ಸರತಿ ಸಾಲಿನಲ್ಲಿ ದಿಢೀರ್‌ ಬದಲಾವಣೆಯೆ ಸೋಮಣ್ಣ ಬೆದರಿ ಓಡಲು ಕಾರಣವಾಯ್ತಾ? ಏನಿದು ಸರತಿ?

ಶಿವಮೊಗ್ಗ: ಕಡೇ ಕ್ಷಣದಲ್ಲಿ ಸರತಿ ಸಾಲಿನಲ್ಲಿ ಆದ ಬದಲಾವಣೆಯೇಸೋಮಣ್ಣ ಆನೆ ಗಲಿಬಿಲಿಗೊಂಡು ಓಡಲು ಕಾರಣ ಎಂದು ಹೇಳಲಾಗುತ್ತಿದೆ. ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ಈ ಸಂಬಂಧ ಶಿವಮೊಗ್ಗ ಲೈವ್‌.ಕಾಂಗೆ ಮಾಹಿತಿ ನೀಡಿದ್ದಾರೆ. ನೀವು ಸುದ್ದಿ ಓದುತ್ತಿರುವುದು ಶಿವಮೊಗ್ಗ ಲೈವ್‌.ಕಾಂ ವೆಬ್‌ಸೈಟ್‌ನಲ್ಲಿ. ಈ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ಅ.15ರಂದು ಸಕ್ರೆಬೈಲಿನ ಸಾಗರ್‌, ಸೋಮಣ್ಣ ಮತ್ತು ಬಹದ್ದೂರ್‌ ಆನೆಗಳು ಶಿವಮೊಗ್ಗಕ್ಕೆ ಆಗಮಿಸಿದವು. ಅ.16ರ ಬೆಳಿಗ್ಗೆಯಿಂದ ತಾಲೀಮು ಆರಂಭಿಸಲಾಯಿತು. ಪ್ರತಿ ದಿನ ಎರಡು ಬಾರಿ ನಡೆಸುತ್ತಿದ್ದ ತಾಲೀಮು ವೇಳೆ ಸಾಗರ್‌ ಆನೆ ಮೊದಲು, ನಂತರ ಸೋಮಣ್ಣ ಮತ್ತು ಅದರ ಹಿಂಬದಿ ಬಹದ್ದೂರ್‌ ಆನೆ ಸರತಿಯಲ್ಲಿ ಸಾಗುತ್ತಿದ್ದವು. ಇಂದು ಜಂಬೂ ಸವಾರಿ ವೇಳೆ ಈ ಸರತಿ ಸಾಲಿನಲ್ಲಿ ಬದಲಾವಣೆ ಆಯಿತು.

last-minute-change-in-elephant-lineup

ಸರತಿ ಬದಲಾವಣೆ, ಸೋಮಣ್ಣಗೆ ಆತಂಕ

ಸಾಗರ್‌ ಆನೆಗೆ ದಸರಾ ಮೆರವಣಿಗೆ ಹೊಸತಲ್ಲ. ಆದ್ದರಿಂದ ಸಾಗರ್‌ ಆನೆಯನ್ನು ಸರತಿಯಲ್ಲಿ ಮೊದಲಿಗೆ ಕಳುಹಿಸಲಾಗುತ್ತಿತ್ತು. ಸೋಮಣ್ಣ ಆನೆಗೆ ದಸರಾ ಮೆರವಣಿಗೆ, ವಾದ್ಯಗಳ ಶಬ್ದ, ಜನ ಜಂಗುಳಿ ಹೊಸತು. ಇದರ ಜೊತೆಗೆ 450 ಕೆ.ಜಿ ತೂಕದ ಅಂಬಾರಿ ಹೊರಿಸಲಾಗಿತ್ತು. ಸಾಗರ್‌ ಆನೆ ಮುಂದೆ ಸಾಗುತ್ತಿದ್ದಾಗ ಸೋಮಣ್ಣ ಆನೆ ಅದನ್ನು ಹಿಂಬಾಲಿಸುತ್ತಿತ್ತು. ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದ ಮುಂದೆ ಪುಷ್ಪ ನಮನ ಸಲ್ಲಿಸುವಾಗಲು ಅರಣ್ಯ ಇಲಾಖೆ ನಿಗದಿಪಡಿಸಿದ ರೀತಿಯಲ್ಲೇ ಸಾಗರ್‌, ಅಂಬಾರಿ ಹೊತ್ತ ಸೋಮಣ್ಣ, ಬಹದ್ದೂರ್‌ ಆನೆಗಳು ಸರತಿಯಲ್ಲಿ ಸಾಗುತ್ತಿದ್ದವು.

ಸ್ವಲ್ಪ ದೂರ ಹೋದ ಬಳಿಕ ಈ ಸರತಿಯಲ್ಲಿ ಬದಲಾವಣೆ ಆಯಿತು. ಸಾಗರ್‌ ಆನೆಯನ್ನು ಹಿಂದಕ್ಕೆ ಕಳುಹಿಸಲಾಯಿತು. ಅಂಬಾರಿ ಹೊತ್ತ ಆನೆ ಮೊದಲಿಗೆ ಇರಬೇಕು ಎಂದು ಸೋಮಣ್ಣ ಆನೆಯನ್ನು ಮುಂದಕ್ಕೆ ಬಿಡಲಾಯಿತು. ಮೆರವಣಿಗೆ ಅರಂಭದಲ್ಲಿಯೆ ವಾದ್ಯಗಳ ಶಬ್ದಕ್ಕೆ ಬೆದರಿದ್ದ ಸೋಮಣ್ಣ ಆನೆ ಕೊನೆಗೆ ಅಂಬಾರಿ ಸಹಿತ ಹಿಂದಕ್ಕೆ ತಿರುಗಿ ಒಡಲು ಆರಂಭಿಸಿತು. ಸರತಿಯಲ್ಲಿ ಆದ ಬದಲಾವಣೆ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ. ರಾಜಕೀಯ ಒತ್ತಡವೆ ಈ ಬದಲಾವಣೆಗೆ ಕಾರಣ ಎಂಬ ಆರೋಪವು ಇದೆ.