ಮೆಗ್ಗಾನ್ ಆಸ್ಪತ್ರೆ ಮುಂದೆ ಆಂಬುಲೆನ್ಸ್ ಚಾಲಕರ ಮಧ್ಯೆ ಗಲಾಟೆ, ಪೊಲೀಸ್ ಠಾಣೆ ಮೆಟ್ಟಿಲೇರಿದ ಕೇಸ್

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 ಡಿಸೆಂಬರ್ 2021

ರೋಗಿಯನ್ನು ಕರೆದೊಯ್ಯುವ ವಿಚಾರವಾಗಿ ಇಬ್ಬರು ಆಂಬುಲೆನ್ಸ್ ಚಾಲಕರ ಮಧ್ಯೆ ಗಲಾಟೆಯಾಗಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

AVvXsEichXaELYeDOhFU0n9XstiInpkhsI4y9y5uB VImqATyx1h3CLRA4zsRrFRxoiVo U462f0MYCBVD

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಮುಂಭಾಗ ಘಟನೆ ಸಂಭವಿಸಿದೆ. ಖಾಸಗಿ ಆಂಬಲೆನ್ಸ್ ಚಾಲಕರಾದ ಸಮೀರ್ ಮತ್ತು ಅಮರೇಶ್ ಎಂಬುವವರ ಮಧ್ಯೆ ಗಲಾಟೆಯಾಗಿದೆ.

ಬಾಡಿಗೆ ವಿಚಾರವಾಗಿ ಇಬ್ಬರ ಮಧ್ಯೆ ಗಲಾಟೆಯಾಗಿದ್ದು, ಸಮೀರ್ ಎಂಬಾತ ಮರದ ಪೀಸ್ ತೆಗೆದುಕೊಂಡು ಅಮರೇಶ್ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲದೆ ಕೊಲೆ ಬೆದರಿಕೆಯನ್ನು ಒಡ್ಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Kalleshwara-Enterprises.webp

ಹಲ್ಲೆ ಮತ್ತು ಕೊಲೆ ಬೆದರಿಕೆ ಸಂಬಂಧ ಅಮರೇಶ್, ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ABOUT ME NEW FINAL FINAL

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment