ಶಿವಮೊಗ್ಗ ಲೈವ್.ಕಾಂ | SHIMOGA NEWS | 20 MAY 2021
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತದೇಹಗಳು ಅದಲು ಬದಲಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಇನ್ನೇನು ಅಂತ್ಯಕ್ರಿಯೆ ಹೊತ್ತಿಗೆ ವಿಚಾರ ತಿಳಿದಿದ್ದು, ತಮ್ಮವರನ್ನು ಕಳೆದುಕೊಂಡು ದುಃಖದಲ್ಲಿದ್ದವರು ಮತ್ತಷ್ಟು ಫಜೀತಿ ಅನುಭವಿಸುವಂತಾಯಿತು.
![]() |
ಕರೋನದಿಂದ ಮೃತಪಟ್ಟ ಇಬ್ಬರ ಮೃತದೇಹಗಳು ಅದಲು ಬದಲಾಗಿದ್ದವು. ಇದಕ್ಕೆ ಕಾರಣವೇನು ಅನ್ನುವುದು ನಿಖರವಾಗಿ ತಿಳಿದು ಬಂದಿಲ್ಲ. ಆದರೆ ಕಡೆ ಕ್ಷಣದಲ್ಲಿ ವಿಚಾರ ಗೊತ್ತಾಗಿದೆ.
ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶಿವಮೊಗ್ಗದ ಷಡಾಕ್ಷರಪ್ಪ ಮತ್ತು ನ್ಯಾಮತಿ ತಾಲೂಕಿನ ಗ್ರಾಮವೊಂದರ ಮಲ್ಲಿಕಾರ್ಜುನಪ್ಪ ಮೃತಪಟ್ಟಿದ್ದರು. ಎರಡು ಕಡೆಯ ಕುಟುಂಬದವರಿಗೆ ಮೃತದೇಹಗಳನ್ನು ಹಸ್ತಾಂತರ ಮಾಡಲಾಗಿತ್ತು.
ಷಡಾಕ್ಷರಪ್ಪ ಅವರ ಕುಟುಂಬದವರಿಗೆ ಮಲ್ಲಿಕಾರ್ಜುನಪ್ಪ ಅವರ ಮೃತದೇಹವನ್ನು ಹಸ್ತಾಂತರಿಸಲಾಗಿತ್ತು. ಅದೆ ರೀತಿ ಮಲ್ಲಿಕಾರ್ಜುನಪ್ಪ ಕುಟುಂಬದವರಿಗೆ ಷಡಾಕ್ಷರಪ್ಪ ಅವರ ಮೃತದೇಹವನ್ನು ನೀಡಲಾಗಿತ್ತು.
ಅಂತ್ಯಕ್ರಿಯೆ ಹೊತ್ತಿಗೆ ವಿಚಾರ ಗೊತ್ತಾಯಿತು
ಶಿವಮೊಗ್ಗದ ಷಡಾಕ್ಷರಪ್ಪ ಅವರ ಕುಟುಂಬದವರು ಅಂತ್ಯಕ್ರಿಯೆ ಹೊತ್ತಿಗೆ, ಕೊನೆಯ ಭಾರಿಗೆ ಮುಖ ದರ್ಶನಕ್ಕೆ ಮುಂದಾದರು. ಈ ವೇಳೆ ಇದು ಷಡಾಕ್ಷರಪ್ಪ ಅವರ ಮೃತದೇಹವಲ್ಲ ಅನ್ನುವುದು ಗೊತ್ತಾಗಿದೆ. ಕೂಡಲೆ ಮೆಗ್ಗಾನ್ ಆಸ್ಪತ್ರೆ ಶವಾಗಾರವನ್ನು ಸಂಪರ್ಕಿಸಿದರು. ವಿಚಾರ ತಿಳಿಯುತ್ತಿದ್ದಂತೆ ಶವಾಗಾರದ ಸಿಬ್ಬಂದಿ ಪರಿಶೀಲನೆ ನಡೆಸಿ, ನ್ಯಾಮತಿಯ ಮಲ್ಲಿಕಾರ್ಜುನಪ್ಪ ಅವರ ಕುಟುಂಬದವರನ್ನು ಸಂಪರ್ಕಿಸಿ ವಿಚಾರ ತಿಳಿಸಿದರು.
ನ್ಯಾಮತಿಯಲ್ಲಿ ಮಲ್ಲಿಕಾರ್ಜುನಪ್ಪ ಅವರ ಕುಟುಂಬದವರು ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದರು. ವಿಚಾರ ಗೊತ್ತಾಗುತ್ತಿದ್ದಂತೆ ಮೃತದೇಹವನ್ನು ಶಿವಮೊಗ್ಗಕ್ಕೆ ಮರಳಿ ತಂದಿದ್ದಾರೆ.
ಕುಟುಂಬಗಳಿಗೆ ಮೃತದೇಹ ಹಸ್ತಾಂತರ
ಎರಡು ಕುಟುಂಬದವರು ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಗೆ ತಂದು ಬದಲು ಮಾಡಿಕೊಂಡಿದ್ದಾರೆ. ತಮ್ಮವರ ಮೃತದೇಹವನ್ನು ಪಡೆದು ಹಿಂತಿರುಗಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಿವಮೊಗ್ಗ ಮೆಡಿಕಲ್ ಕಾಲೇಜು ನಿರ್ದೇಶಕ ಡಾ.ಸಿದ್ದಪ್ಪ, ಅದಲು ಬದಲು ಆಗಿರುವುದು ನಿಜ. ಇದು ಅಚಾತುರ್ಯದಿಂದ ಆಗಿದೆ. ಈ ಘಟನೆಗೆ ಕಾರಣರಾರು ಅನ್ನುವುದನ್ನು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200