ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 28 DECEMBER 2024
ಶಿವಮೊಗ್ಗ : ಸಿಟಿ (City) ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ಡಿಸೆಂಬರ್ 29ರಂದು ಚುನಾವಣೆ ನಡೆಯಲಿದೆ. 15 ನಿರ್ದೇಶಕರ ಸ್ಥಾನಕ್ಕೆ 32 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಮತದಾರರ ಮನವೊಲಿಸಲು ಅಭ್ಯರ್ಥಿಗಳು ಕಡೆ ಕ್ಷಣದಲ್ಲಿ ನಾನಾ ಕಸರತ್ತು ನಡೆಸುತ್ತಿದ್ದಾರೆ. ಫ್ಲೆಕ್ಸುಗಳ ಅಬ್ಬರ, ಹಣ, ಗಿಫ್ಟುಗಳ ಹಂಚಿಕೆ ಆರೋಪ, ಜಾತಿ ಪ್ರಭಾವದ ಗುಸುಗುಸು ಕೂಡ ಕೇಳಿ ಬಂದಿದೆ.
ಭಾನುವಾರ ನಡೆಯಲಿದೆ ಚುನಾವಣೆ
ಸಿಟಿ ಕೋ ಆಪರೇಟಿವ್ ಬ್ಯಾಂಕ್ನ 15 ನಿರ್ದೇಶಕರ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆಯಲಿದೆ. ನ್ಯಾಷನಲ್ ಹೈಸ್ಕೂಲ್ ಆವರಣದಲ್ಲಿ ಮತದಾನ ಕೇಂದ್ರ ಸ್ಥಾಪಿಸಲಾಗಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಒಟ್ಟು 4080 ಮತದಾರರು ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ.
ಸಿಟಿ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರ ಚುನಾವಣೆಗೆ ಹಿರಿಯರಿಗೆ ಹಲವು ಕಿರಿಯ ಅಭ್ಯರ್ಥಿಗಳು ಸವಾಲೊಡ್ಡಿದ್ದಾರೆ. ಹಿರಿಯರೆಲ್ಲ ಸೇರಿ ಬ್ಯಾಂಕನ್ನು ಸಧೃಡಗೊಳಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಕಿರಿಯರಿಗು ಅವಕಾಶ ಕೊಡಬೇಕು. ಹಳೆ ಬೇರು, ಹೊಸ ಚಿಗುರು ಎಂಬಂತೆ ಯುವಕರು ಮತ್ತು ಹಿರಿಯರು ಒಗ್ಗೂಡಿದಾಗ ಬ್ಯಾಂಕನ್ನು ಮತ್ತಷ್ಟು ಗಟ್ಟಿಗೊಳಿಸಬಹುದು. ಹಾಗಾಗಿ ನಮಗೆ ಒಂದು ಅವಕಾಶ ಕೊಡಲಿ. – ಎಂ.ವಿಜಯ್, ನಿರ್ದೇಶಕರ ಸ್ಥಾನದ ಅಭ್ಯರ್ಥಿ ಎಸ್.ಟಿ. ಮೀಸಲು ಕ್ಷೇತ್ರದಿಂದ ನಾಲ್ವರು ಅಭ್ಯರ್ಥಿಗಳಿದ್ದೇವೆ. ಈ ಬಾರಿ ಕಿರಿಯರಿಗೆ ಅವಕಾಶ ಕೊಟ್ಟರೆ ಹಿರಿಯರೊಂದಿಗೆ ಕೆಲಸ ಮಾಡಿ, ಬ್ಯಾಂಕ್ನ ಭವಿಷ್ಯಕ್ಕೆ ಅನುಕೂಲವಾಗುವಂತೆ ಸಧೃಡಗೊಳಿಸುತ್ತೇವೆ. ನನ್ನ ಗುರುತು ಟಿ.ವಿ. ಕ್ರಮ ಸಂಖ್ಯೆ 21ಕ್ಕೆ ಮತದಾರರು ಮತ ಚಲಾಯಿಸುತ್ತಾರೆ ಎಂಬ ನಂಬಿಕೆ ಇದೆ. – ಬಿ.ಲೋಕೇಶ್, ನಿರ್ದೇಶಕರ ಸ್ಥಾನದ ಅಭ್ಯರ್ಥಿಹಿರಿಯರಿಗೆ ಕಿರಿಯ ಎದುರಾಳಿಗಳು
ಬ್ಯಾಂಕ್ ಸಧೃಡಗೊಳಿಸಿದ್ದೇ ನಮ್ಮ ಸಾಧನೆ
ಇನ್ನೊಂದೆಡೆ ಹಿರಿಯರು ಮತ್ತು ಹಾಲಿ ನಿರ್ದೇಶಕರು ಪ್ರತ್ಯೇಕ ತಂಡ ರಚಿಸಿಕೊಂಡಿದ್ದಾರೆ. ತಮ್ಮ ಆಡಳಿತಾವಧಿಯಲ್ಲಿನ ಸಾಧನೆಯ ಪಟ್ಟಿಯನ್ನು ಮುಂದಿಟ್ಟು ಮತ ಕೇಳುತ್ತಿದ್ದಾರೆ.
