ಶಿವಮೊಗ್ಗದಲ್ಲಿ ಕಂಡ ಚಂದ್ರ, ಪೂಜೆ ಸಲ್ಲಿಸಿ ಪುನೀತರಾದ ಜನ, ಸಿಟಿಯಲ್ಲಿ ಹೇಗಿತ್ತು ದರ್ಶನ?

ಶಿವಮೊಗ್ಗ : ನಗರದಲ್ಲಿ ಇವತ್ತು ಯುಗಾದಿಯ ಚಂದ್ರ (Chandra) ದರ್ಶನವಾಯಿತು. ಚಂದ್ರನನ್ನು ಕಣ್ತುಂಬಿಕೊಂಡ ಜನರು ಪೂಜೆ ಸಲ್ಲಿಸಿ, ಕೈ ಮುಗಿದರು. ಬೇವು ಬೆಲ್ಲ ಹಂಚಿ ಶುಭಾಶಯ ವಿನಿಮಯ ಮಾಡಿಕೊಂಡರು.

ಇದನ್ನೂ ಓದಿ » ಶಿವಮೊಗ್ಗದಲ್ಲಿ ನಡೆಯಬೇಕಿದ್ದ ಮೊದಲ ಕಂಬಳ ರದ್ದು, ಯಾಕೆ? ಮುಂದೆ ನಡೆಯುತ್ತಾ?

ಯುಗಾದಿ ಹಬ್ಬದಂದು ಚಂದ್ರ ದರ್ಶನ ಮಾಡಬೇಕು. ಭಾನುವಾರ ಚಂದ್ರ ಕಾಣಿಸಿದ ಹಿನ್ನೆಲೆ ಇವತ್ತು ಸಂಜೆ ವೇಳೆಗೆ ಜನರು ಆಗಸದತ್ತ ಕಣ್ಣು ನೆಟ್ಟಿದ್ದರು. ಮನೆಗಳ ಟೆರೇಸ್‌ ಮೇಲೆ, ರಸ್ತೆಗಳು, ಖಾಲಿ ಜಾಗದಲ್ಲಿ ನಿಂತು ಚಂದ್ರ ದರ್ಶನ ಮಾಡಿದರು. ಚಂದ್ರ ಕಾಣಿಸುತ್ತಿದ್ದಂತೆ ಪೂಜೆ ಸಲ್ಲಿಸಿ, ಹಿರಿಯರಿಗೆ ನಮಸ್ಕರಿಸಿ, ಬೇವು ಬೆಲ್ಲ ಹಂಚಿದರು. 

ಇದನ್ನೂ ಓದಿ » ಕೂಡ್ಲಿಯಲ್ಲಿ ಅದ್ಧೂರಿ ಜಾತ್ರೆ, ಸಂಗಮದಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ವೈಭವ?

ನಗರದ ವಿವಿಧೆಡೆ ಜನರು ತಂಡೋಪ ತಂಡವಾಗಿ ರಸ್ತೆಯಲ್ಲಿ ನಿಂತು ಚಂದ್ರ (Chandra) ದರ್ಶನ ಮಾಡಿದರು. ಚಂದ್ರನ ಫೋಟೊಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು.

Chandra Darshana in Shimoga city during yugadi festival

Chandra Darshana in Shimoga city during yugadi festival

Chandra Darshana in Shimoga city during yugadi festival

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

 

310325 Moon Darshana during yugadi in shimoga city

Leave a Comment