ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 20 JUNE 2024
SHIMOGA : ತಾವು ನಟಿಸಿರುವ ಶೆಫ್ ಚಿದಂಬರ ಚಲನಚಿತ್ರ ಜೂ.14ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ನಾಯಕ ನಟ ಅನಿರುದ್ಧ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೆಫ್ ಚಿದಂಬರ ಚಿತ್ರ ಒಂದು ವಿಭಿನ್ನ ಪ್ರಯತ್ನವಾಗಿದೆ. ಕೊಲೆಗಳ ಸುತ್ತ ಕಥೆ ನಡೆಯುತ್ತಿದ್ದರೂ, ಹಾಸ್ಯದ ನವಿರಾದ ಹೊದಿಕೆ ಚಿತ್ರಕ್ಕಿದೆ. ಚಿತ್ರದಲ್ಲಿ ಉತ್ತಮ ಸಾಹಿತ್ಯ, ಸಂಗೀತ, ನೃತ್ಯ, ಕಥಾಹಂದರವಿದೆ ಎಂದರು.
ಚಿತ್ರ ಸಾಮಾನ್ಯದಂತೆ ಕಲಾತ್ಮಕ ಶೈಲಿಯಲ್ಲಿ ಬರದೆ ಮನೋರಂಜನೆಯನ್ನು ಗುರಿಯಾಗಿಟ್ಟುಕೊಂಡಿದೆ. ಚಿತ್ರದಲ್ಲಿ ನಿಧಿ ಸುಬ್ಬಯ್ಯ ಮತ್ತು ರೆಷೆಲ್ ಡೇವಿಡ್ ನಾಯಕಿಯರಾಗಿ ನಟಿಸಿದ್ದಾರೆ. ಇಡಿ ಕುಟುಂಬ ಒಟ್ಟಾಗಿ ಕುಳಿತು ನೋಡುವ ಚಿತ್ರವಾಗಿದೆ. ಎಲ್ಲರೂ ಚಿತ್ರಮಂದಿರದಲ್ಲಿ ಸಿನಿಮಾ ನೋಡಿ ಬೆಂಬಲಿಸಿ ಎಂದು ಮನವಿ ಮಾಡಿದರು.
ದರ್ಶನ್ ಕೇಸ್ ಎಚ್ಚರಿಕೆಯ ಗಂಟೆ
ರೇಣುಕಾಸ್ವಾಮಿ ಹತ್ಯೆ ಪ್ರಕರಣ ಒಂದು ದುರ್ಘಟನೆ. ಇದು ದರ್ಶನ್ ಮತ್ತು ರೇಣುಕಾಸ್ವಾಮಿ ಇಬ್ಬರ ಕುಟುಂಬಕ್ಕೂ ಬಂದಿರುವ ದುಸ್ಥಿತಿ. ಈ ದುರ್ಘಟನೆ ನಡೆಯಬಾರದಿತ್ತು. ದರ್ಶನ್ ಮೇಲಿನ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ. ಅವರನ್ನು ಚಿತ್ರರಂಗಕ್ಕೆ ಕಪ್ಪುಚುಕ್ಕಿ ಎನ್ನಲು ಸಾಧ್ಯವಿಲ್ಲ. ಈ ಪ್ರಕರಣವನ್ನು ಸೈಬರ್ ಪೊಲೀಸರ ಗಮನಕ್ಕೆ ತಂದಿದ್ದರು, ಬಗೆಹರಿಸಿಕೊಳ್ಳಬಹುದಿತ್ತು. ಎಲ್ಲರೂ ಕಾನೂನಿಗೆ ಬದ್ಧರಾಗಿರಬೇಕು ಎಂದರು.
ಚಿತ್ರದ ನಿರ್ಮಾಪಕಿ ರೂಪಾ, ಮಾಧುರಿ, ಗಣೇಶ್ ಇದ್ದರು.
ಇದನ್ನೂ ಓದಿ – ಶಿವಮೊಗ್ಗದ ಸವಳಂಗ ರಸ್ತೆ ರೈಲ್ವೆ ಮೇಲ್ಸೇತುವೆ ಪರಿಶೀಲನೆ, ಏನೆಲ್ಲ ಸೂಚನೆ ನೀಡಿದ್ರು ಸಂಸದ?
LATEST NEWS
- ಶಿವಮೊಗ್ಗದಲ್ಲಿ ಬಂಜಾರ ಮುಖಂಡರು ಪೊಲೀಸ್ ವಶಕ್ಕೆ, ಸಭೀಕರಿಲ್ಲದೆ ನಡೆಯಿತು ಸೇವಾಲಾಲ್ ಜಯಂತಿ

- ಶಿವಮೊಗ್ಗದಲ್ಲಿ ಕೆಎಎಸ್ ಅಧಿಕಾರಿ ಸೇರಿ ಇಬ್ಬರು ಲೋಕಾಯುಕ್ತ ಬಲೆಗೆ, ಆಗಿದ್ದೇನು?

- ಬಿಳಕಿಯಲ್ಲಿ ಅಂಗನವಾಡಿ ಸಹಾಯಕಿ ಮೃತದೇಹ ಪತ್ತೆ

- ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಹತ್ಯೆ, ಸ್ಥಳಕ್ಕೆ ತುಂಗಾ ನಗರ ಪೊಲೀಸರು ದೌಡು

- ಭದ್ರಾವತಿ ವ್ಯಕ್ತಿಗೆ 2 ವರ್ಷ ಜೈಲು, ₹10,000 ದಂಡ, ಕಾರಣ ಹೂವಿನ ಗಿಡ

About The Editor
ನಿತಿನ್ ಆರ್.ಕೈದೊಟ್ಲು