ಬ್ಯಾಂಕ್ಗೆ 112 ವರ್ಷದ ಇತಿಹಾಸ ಇದೆ. ಈ ಬಾರಿ ಚುನಾವಣೆಗೆ 15 ಜನ ಹಾಲಿ ನಿರ್ದೇಶಕರು ಸ್ಪರ್ಧೆ ಮಾಡಿದ್ದೇವೆ. 100 ಕೋಟಿ ಠೇವಣಿ ಸಂಗ್ರಹ ಮಾಡಿದ್ದೇವೆ. ಆರ್ಬಿಐ ನಿಯಮ ಪಾಲಿಸುತ್ತಿದ್ದೇವೆ. 500 ಕೋಟಿ ರೂ.ಗು ಹೆಚ್ಚು ವಹಿವಾಟು ನಡೆಸುತ್ತಿದ್ದೇವೆ. 118 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ.
ಉಮಾಶಂಕರ ಉಪಾಧ್ಯ, ಅಧ್ಯಕ್ಷರು, ಸಿಟಿ ಕೋ ಅಪರೇಟಿವ್ ಬ್ಯಾಂಕ್
ಚುನಾವಣೆ ಹಿನ್ನೆಲೆ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ನಗರದ ವಿವಿಧೆಡೆ ನೂರಾರು ಫ್ಲೆಕ್ಸ್ ಅಳವಡಿಸಿದ್ದರು. ಮತಗಟ್ಟೆ ಇರುವ ನ್ಯಾಷನಲ್ ಹೈಸ್ಕೂಲ್ನ ರಸ್ತೆಯಲ್ಲಂತು ಅಡಿಗಡಿಗೆ ಫ್ಲೆಕ್ಸ್ ಅಳವಡಿಸಲಾಗಿತ್ತು. ಹಾಗಾಗಿ ಸಿಟಿ ಕೋ ಆಪರೇಟಿವ್ ಬ್ಯಾಂಕ್ ಚುನಾವಣೆ ಬಗ್ಗೆ ಜನರಲ್ಲಿ ಸಹಜ ಕುತೂಹಲ ಮೂಡಿದೆ. ಇನ್ನೊಂದೆಡೆ ಈ ಪರಿ ಫ್ಲೆಕ್ಸ್ ಆಳವಡಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಮಹಾನಗರ ಪಾಲಿಕೆ ಶುಕ್ರವಾರ ಸಂಜೆ ವೇಳೆಗೆ ಫ್ಲೆಕ್ಸ್ಗಳನ್ನು ತೆರವು ಮಾಡಿದೆ. ಬ್ಯಾಂಕ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಫ್ಲೆಕ್ಸ್ಗಳನ್ನು ಹಾಕಲಾಗಿದೆ. ಮತದಾರರಿಗೆ ನಮ್ಮ ಕೆಲಸ ಕಾರ್ಯಗಳು ಇಷ್ಟವಾದರೆ ಆಯ್ಕೆ ಮಾಡುತ್ತಾರೆ. ಇನ್ನು, ಇಷ್ಟೊಂದು ಅಭ್ಯರ್ಥಿಗಳು, ಅಬ್ಬರಕ್ಕೆ ಕಾರಣ ಗೊತ್ತಿಲ್ಲ. ಎಸ್.ಕೆ.ಮರಿಯಪ್ಪ, ಮಾಜಿ ಅಧ್ಯಕ್ಷ, ಸಿಟಿ ಕೋ ಆಪರೇಟಿವ್ ಬ್ಯಾಂಕ್ರಾರಾಜಿಸಿದ ಫ್ಲೆಕ್ಸುಗಳು ಕಿಕ್ ಔಟ್
ಹಣ, ಗಿಫ್ಟು, ಜಾತಿ ಪ್ರಭಾವ
ಇನ್ನೊಂದೆಡೆ ಮತದಾರರಿಗೆ ಹಣ, ಗಿಫ್ಟು ಹಂಚುತ್ತಿರುವ ಆರೋಪ ಕೇಳಿ ಬಂದಿದೆ. ಪ್ರತಿ ಮತಕ್ಕು ಇಂತಿಷ್ಟು ಎಂದು ನಿಗದಿ ಮಾಡಿ ಹಣ ಹಂಚಿಕೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇನ್ನು, ನಾನಾ ವಿಧದ ಗಿಫ್ಟುಗಳನ್ನು ಕೂಡ ನೀಡಲಾಗುತ್ತಿದೆ. ಅಭ್ಯರ್ಥಿಗಳ ಖರ್ಚು – ವೆಚ್ಚಕ್ಕೆ ಯಾವುದೇ ಮಿತಿ ಇಲ್ಲ. ಹಾಗಾಗಿ ಪ್ರಚಾರ ಕಣದಲ್ಲಿ ಅಬ್ಬರ ಜೋರಿದೆ. ಇವೆಲ್ಲದರ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಜಾತಿ ಹೆಸರಿನ ಮೆಸೇಜುಗಳನ್ನು ಕಳುಹಿಸಲಾಗಿತ್ತಿರುವ ಆರೋಪವು ಇದೆ. ‘ಎರಡು ದಿನದಿಂದ ಹಣ, ಬ್ಯಾಗ್, ಟಿಫನ್ ಬಾಕ್ಸ್, ಕುಕ್ಕರ್ ಹಂಚಿಕೆ ಮಾಡ್ತಿದ್ದಾರೆʼ ಎಂದು ಎಂ.ಉಮಾಶಂಕರ ಉಪಾಧ್ಯ ಆರೋಪಿಸಿದ್ದಾರೆ.
ಯಾಕಿಷ್ಟು ಜಿದ್ದಾಜಿದ್ದಿ? ಏನಿದರ ಮರ್ಮ?
ಸಿಟಿ ಕೋ ಆಪರೇಟಿವ್ ಬ್ಯಾಂಕ್ನ ನಿರ್ದೇಶಕರಾದವರು ಬಳಿಕ ನಗರಸಭೆ ಸದಸ್ಯರಾಗಿದ್ದಾರೆ, ಪಾಲಿಕೆಗು ಪಾದಾರ್ಪಣೆ ಮಾಡಿದ್ದಾರೆ. ಹಾಗಾಗಿ ಇಲ್ಲಿ ಆಯ್ಕೆಯಾದವರು ಮುಂದೆ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಸ್ಪರ್ಧಿಸಬಹುದು ಎಂಬ ದೂರದೃಷ್ಟಿಯೊಂದಿಗೆ ಹಲವರು ಕಣಕ್ಕಿಳಿದಿದ್ದಾರೆ ಎನ್ನಲಾಗಿದೆ. ಪಾಲಿಕೆ ಚುನಾವಣೆ ಹೊಸ್ತಿಲಲ್ಲಿ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಹಾಗಾಗಿ ಕೆಲವರ ಪಾಲಿಗೆ ಇದು ಪಾಲಿಕೆ ಚುನಾವಣೆಯ ತಾಲೀಮು ಎಂಬಂತಾಗಿದೆ.
ಇದನ್ನೂ ಓದಿ » ಪ್ರಯಾಣಿಕರೆ ಗಮನಿಸಿ, ಡಿ.31ರಿಂದ ರಸ್ತೆಗಿಳಿಲ್ಲ KSRTC ಬಸ್, ಕಾರಣವೇನು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422