ಜಾಮೀನು ಮಂಜೂರಾಗಿ 24 ದಿನದ ಬಳಿಕ ಬುರುಡೆ ಚಿನ್ನಯ್ಯಗೆ ಶಿವಮೊಗ್ಗ ಜೈಲಿನಿಂದ ಬಿಡುಗಡೆ

 ಶಿವಮೊಗ್ಗ  LIVE 

ಶಿವಮೊಗ್ಗ: ಜಾಮೀನ ಮಂಜೂರಾಗಿ 24 ದಿನದ ಬಳಿಕ ಚಿನ್ನಯ್ಯ ಅಲಿಯಾಸ್‌ ಬುರುಡೆ ಚಿನ್ನಯ್ಯಗೆ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಭಾಗ್ಯ (Chinnayya released) ಸಿಕ್ಕಿದೆ. ಇಂದು ಬೆಳಗ್ಗೆ ಆತನ ಪತ್ನಿ, ಸಹೋದರಿ ಮತ್ತು ವಕೀಲರು ಚಿನ್ನಯ್ಯನನ್ನು ಜೈಲಿನಿಂದ ಕರೆದೊಯ್ದರು.

ಯಾರು ಈ ಚಿನ್ನಯ್ಯ?

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಪ್ರತ್ಯಕ್ಷವಾಗಿದ್ದ. ಮಾಸ್ಕ್‌ ಧರಿಸಿ ತನಿಖಾ ತಂಡಕ್ಕೆ ಶವಗಳನ್ನು ಹೂತಿಟ್ಟ ಜಾಗ ತೋರಿಸುತ್ತಿದ್ದ. ಈತ ತಿಳಿಸಿದ ಕಡೆಗಳಲ್ಲಿ ಅವಶೇಷಗಳು ಪತ್ತೆಯಾಗದ ಹಿನ್ನೆಲೆ ಮಾಸ್ಕ್‌ ಮ್ಯಾನ್‌ ಅಲಿಯಾಸ್‌ ಚಿನ್ನಯ್ಯನನ್ನು ಬಂಧಿಸಲಾಗಿತ್ತು. ಬೆಳ್ತಂಗಡಿ ನ್ಯಾಯಾಲಯದಲ್ಲಿ ಈತನ ವಿಚಾರಣೆ ನಡೆಯುತ್ತಿತ್ತು. ಸುರಕ್ಷತೆ ದೃಷ್ಟಿಯಿಂದ ಬುರುಡೆ ಚಿನ್ನಯ್ಯನನ್ನು ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು.

Mask-Man-Chinnaiah-released-from-shimoga-jail

ಜಾಮೀನು ಸಿಕ್ಕರು ಬಿಡುಗಡೆಯಾಗಿರಲಿಲ್ಲ

ನಾಲ್ಕು ತಿಂಗಳಿನಿಂದ ಜೈಲಿನಲ್ಲಿದ್ದ ಚಿನ್ನಯ್ಯನಿಗೆ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ ನ.24ರಂದು 12 ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ ಬಾಂಡ್ ಮತ್ತು ಶೂರಿಟಿ ನೀಡಲು ಯಾರೂ ಮುಂದೆ ಬಾರದ ಕಾರಣ ಬಿಡುಗಡೆ ಸಾಧ್ಯವಾಗಿರಲಿಲ್ಲ. ಬುಧವಾರ ಆತನ ಪತ್ನಿ ಮಲ್ಲಿಕಾ ಒಂದು ₹1,00,000 ಬಾಂಡ್ ಮತ್ತು ಇಬ್ಬರು ಜಾಮೀನುದಾರರಿಂದ ಬೆಳ್ತಂಗಡಿ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯಕ್ಕೆ ಶೂರಿಟಿ ಕೊಡಿಸಿ ಕಾನೂನು ಪ್ರಕ್ರಿಯೆ ಪೂರೈಸಿದ್ದಾರೆ.

Mask-Man-chinnaiah-shifted-to-Shimoga-prison
ದಕ್ಷಿಣ ಕನ್ನಡದಿಂದ ಶಿವಮೊಗ್ಗ ಜೈಲಿಗೆ ಬುರುಡೆ ಚಿನ್ನಯ್ಯನನ್ನು ಕರೆತಂದ ಪೊಲೀಸರು.

ಇದನ್ನೂ ಓದಿ » ಆಹಾರ ಮಳಿಗೆ ಮಾಲೀಕರೆ ಇವರ ಟಾರ್ಗೆಟ್‌, ಅಧಿಕಾರಿಗಳಿಂದ ವಾರ್ನಿಂಗ್‌, ಏನಿದು ಪ್ರಕರಣ?

ನಿನ್ನೆಯೆ ರಿಲೀಸ್‌ ಆಗಬೇಕಿತ್ತು

ಬುರುಡೆ ಚಿನ್ನಯ್ಯ ಬುಧವಾರ ಸಂಜೆಯೆ ಬಿಡುಗಡೆ ಅಗಬೆಕಿತ್ತು. ಆದರೆ ದಕ್ಷಿಣ ಕನ್ನಡದಿಂದ ಆತನ ಪತ್ನಿ ಬರುವುದು ತಡವಾಗಿತ್ತು. ಸಂಜೆ 6.30ರ ಬಳಿಕ ಕೇಂದ್ರ ಕಾರಾಗೃಹದಿಂದ ಬಿಡುಗಡೆಗೆ ಅವಕಾಶವಿಲ್ಲ. ಅದ್ದರಿಂದ ಇಂದು ಬೆಳಗ್ಗೆ ಬರುಡೆ ಚಿನ್ನಯ್ಯನನ್ನು ರಿಲೀಸ್‌ ಮಾಡಲಾಗಿದೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment