ಶಿವಮೊಗ್ಗದಲ್ಲಿ ಸಡಗರದ ಕ್ರಿಸ್ಮಸ್, ರಾತ್ರಿಯಿಂದಲೆ ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ, ದಿವ್ಯ ಬಲಿ ಪೂಜೆ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 25 DECEMBER 2022

ಶಿವಮೊಗ್ಗ : ಕ್ರಿಸ್ಮಸ್ ಹಬ್ಬವನ್ನು (Christmas festival) ಶಿವಮೊಗ್ಗ ನಗರದಲ್ಲಿ ಸಡಗರದಿಂದ ಆಚರಿಸಲಾಯಿತು. ರಾತ್ರಿಯಿಂದಲೆ ಚರ್ಚ್ ಗಳಲ್ಲಿ ಪ್ರಾರ್ಥನೆ ನೆರವೇರಿಸಲಾಯಿತು. ಬೆಳಗ್ಗೆಯಿಂದ ಸಾರ್ವಜನಿಕರು ಚರ್ಚ್ ಗೆ ಭೇಟಿ ನೀಡಿ ಖುಷಿಪಟ್ಟರು.

Shimoga Nanjappa Hospital

ನಗರದ ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ರಾತ್ರಿ ಪ್ರಾರ್ಥನೆ (Christmas festival) ಸಲ್ಲಿಸಲಾಯಿತು. ಬಿಷಪ್ ಫ್ರಾನ್ಸಿಸ್ ಮೊರಾಸೊ ಅವರು ದಿವ್ಯ ಬಲಿ ಪೂಜೆ ನೆರವೇರಿಸಿದರು. ಬಳಿಕ ಗೋದಲಿ ಮುಂದೆ ಪ್ರಾರ್ಥನೆ ನೆರವೇರಿಸಿದರು. ಸೇಕ್ರೆಡ್ ಹಾರ್ಟ್ ಚರ್ಚಿನ ಗುರುಗಳಾದ ಫಾದರ್ ಸ್ಟ್ಯಾನ್ಲಿ ಡಿಸೋಜಾ ಸೇರಿದಂತೆ ವಿವಿಧ ಧರ್ಮ ಕೇಂದ್ರದ ಗುರುಗಳು ಉಪಸ್ಥಿತರಿದ್ದರು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಮತ್ತೆ ಕೊರೋನ ಪ್ರತ್ಯಕ್ಷ, ಜಿಲ್ಲಾಡಳಿತದಿಂದ ವರದಿ ರಿಲೀಸ್

ನಗರದ ವಿವಿಧೆಡೆಯಿಂದ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದ ಕ್ರೈಸ್ತರು ರಾತ್ರಿ ನಡೆದ ಪ್ರಾರ್ಥನೆಯಲ್ಲಿ ಭಾಗವಹಿಸಿದರು. ಶ್ರದ್ಧಾ ಭಕ್ತಿಯಿಂದ ಏಸು ಕ್ರಿಸ್ತನನ್ನು ಪ್ರಾರ್ಥಿಸಿದರು.

ಕಳೆದ ಎರಡು ವರ್ಷ ಕೋವಿಡ್ ಕಾರಣಕ್ಕೆ ಪ್ರಾರ್ಥನೆ ನೆರವೇರಿಸಿ ಚರ್ಚ್ ಬಾಗಿಲು ಬಂದ್ ಮಾಡಲಾಗಿತ್ತು. ಆದರೆ ಈ ಬಾರಿ ಬೆಳಗ್ಗೆಯಿಂದ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಗರದ ವಿವಿಧೆಡೆಯಿಂದ ಆಗಮಿಸಿದ್ದ ಸರ್ವ ಧರ್ಮಿಯರು ಚರ್ಚ್ ಗೆ ಭೇಟಿ ನೀಡಿ, ಕ್ರಿಸ್ಮಸ್ ಹಬ್ಬದ ಸಡಗರ ಕಣ್ತುಂಬಿಕೊಂಡರು.

Shimoga nanjappa hospital

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment