ಬಿಹಾರ ಮುಖ್ಯಮಂತ್ರಿ ವಿರುದ್ಧ ಶಿವಮೊಗ್ಗದಲ್ಲಿದಲ್ಲಿ ಅಲ್ಪಸಂಖ್ಯಾತರ ಆಕ್ರೋಶ, ಕಾರಣವೇನು?

 ಶಿವಮೊಗ್ಗ  LIVE 

ಶಿವಮೊಗ್ಗ: ಆಯುಷ್‌ ವೈದ್ಯರ ಪ್ರಮಾಣ ಪತ್ರ ವಿತರಿಸುವ ವೇಳೆ ಮಹಿಳೆ ಧರಿಸಿದ್ದ ಹಿಜಾಬ್‌ನ್ನು ಸಾರ್ವಜನಿಕ ವೇದಿಕೆಯಲ್ಲಿ ಎಳೆದು ಅವಮಾನ ಮಾಡಿದ ಬಿಹಾರ ಮುಖ್ಯಮಂತ್ರಿ (Bihar CM) ನಿತೀಶ್ ಕುಮಾರ್ ವಿರುದ್ಧ ಕೂಡಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಹಾರ ಸಿಎಂ ಧಾರ್ಮಿಕ ವಸ್ತ್ರವನ್ನು ಎಳೆದಿದ್ದಾರೆ. ಇದು ದೇಶಾದ್ಯಂತ ಆಕ್ರೋಶ ಮತ್ತು ಆತಂಕಕ್ಕೆ ಕಾರಣವಾಗಿದೆ. ಇದು ಮಹಿಳೆಯ ಗೌರವ, ಸ್ವಾತಂತ್ರ್ಯ ಹಾಗೂ ಧಾರ್ಮಿಕ ಹಕ್ಕುಗಳ ಮೇಲೆ ಆದ ಗಂಭೀರ ದಾಳಿಯಾಗಿದೆ ಎಂದು ಕಾರ್ಯಕರ್ತರು ತಿಳಿಸಿದರು.

Protest-against-Bihar-cm-nitish-kumar-in-Shimoga

ಘಟನೆ ಕುರಿತು ರಾಷ್ಟ್ರಪತಿ ಸ್ವತಂತ್ರ ತನಿಖೆಗೆ ಆದೇಶಿಸಬೇಕು. ಸಿಎಂ ನಿತೀಶ್ ಕುಮಾ‌ರ್ ಸಾರ್ವಜನಿಕವಾಗಿ ಮಹಿಳೆಯ ಕ್ಷಮೆ ಯಾಚಿಸುವಂತೆ ಸೂಚಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಇದನ್ನೂ ಓದಿ » ಜಾಮೀನು ಮಂಜೂರಾಗಿ 24 ದಿನದ ಬಳಿಕ ಬುರುಡೆ ಚಿನ್ನಯ್ಯಗೆ ಶಿವಮೊಗ್ಗ ಜೈಲಿನಿಂದ ಬಿಡುಗಡೆ

ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಸಯ್ಯದ್ ವಾಹಿದ್ ಅಡ್ಡು, ಪ್ರಮುಖರಾದ ರಮೇಶ್ ಶಂಕರಘಟ್ಟ, ಕಲೀಂ ಪಾಷಾ, ಕಿರಣ್ ಫರ್ನಾಂಡಿಸ್, ಶಿವಾನಂದ, ಸ್ಟೆಲ್ಲಾ ಮಾರ್ಟಿನ್, ರಿಯಾಜ್, ಶಮೀಮ್ ಬಾನು ಮತ್ತಿತರರಿದ್ದರು.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment