ಕಠಿಣ ಲಾಕ್ ಡೌನ್ ಮೊದಲ ದಿನ, ಸವಳಂಗ ರಸ್ತೆಯಲ್ಲಿ ಯು ಟರ್ನ್ ಶಿಕ್ಷೆ, ಉಳಿದೆಡೆ ವಾಹನಗಳು ವಶಕ್ಕೆ

ಶಿವಮೊಗ್ಗ ಲೈವ್.ಕಾಂ | SHIMOGA NEWS | 31 MAY 2021➤ ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಕಠಿಣ ಲಾಕ್‍ ಡೌನ್ ಜಾರಿಯಾದರೂ ಶಿವಮೊಗ್ಗದಲ್ಲಿ ವಾಹನ ದಟ್ಟಣೆ ತಗ್ಗಿಲ್ಲ. ನಗರದ ವಿವಿಧೆಡೆ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನ ತಪಾಸಣೆ ನಡೆಸುತ್ತಿದ್ದಾರೆ.

ಸವಳಂಗ ರಸ್ತೆಯಲ್ಲಿ ಭಾರಿ ವಾಹನ ಸಂಚಾರವಿದೆ. ಹಾಗಾಗಿ ಇಲ್ಲಿ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ತಪಾಸಣೆ ನಡೆಸಿದರು. ಈ ವೇಳೆ ಹಲವು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಯು ಟಾರ್ನ್​ ಹೊಡೆಯಿರಿ

ಸವಳಂಗ ರಸ್ತೆಯಲ್ಲಿ ಅನಗತ್ಯವಾಗಿ ರಸ್ತೆಗಿಳಿದವರಿಗೆ ಪೊಲೀಸರು ಯು ಟರ್ನ್ ‍ಹೊಡೆಸಿದರು. ರೈಲ್ವೆ ಗೇಟ್ ಬಳಿ ಬ್ಯಾರಿಕೇಡ್ ಹಾಕಿ ತಪಾಸಣೆ ನಡೆಸಿದರು. ಈ ವೇಳೆ ಹಲವರು ಸಣ್ಣಪುಟ್ಟ ಕಾರಣಗಳನ್ನು ಹೇಳಿ ಶಿವಮೊಗ್ಗದ ಸಿಟಿ ಕಡೆಗೆ ಬರುತ್ತಿದ್ದರು. ಇಂತಹವರನ್ನು ತಡೆದು, ಯು ಟರ್ನ್ ಹೊಡೆಸಿ ಕಳುಹಿಸಿದ್ದಾರೆ.

ಬ್ಯಾರಿಕೇಡ್ ಕೋಟೆಯಾದ ಸರ್ಕಲ್

ನಗರದ ಅಮೀರ್ ಅಹಮದ್ ಸರ್ಕಲ್‍ನಲ್ಲಿ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ. ಇಲ್ಲಿ ವಾಹನ ಸಂಚಾರ ಸಂಪೂರ್ಣ ನಿರ್ಬಂಧಿಸಲಾಗಿದೆ. ಇನ್ನು ಗೋಪಿ ಸರ್ಕಲ್, ನೆಹರೂ ರೋಡ್, ಬಿ.ಹೆಚ್‍.ರಸ್ತೆ, ಶಂಕರಮಠ ರಸ್ತೆ, ಅಶೋಕ ಸರ್ಕಲ್‍ ಸೇರಿದಂತೆ ನಗರದ ವಿವಿಧೆಡೆ ಬ್ಯಾರಿಕೇಡ್‍ಗಳಲ್ಲಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಅನಗತ್ಯವಾಗಿ ಓಡಾಡುತ್ತಿರುವವರ ವಾಹನಗಳನ್ನು ಸ್ಥಳದಲ್ಲೇ ಸೀಜ್ ಮಾಡಲಾಗುತ್ತಿದೆ.

ಪೊಲೀಸ್ ತಪಾಸಣೆಯ ವಿಡಿಯೋ ರಿಪೋರ್ಟ್ ಅಲ್ಲಿದೆ

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

Leave a Comment