ಶಿವಮೊಗ್ಗ ಲೈವ್
SHIVAMOGGA LIVE NEWS | 24 APRIL 2024
ELECTION NEWS : 65 ವರ್ಷದಲ್ಲಿ ದೇಶಕ್ಕೆ ಕಾಂಗ್ರೆಸ್‍ನ ಕೊಡುಗೆ ಏನು ಎಂಬುದನ್ನು ಚೊಂಬಿನ ಮೂಲಕ ತೋರಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನರು ಸೊಪ್ಪು ಹಾಕುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಈ ಸುದ್ದಿಯನ್ನೂ ಓದಿ
ಅಬ್ಬಲಗೆರೆ ಬಳಿ ತುಂಗಾ ನಾಲೆಯಲ್ಲಿ ಬಾಲಕ ನಾಪತ್ತೆ, ಆಗಿದ್ದೇನು?
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಕಾಂಗ್ರೆಸ್ ಪಕ್ಷ ಕೇವಲ ಜಾಹೀರಾತಿಗೆ ಸೀಮಿತವಾಗಿದೆ. ಅವರಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ. ಎಣಿಕೆ ದಿನ ಮತದಾರರ ಭಾವನೆ ಏನು ಅನ್ನುವುದು ಗೊತ್ತಾಗಲಿದೆ. 28 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲಲಿದ್ದೇವೆ ಎಂದರು.
ಈ ಸುದ್ದಿಯನ್ನೂ ಓದಿ
ಶಿವಮೊಗ್ಗ ಉಪ ವಿಭಾಗಾಧಿಕಾರಿ ಗೊಂದಲಕ್ಕೆ ತೆರೆ, ವರ್ಗಾವಣೆ ಸಂಬಂಧ ಹೊಸ ಅಧಿಸೂಚನೆ
ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ರಾಜ್ಯಕ್ಕೆ ಹೆಚ್ಚು ಭಾರಿ ಬಂದು ಹೋಗಬೇಕು. ಇಲ್ಲವಾದಲ್ಲಿ ರಾಜ್ಯದ ಜನರು ಅವರನ್ನು ಮರೆತುಬಿಡುತ್ತಾರೆ.ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ರಾಜ್ಯಕ್ಕೆ ಹೆಚ್ಚು ಭಾರಿ ಬಂದು ಹೋಗಬೇಕು. ಇಲ್ಲವಾದಲ್ಲಿ ರಾಜ್ಯದ ಜನರು ಅವರನ್ನು ಮರೆತುಬಿಡುತ್ತಾರೆ.ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ಇನ್ನೆರಡು ದಿನ ಶಿವಮೊಗ್ಗ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಲಿದ್ದೇನೆ. ಸದ್ಯ ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಇದೆ ಎಂದು ತಿಳಿಸಿದರು.
ಇದನ್ನೂ ಓದಿ – ಶಿವಮೊಗ್ಗಕ್ಕೆ ಅಣ್ಣಾಮಲೈ ಆಗಮನ, ಚುನಾವಣ ಅಧಿಕಾರಿಗಳಿಂದ ಹೆಲಿಕಾಪ್ಟರ್, ಲಗೇಜ್ ಶೋಧ