ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 10 ಜನವರಿ 2020
ಶಿವಮೊಗ್ಗ ಮಹಾನಗರ ಪಾಲಿಕೆ ಮುಂದೆ ಹೈಡ್ರಾಮಾ. ಸಚಿವರ ಕಾರು ತಡೆದು ಘೆರಾವ್ ಹಾಕಾಲು ಮುಂದಾದ ಕಾಂಗ್ರೆಸ್ ಕಾರ್ಪೊರೇಟರ್’ಗಳು ಅರೆಸ್ಟ್.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಘೆರವ್ ಹಾಕಲು ಕಾರಣವೇನು?
ಕೊಳಚೆ ಪ್ರದೇಶ ಅಭಿವೃದ್ಧಿ ನಿಗಮದ ವತಿಯಿಂದ 9 ಕೊಳಚೆ ಪ್ರದೇಶ ವಾಸಿಗಳಿಗೆ ಮನೆ ಕಟ್ಟಿಸಿಕೊಡಲು ತಿರ್ಮಾನಿಸಲಾಗಿತ್ತು. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ 1590 ಮನೆಗಳ ನಿರ್ಮಾಣಕ್ಕೆ ಕಳೆದ ವರ್ಷ ಗುದ್ದಲಿ ಪೂಜೆ ನೆರವೇರಿಸಲಾಗಿತ್ತು.
ಮನೆಗಳಿಗಾಗಿ ಸಾಮಾನ್ಯ ವರ್ಗದ ಫಲಾನುಭವಿಗಳಿಂದ 73,671 ರು. ಪರಿಶಿಷ್ಟ ಪಂಗಡ, ವರ್ಗದ ಫಲಾನುಭವಿಗಳಿಂದ 49 ಸಾವಿರ ರೂ. ಹಣ ಕಟ್ಟಿಸಿಕೊಳ್ಳಲಾಗಿದೆ. ಈ ವೇಳೆ, ಆರು ತಿಂಗಳಲ್ಲಿ ಮನೆ ನಿರ್ಮಿಸಿಕೊಡುವ ಭರವಸೆ ನಿಡಲಾಗಿತ್ತು. ಆದರೆ ವರ್ಷ ಕಳೆದರು ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದ ಹಣ ನೀಡಿರುವ ಫಲಾನುಭವಿಗಳು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಡಿಸಿ ಆಫೀಸಿಂದ ಪಾಲಿಕೆಗೆ ಶಿಫ್ಟ್ ಆದ ಪ್ರತಿಭಟನೆ
ಪಾಲಿಕೆಯ ಕಾಂಗ್ರೆಸ್ ವಿರೋಧ ಪಕ್ಷದ ನಾಯಕ ರಮೇಶ್ ಹೆಗ್ಡೆ, ಕಾರ್ಪೊರೇಟರ್’ಗಳಾದ ಹೆಚ್.ಸಿ.ಯೋಗೇಶ್, ಯಮುನಾ ರಂಗೇಗೌಡ, ರೇಖಾ ರಂಗನಾಥ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಫಲಾನುಭವಿಗಳು ಪ್ರತಿಭಟನೆ ನಡೆಸಿದರು. ಸಚಿವ ಈಶ್ವರಪ್ಪ ಅವರು ಪಾಲಿಕೆಗೆ ಭೇಟಿ ನೀಡುವ ವಿಚಾರ ತಿಳಿಯುತ್ತಿದ್ದಂತೆ, ಪ್ರತಿಭಟನೆಯನ್ನು ಡಿಸಿ ಕಚೇರಿಯಿಂದ ಪಾಲಿಕೆ ಗೇಟ್ ಮುಂದೆ ಶಿಫ್ಟ್ ಮಾಡಲಾಯಿತು.
ಪಾಲಿಕೆ ಗೇಟ್ ಮುಂದೆ ಹೈ ಡ್ರಾಮಾ
ಮಹಾನಗರ ಪಾಲಿಕೆ ಮುಂದೆ ಫಲಾನುಭವಿಗಳು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸಚಿವ ಈಶ್ವರಪ್ಪ ಅವರ ಕಾರು ಆಗಮಿಸುತ್ತಿದ್ದಂತೆ ಕಾರು ತಡೆಯಲು ಮುಂದಾದರು. ಅದರೆ ಪೊಲೀಸರು ಬಿಗಿ ಭದ್ರತೆ ಬಂದೋಬಸ್ತ್ ಕೈಗೊಂಡಿದ್ದರಿಂದ, ಕಾರು ತಡೆಯಲು ಸಾದ್ಯವಾಗಲಿಲ್ಲ.
ಸಚಿವರ ಕಾರು ಪಾಲಿಕೆಯೊಳಗೆ ಪ್ರವೇಶಿಸುತ್ತಿದ್ದಂತೆ ಪೊಲೀಸರು ಗೇಟ್ ಬಂದ್ ಮಾಡಿದರು. ಆದರೆ ಕಾರ್ಪೊರೇಟರ್’ಗಳು ಮತ್ತು ಫಲಾನುಭವಿಗಳು ಗೇಟು ತೆರೆಯಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಎಲ್ಲರನ್ನು ಬಂಧಿಸಿದರು.
ಕಮಿಷನರ್ ಕಾರನ್ನು ಒಳಬಿಡಲಿಲ್ಲ
ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ, ಪಾಲಿಕೆಯ ಗೇಟ್ ಬಂದ್ ಮಾಡಲಾಗಿತ್ತು. ಯಾವುದೇ ವಾಹನಗಳನ್ನು ಒಳಗೆ ಮತ್ತು ಹೊರಗೆ ಬಿಡುತ್ತಿರಲಿಲ್ಲ. ಈ ವೇಳೆ ಆಗಮಿಸಿದ ಪಾಲಿಕೆ ಕಮಿಷನರ್ ಅವರ ಕಾರು, ಹೊರಗೆ ನಿಲ್ಲಬೇಕಾಯಿತು. ಕಾರು ಇಳಿದು ಬಂದ ಕಮಿಷರ್ ಗೇಟ್’ನಿಂದ ನಡೆದುಕೊಂಡೇ ಕಚೇರಿಗೆ ತಲುಪುವಂತಾಯಿತು.
ಪ್ರತಿಭಟಿಸುತ್ತಿರುವವರು ಸಿದ್ದರಾಮಯ್ಯ ಸಂತತಿಯವರು
ಇನ್ನು, ಗೇಟ್ ಮುಂದೆ ಪ್ರತಿಭಟನೆ ನಡೆಸುತ್ತಿರುವ ಕುರಿತು ಸುದ್ದಿಗಾರರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಪ್ರಶ್ನಿಸಿದಾಗ, ಸಿದ್ದರಾಮಯ್ಯನ ಸಂತತಿ ತಾನೆ ಅದು. ನಾವು ಬದುಕಿದ್ದೇವೆ ಎಂದು ತೋರಿಸಿಕೊಳ್ಳಬೇಕಲ್ಲ. ಅದಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಶಿವಮೊಗ್ಗ ನಗರಕ್ಕೆ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡುತ್ತಿದ್ದೇವೆ. ವಿರೋಧ ಪಕ್ಷವಾಗಿ ಇಲ್ಲಿ ಬಂದು ಬೆಂಬಲ ಕೊಡಬೇಕಿತ್ತು. ಅದನ್ನು ಬಿಟ್ಟು ಪ್ರತಿಭಟನೆ ನಡೆಸುತ್ತಿರುವುದು ಸರಿಯಲ್ಲ ಎಂದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]