ಕೋಟೆ ಮಾರಿಕಾಂಬ ಜಾತ್ರೆ, ಗಾಂಧಿ ಬಜಾರ್‌ನಲ್ಲಿ ಚಪ್ಪರ ಶಾಸ್ತ್ರ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 4 MARCH 2024

SHIMOGA : ಕೋಟೆ ‍ಶ್ರೀ ಮಾರಿಕಾಂಬ ದೇವಿ ಜಾತ್ರೆ ಅಂಗವಾಗಿ ಗಾಂಧಿ ಬಜಾರ್‌ನಲ್ಲಿ ಚಪ್ಪರ ಪೂಜೆ ನೆರವೇರಿಸಲಾಯಿತು. ತಾಯಿಯ ತವರು ಮನೆ ಗಾಂಧಿ ಬಜಾರ್‌ನಲ್ಲಿದೆ. ಅಲ್ಲಿ ದೇವಸ್ಥಾನ ಸಮಿತಿ, ಭಕ್ತರ ಸಮ್ಮುಖದಲ್ಲಿ ಚಪ್ಪರ ಪೂಜೆ ನೆರವೇರಿಸಲಾಯಿತು.

ಈ ಬಾರಿ ಮಾರಿಕಾಂಬೆ ದೇವಿ ಜಾತ್ರೆಯು ಮಾರ್ಚ್‌ 12 ರಿಂದ 16ರವರೆಗೆ ನಡೆಯಲಿದೆ. ಮಾ.12ರಂದು ತವರು ಮನೆ ಗಾಂಧಿ ಬಜಾರ್‌ ಕಾಳಿಕಾಪರಮೇಶ್ವರಿ ದೇವಸ್ಥಾನದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಮರು ದಿನ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿರುವ ಗದ್ದುಗೆ ಮೇಲೆ ದೇವಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಮಾರ್ಚ್‌ 16ರಂದು ರಾಜಬೀದಿ ಉತ್ಸವದ ಮೂಲಕ ದೇವಿಯನ್ನು ಕಾಡಿಗೆ ಬಿಟ್ಟು ಬರಲಾಗುತ್ತದೆ.

ಚಪ್ಪರ ಶಾಸ್ತ್ರದ ಸಂದರ್ಭ ದೇವಸ್ಥಾನ ಸಮಿತಿ ಪ್ರಧಾನ ಕಾರ್ಯದರ್ಶಿ ಎನ್.‌ ಮಂಜುನಾಥ್‌, ಪೂಜಾ ಕನ್ವಿನರ್‌ ಸತ್ಯನಾರಾಯಣ, ಕಾರ್ಯದರ್ಶಿ ಲೋಕೇಶ್‌, ಸಹ ಕಾರ್ಯದರ್ಶಿ ಸುನೀಲ್‌, ಡಿ.ಎಸ್‌.ಚಂದ್ರಶೇಖರ್‌, ಪ್ರಭಾಕರ ಗೌಡ, ವಿಶ್ವಕರ್ಮ ಸಮಾಜದ ಪದಾಧಿಕಾರಿಗಳು ಹಾಜರಿದ್ದರು. 

ಇದನ್ನೂ ಓದಿ – ಲೋಕಸಭೆ ಚುನಾವಣೆಗೆ ಗೀತಾ, ಶಿವಮೊಗ್ಗದಲ್ಲಿ ನಟ ಶಿವರಾಜ್‌ ಕುಮಾರ್‌ ಹೇಳಿದ್ದೇನು? ಇಲ್ಲಿದೆ 3 ಪ್ರಮುಖ ಪಾಯಿಂಟ್

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment