ಶಿವಮೊಗ್ಗ ಲೈವ್.ಕಾಂ | SHIMOGA | 3 ಅಕ್ಟೋಬರ್ 2019
ನಗರದ ಹಳೇ ಕಾರಾಗೃಹ ಅವರಣದಲ್ಲಿ ಸ್ವಾತಂತ್ರ್ಯ ಉದ್ಯಾನವನ ನಿರ್ಮಿಸುತ್ತಿರುವುದು ಸ್ವಾಗತಾರ್ಹ. ಆದರೆ ಉದ್ಯಾನವನಕ್ಕೆ ಇಂತಹವರದ್ದೆ ಹೆಸರು ಇಡಬೇಕು ಎಂಬುದು ಸೂಕ್ತವಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ವೈ.ಎಚ್.ನಾಗರಾಜ್ ಹೇಳಿದ್ದಾರೆ.
ಮುಖ್ಯಮಂತ್ರಿ ಅವರು ಸಾರ್ವಜನಿಕ ಬಳಕೆಗೆ ಈ ಆವರಣ ನೀಡಲಾಗುವುದು ಎಂದು ಹೇಳಿರುವುದು ಸ್ವಾಗತಾರ್ಹವಾಗಿದೆ. ಆದರೆ ಉಪಮೇಯರ್ ಎಸ್.ಎನ್.ಚನ್ನಬಸಪ್ಪ ಅವರು ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಅಜಾದ್ ಅವರ ಹೆಸರಿಡಬೇಕು ಎಂದು ಹೇಳಿದ್ದಾರೆ. ಅದಕ್ಕೆ ಮುಖ್ಯಮಂತ್ರಿ ಅವರು ಒಪ್ಪಿಗೆ ನೀಡಿದ್ದಾರೆ. ಇದು ವಿನಾಕಾರಣ ಗೊಂದಲಕ್ಕೆ ಕಾರಣವಾಗಬಹುದು ಎಂದು ಹೇಳಿದ್ದಾರೆ.
ನಾಳೆ ಮತ್ತೆ ಕೆಲವರು ಬಸವಣ್ಣನವರ ಹೆಸರು ಸೂಚಿಸಬಹುದು. ಅಂಬೇಡ್ಕರ್ ಹೆಸರು ಹೇಳಬಹುದು. ಎಲ್ಲರೂ ಗಣ್ಯರೇ. ಯಾರ ಹೆಸರಿಡಲು ಸಾಧ್ಯ. ಸಾಹಿತ್ಯ, ಸಂಗೀತ, ಹೋರಾಟ, ರೈತ ಚಳುವಳಿಗಳ ತವರಿದು. ಅವರವರು ಹೆಸರು ಸೂಚಿಸಲು ಹೊರಟರೆ ಸಾವಿರ ಹೆಸರು ಬರುತ್ತವೆ. ಹೀಗಾಗಿ ಎಲ್ಲರು ಒಪ್ಪುವ ಹಾಗೆ ಸ್ವಾತಂತ್ರ್ಯ ಉದ್ಯಾನವನ ಎಂದು ಕರೆದರೆ ಸಾಕು ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇರುವಂತೆ ಫ್ರೀಡಂ ಪಾರ್ಕ್ ಎಂದು ಇಟ್ಟರೆ ಯಾವ ಸರ್ಕಾರಗಳು ಬಂದರೂ ಒಪ್ಪಿತ. ಇಲ್ಲದೆ ಇದ್ದರೆ ಗೊಂದಲ ತಪ್ಪಲ್ಲ. ಆಜಾದ್ ಸೇರಿದಂತೆ ಸಾವಿರಾರು ಜನರ ಹೋರಾಟ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಅವರ ಕೆಚ್ಚೆದೆಯ ಬಗ್ಗೆ ದೇಶ ಪ್ರೇಮದ ಬಗ್ಗೆ ಅಪಾರ ಗೌರವ ಇದೆ. ಅವರ ಹೆಸರನ್ನು ಇನ್ನೂ ಹೆಸರೆ ಇಟ್ಟಿರದ ರಸ್ತೆಗೆ ಇಡಬಹುದು. ಹಾಗಾಗಿ ಇದನ್ನು ಮರು ಪರಿಶೀಲನೆ ಮಾಡುವುದು ಒಳ್ಳೆಯದು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200