ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 12 JANUARY 2021
ಶಿವಮೊಗ್ಗ ಜಿಲ್ಲೆಗೆ ಕೋವಿಡ್ ಲಸಿಕೆ ಆಗಮನಕ್ಕೆ ಕ್ಷಣಗಣನೆ ಶುರುವಾಗಿದೆ. ಲಸಿಕೆಯ ಸ್ಟೋರೇಜ್ ಮತ್ತು ವಿತರಣೆಗೂ ಸಿದ್ಧತೆ ಪೂರ್ಣಗೊಂಡಿದೆ.
ರಾತ್ರಿ ಅಥವಾ ಬೆಳಗ್ಗೆ ಬರುತ್ತೆ ಲಸಿಕೆ
ಬೆಂಗಳೂರಿಗೆ ಆಗಮಿಸಿರುವ ಲಸಿಕೆಯನ್ನು ಶಿವಮೊಗ್ಗದ ಸ್ಟೋರೇಜ್ ಸೆಂಟರ್‍ಗೆ ಕಳುಹಿಸಲಾಗುತ್ತಿದೆ. ಇವತ್ತು ರಾತ್ರಿ ಅಥವಾ ಬೆಳಗ್ಗೆ ಲಸಿಕೆ ತಲುಪುವ ಸಾದ್ಯತೆ ಇದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ ಸುರಗೀಹಳ್ಳಿ ತಿಳಿಸಿದ್ದಾರೆ.
ನಾಲ್ಕು ಕಡೆ ಸ್ಟೋರೇಜ್‍ಗೆ ವ್ಯವಸ್ಥೆ
ಶಿವಮೊಗ್ಗದ ನಾಲ್ಕು ಕಡೆಯಲ್ಲಿ ಕೋವಿಡ್ ಲಸಿಕೆ ಸ್ಟೋರಜ್‍ಗೆ ವ್ಯವಸ್ಥೆ ಮಾಡಲಾಗಿದೆ. ಈ ಕುರಿತು ಶಿವಮೊಗ್ಗ ಲೈವ್.ಕಾಂ ಈ ಹಿಂದೆ ವಿಡಿಯೋ ಸಹಿತ ವರದಿ ಪ್ರಕಟಿಸಿತ್ತು. ಅದರ ರಿಪೋರ್ಟ್ ಇಲ್ಲಿದೆ. ವಿಡಿಯೋ ಇಲ್ಲಿದೆ.
ಲಸಿಕೆ ವಿತರಣೆಗೆ ಸಿದ್ಥತೆ ಹೇಗಿದೆ?
ಕರೋನ ಲಸಿಕೆ ವಿತರಣೆ ಸಂಬಂಧ ಶಿವಮೊಗ್ಗ ಜಿಲ್ಲೆಯಾದ್ಯಂತ ಡ್ರೈ ರನ್ ಮಾಡಲಾಗಿದ್ದು, ಯಶಸ್ವಿಯಾಗಿದೆ.
ಜಿಲ್ಲೆಯಲ್ಲಿ 91 ಲಸಿಕೆ ವಿತರಣಾ ಕೇಂದ್ರಗಳನ್ನು ಗುರುತಿಸಿ, ಸಿದ್ಧಪಡಿಸಲಾಗಿದೆ.
ಒಟ್ಟು 22,004 ಫಲಾನುಭವಿಗಳಿಗೆ ಮೊದಲ ಹಂತದಲ್ಲಿ ಲಸಿಕೆ ವಿತರಣೆ ಮಾಡಲಾಗುತ್ತದೆ. ಈ ಪೈಕಿ ಅತಿ ಹೆಚ್ಚು ಮಂದಿ, ಅಂದರೆ, 13,200 ಮಂದಿ ಶಿವಮೊಗ್ಗ ತಾಲೂಕಿನಲ್ಲಿದ್ದಾರೆ.
ಶಿವಮೊಗ್ಗ ತಾಲೂಕಿನಲ್ಲಿ 45 ಲಸಿಕೆ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 13 ಸರ್ಕಾರಿ ಆಸ್ಪತ್ರೆಗಳು, ಪಿಹೆಚ್‍ಸಿಗಳಾಗಿದ್ದು, 22 ಖಾಸಗಿ ಸಂಸ್ಥೆಗಳು ಗುರುತಿಸಲಾಗಿದೆ.
ಪ್ರತಿ ಖಾಸಗಿ ಸಂಸ್ಥೆಗೆ ಲಸಿಕೆ ಜೊತೆಗೆ, ಸಿರೇಂಜನ್ನು ಸರ್ಕಾರದ ವತಿಯಂದಲೇ ಪೂರೈಕೆ ಮಾಡಲಾಗಿದೆ. ಅಲ್ಲದೆ ಸರ್ಕಾರದ ಒಬ್ಬ ಪ್ರತಿನಿಧಿ ಅಲ್ಲಿ ಉಪಸ್ಥಿತರಿರುತ್ತಾರೆ.
ಲಸಿಕಾ ಕೇಂದ್ರದಲ್ಲಿ ಐವರು ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ. ಒಬ್ಬರು ವ್ಯಾಕ್ಸಿನೇಕಟರ್ (ಲಸಿಕೆ ನೀಡುವವರು), ನಾಲ್ಕು ಮಂದಿ ಸೂಪರ್‍ವೈಸರ್‍ಗಳು ಇರುತ್ತಾರೆ.
ಲಸಿಕೆ ಪಡೆದವರು ಕಡ್ಡಾಯವಾಗಿ ಅರ್ಧ ಗಂಟೆ ಅಬ್ಸರ್‍ವೇಷನ್‍ನಲ್ಲಿ ಇರಬೇಕಾಗುತ್ತದೆ.
ಪ್ರತಿ ಲಸಿಕೆ ವಿತರಣಾ ಕೇಂದ್ರದಲ್ಲೂ ಆಂಬುಲೆನ್ಸ್ ಕಡ್ಡಾಯಗೊಳಿಸಲಾಗಿದೆ. ತುರ್ತು ಸಂದರ್ಭದಲ್ಲಿ ಜಿಲ್ಲಾಸ್ಪತ್ರೆ ಅಥವಾ ತಾಲೂಕು ಆಸ್ಪತ್ರೆಗೆ ರವಾನಿಸಲು ಈ ವ್ಯವಸ್ಥೆ ಮಾಡಲಾಗಿದೆ.
ಪ್ರತಿ ಕೇಂದ್ರದಲ್ಲಿ ಒಂದು ದಿನಕ್ಕೆ ನೂರು ಫಲಾನುಭವಿಗಳಿಗೆ ಮಾತ್ರ ಅವಕಾಶ. ಒಂದು ವೇಳೆ ನಿಗದಿತ ದಿನದಂದು ಬರಲಾಗದಿದ್ದರೆ, ಮತ್ತೊಂದು ದಿನ ಸಮಯ ನಿಗದಿಪಡಿಸಿ, ಮೆಸೇಜ್ ಕಳುಹಿಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200