ಹೊಳೆಹೊನ್ನೂರು, ಆನವೇರಿಯಲ್ಲಿ ಅಕ್ರಮ ದಂಧೆ, ಎಸ್‌.ಪಿ ಭೇಟಿಯಾದ ನಿಯೋಗ, ಮನವಿಯಲ್ಲಿ ಏನಿದೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
ಶಿವಮೊಗ್ಗ : ಹೊಳೆಹೊನ್ನೂರು ಸುತ್ತಮುತ್ತ ಅಕ್ರಮವಾಗಿ ಗಾಂಜಾ, ಓ.ಸಿ, ಇಸ್ಪೀಟು, ಐಪಿಎಲ್‌ ಬೆಟ್ಟಿಂಗ್‌ (Betting) ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿ ಶಾಸಕಿ ಶಾರದಾ ಪೂರ್ಯಾನಾಯ್ಕ್‌, ವಿಧಾನ ಪರಿಷತ್‌ ಸದಸ್ಯ ಡಾ. ಧನಂಜಯ ಸರ್ಜಿ ನೇತೃತ್ವದಲ್ಲಿ ಜಿಲ್ಲಾ ರಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
➤ ಸುದ್ದಿಯ ಮುಂದಿನ 10 ಪ್ಯಾರಾಗಳು ಕೆಳಗಿವೆ.

ಇದನ್ನೂ ಓದಿ » ಶಿವಮೊಗ್ಗ, ಸಾಗರ, ಚಿಕ್ಕಮಗಳೂರು, ಹಾಸನದಲ್ಲಿ ಉದ್ಯೋಗ, ಯಾವೆಲ್ಲ ಹುದ್ದೆಗಳಿವೆ? ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಸ್ಥಳೀಯರ ಜೊತೆಗೆ ಜಿಲ್ಲಾ ಪೊಲೀಸ್‌ ಕಚೇರಿಗೆ ತೆರಳಿದ್ದ ಶಾಸಕರು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಬಲಿಯಾಗುತ್ತಿದ್ದಾರೆ ಮುಗ್ಧ ಜನರು

Memorandum-to-sp-about-holehonnuru-by-mla-and-mlc

ಹೊಳೆಹೊನ್ನೂರಿನ ವಿವಿಧೆಡೆ 24 ಗಂಟೆಯು ದಂಧೆ ನಡೆಯುತ್ತಿದೆ. ಸರ್ಕಲ್‌ಗಳು, ಕೆಲವು ಹೊಟೇಲ್‌ಗಳು ಸೇರಿದಂತೆ ವಿವಿಧೆಡೆ ಬೆಟ್ಟಿಂಗ್‌ (Betting), ಓ.ಸಿ, ಇಸ್ಪೀಟ್‌ ದಂಧೆ ನಡೆಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದರು.

ಹೊಳೆಹೊನ್ನೂರು, ಆನವೇರಿ ಭಾಗದಲ್ಲಿ ಇಸ್ಪೀಟು, ಓ.ಸಿ ದಂಧೆಗಳು ನಡೆಯುತ್ತಿವೆ. ಆಡಲು ಹೋಗುವವರನ್ನು ಕರೆದೊಯ್ಯಲು ಪ್ರತ್ಯೇಕ ತಂಡವಿದೆ ಎಂದು ಪದೇ ಪದೆ ದೂರು ಬರುತಿತ್ತು. ಕಡಿವಾಣ ಹಾಕುವಂತೆ ಮನವಿ ಕೊಟ್ಟಿದ್ದೇವೆ. ಈ ದಂಧೆಗಳು ನಿಲ್ಲಿಸದೆ ಇದ್ದರೆ ಮುಂದಿನ ಪೀಳಿಗೆಗೆ ಮಾರಕವಾಗಲಿದೆ. ದಂಧೆಕೋರರ ಹೆಸರುಗಳನ್ನು ಹೇಳಿ ಎಂದು ಎಸ್‌.ಪಿ.ಯವರು ನಮ್ಮನ್ನೆ ಕೇಳುತ್ತಿದ್ದಾರೆ. ಅವರು ತನಿಖೆ ನಡೆಸಿ ಪತ್ತೆಹಚ್ಚಬೇಕು.

ಶಾರದಾ ಪೂರ್ಯಾನಾಯ್ಕ್‌, ಶಿವಮೊಗ್ಗ ಗ್ರಾಮಾಂತರ ಶಾಸಕಿ

Memorandum-to-sp-about-holehonnuru-by-mla-and-mlc

ಓ.ಸಿ., ಇಸ್ಪೀಟು, ಆನ್‌ಲೈನ್‌ ಬೆಟ್ಟಿಂಗ್‌ ಮೂಲಕ ಜನರು ಲಕ್ಷಾಂತರ ರೂ. ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಮನೆತನಗಳೆ ಹಾಳಾಗುತ್ತಿವೆ. ಇಂತಹ ದಂಧೆಕೋರರ ಕುರಿತು ಮಾಹಿತಿ ಲಭ್ಯವಿದ್ದರೆ ಗೌಪ್ಯವಾಗಿ ಪೊಲೀಸರಿಗೆ ತಿಳಿಸಲು ಅವಕಾಶವಿದೆ. ಕಠಿಣ ಕ್ರಮವಾದರೆ ಮಾತ್ರ ಇದಕ್ಕೆ ಕಡಿವಾಣ ಬೀಳಲಿದೆ.

ಡಾ. ಧನಂಜಯ ಸರ್ಜಿ, ವಿಧಾನ ಪರಿಷತ್‌ ಸದಸ್ಯ

ಹಣದ ಆಸೆಗೆ ಮುಗ್ದ ಜನರು ಈ ದಂಧೆಗಳಿಗೆ ಬಲಿಯಾಗುತ್ತಿದ್ದಾರೆ. ಇದಕ್ಕೆ ಕೂಡಲೆ ಕಡಿವಾಣ ಹಾಕಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

Leave a Comment