮೊರೆ ಹೋಗಿದ್ದಾರೆ. ತಂಪು ಪಾನಿಯ, ತಂಪು ನೀರು, ಎಳ ನೀರಿಗೆ ಮತ್ತೆ ಬೇಡಿಕೆ ಹೆಚ್ಚಾಗಿದೆ.

ಇದನ್ನೂ ಓದಿ – ಈ ಬಾರಿ ನೈಋತ್ಯ ಮುಂಗಾರು ಸ್ವಲ್ಪ ವಿಳಂಬ, 2 ಕಾರಣ ತಿಳಿಸಿದ ಹವಾಮಾನ ಇಲಾಖೆ

 

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment