SHIVAMOGGA LIVE NEWS, 18 JANUARY 2025
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಶಿವಮೊಗ್ಗ : ಸರ್ವ ಸಮಸ್ಯೆ ನೀಗಿಸಬೇಕಿದ್ದ ಮಹಾನಗರ ಪಾಲಿಕೆಯೆ (Palike) ಈಗ ನಗರದ ನಾಗರಿಕರ ಪಾಲಿಗೆ ಅತಿದೊಡ್ಡ ಸಮಸ್ಯೆಯಾಗಿದೆ. ಅಧಿಕಾರಿಗಳ ಕೈ ಬಿಸಿ ಮಾಡದೆ, ಮಧ್ಯವರ್ತಿಗಳ ಜೇಬು ಭರ್ತಿ ಮಾಡದೆ ಇದ್ದರೆ ಸಣ್ಣಪುಟ್ಟ ಕೆಲಸವು ಆಗದ ದುಸ್ಥಿತಿ ಇದೆ. ಸಾಲು ಸಾಲು ಲೋಕಾಯುಕ್ತ ದಾಳಿ, ಜನಪ್ರತಿನಿಧಿಗಳ ಆರೋಪ ಪಾಲಿಕೆಯೊಳಗಿನ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ.
ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ನೋಟು ತೋರಿಸದೆ ಕೆಲಸಗಳು ನಡೆಯುವುದಿಲ್ಲ. ಜನ ಹತ್ತಾರು ಬಾರಿ ಓಡಾಡಿ, ಹಣ ಚೆಲ್ಲಿದರಷ್ಟೆ ಫೈಲುಗಳು ಮುಂದಕ್ಕೆ ಸಾಗಲಿವೆ. ಇದರಿಂದ ಮುಕ್ತಿ ನೀಡುವಂತೆ ಜನರು ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳ ಕಚೇರಿಗೆ ಅಲೆಯುವಂತಾಗಿದೆ. ಆದರೆ ಸೂಕ್ತ ಪರಿಹಾರ ಸಿಗದೆ ಪರಿತಪಿಸುತ್ತಿದ್ದಾರೆ.

ಈಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳಿಗೆ ದಿನವು ದಸರಾ ಹಬ್ಬದಂತಾಗಿದೆ. ಹಣವಿಲ್ಲದೆ ಯಾವುದೇ ಕೆಲಸವು ಆಗುತ್ತಿಲ್ಲ. ಇದೇ ಕಾರಣಕ್ಕೆ ಜನರು ಅಧಿಕಾರಿಗಳಿಗೆ ಅಡ್ಡ ಹೆಸರುಗಳನ್ನು ಇಟ್ಟಿದ್ದಾರೆ. ಒಬ್ಬ ಅಧಿಕಾರಿಗೆ ಜನ ಕೊಕ್ಕೆ ಎಂದು ಕರೆಯುತ್ತಾರೆ. ಅದರ ಅರ್ಥವೇನು ತಿಳಿಯದು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.‘ಅಧಿಕಾರಿಗಳಿಗೆ ಅಡ್ಡ ಹೆಸರಿಟ್ಟಿದ್ದಾರೆʼ

ಪಾಲಿಕೆಯ ವಿರೋಧ ಪಕ್ಷದ ಮಾಜಿ ನಾಯಕ ಹೆಚ್.ಸಿ.ಯೋಗೇಶ್ ಕೂಡ ಇಲ್ಲಿನ ಭ್ರಷ್ಟಾಚಾರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಾಲಿಕೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಯಾವುದೇ ಕೆಲಸಕ್ಕು ಅಧಿಕಾರಿಗಳು ದುಡ್ಡು ಕೇಳುತ್ತಾರೆ. ಪಾಲಿಕೆಯಲ್ಲಿನ ಭ್ರಷ್ಟಾಚಾರ, ಅಧಿಕಾರಿಗಳ ವರ್ಗಾವಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಶಿವಮೊಗ್ಗದಲ್ಲಿ ಸಚಿವ ಎಂ.ಬಿ.ಪಾಟೀಲ್ ಅವರಿಗೆ ದೂರು ನೀಡುತ್ತೇವೆ. – ಹೆಚ್.ಸಿ.ಯೋಗೇಶ್, ಪಾಲಿಕೆ ಮಾಜಿ ಸದಸ್ಯಆಯುಕ್ತರ ವಿರುದ್ಧ ದೂರು

![]()
ಸಾಲು ಸಾಲು ಆರೋಪಗಳ ಬೆನ್ನಿಗೆ, ಗುತ್ತಿಗೆದಾರರೊಬ್ಬರಿಂದ ಲಂಚ ಪಡೆಯುತ್ತಿದ್ದ ಪಾಲಿಕೆಯ ಸಮಾನ್ಯ ನಿಧಿ ಲೆಕ್ಕ ವಿಭಾಗದ ಕಚೇರಿ ವ್ಯವಸ್ಥಾಪಕ ಸಿದ್ದೇಶ್ ಜ.16ರಂದು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸಿದ್ದೇಶ್‌ನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಆದರೆ ಇದೇನು ಹೊಸತಲ್ಲ. ಕಳೆದ ವರ್ಷದ ಫೆಬ್ರವರಿಯಲ್ಲಿ ಜನನ, ಮರಣ ಪ್ರಮಾಣಪತ್ರ ವಿಭಾಗದ ಮೇಲೆ ಲೋಕಾಯುಕ್ತ ದಾಳಿಯಾಗಿತ್ತು. 2023ರ ಏಪ್ರಿಲ್‌ನಲ್ಲಿ ಕಂದಾಯ ವಿಭಾಗದ ಮೇಲೆ ಲೋಕಾಯುಕ್ತ ದಾಳಿಯಾಗಿ ರೆವಿನ್ಯು ಇನ್ಸ್‌ಪೆಕ್ಟರ್ ಬಂಧನವಾಗಿತ್ತು. ಸಾಲು ಸಾಲು ದಾಳಿ, ಪರಿಶೀಲನೆ, ಅಧಿಕಾರಿಗಳ ಬಂಧನವಾದರು ಲಂಚಗುಳಿತನಕ್ಕೆ ಬ್ರೇಕ್ ಬಿದ್ದಿಲ್ಲ.ಪದೇ ಪದೆ ಲೋಕಾಯುಕ್ತ ದಾಳಿ

ಮಿನಿಸ್ಟರ್ ಭೇಟಿ ವೇಳೆ ನರಕ ದರ್ಶನ

ನವೆಂಬರ್ ತಿಂಗಳಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ್ದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮಹಾನಗರ ಪಾಲಿಕೆಗೆ ದಿಢೀರ್ ಭೇಟಿ ನೀಡಿದ್ದರು. ಆಗ ಸಚಿವರಿಗೆ ಪಾಲಿಕೆಯಲ್ಲಿನ ನರಕ ದರ್ಶನವಾಗಿತ್ತು. ಕೆಲಸಗಳು ವಿಳಂಬವಾಗುತ್ತಿರುವುದು, ಸರ್ವರ್ ಸಮಸ್ಯೆಯ ಕುರಿತು ಜನ ದೂರಿದ್ದರು. ಎಲ್ಲವು ಬದಲಾಗಬೇಕು ಎಂದು ಸಚಿವರು ಎಚ್ಚರಿಕೆ ನೀಡಿ ತೆರಳಿದ್ದರು. ಆದರೆ ಬದಲಾಗಿದ್ದು ಲಂಚದ ರೇಟುಗಳ ಮಾತ್ರ ಅನ್ನುತ್ತಾರೆ ಸಾರ್ವಜನಿಕರು.
ಶಿವಮೊಗ್ಗ ಮಹಾನಗರ ಪಾಲಿಕೆಗೆ ಮೇಜರ್ ಸರ್ಜರ್ ಆದರಷ್ಟೆ ಇಲ್ಲಿನ ವ್ಯವಸ್ಥೆ ಸುಧಾರಣೆಯಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ. ಇಲ್ಲವಾದಲ್ಲಿ ಜನ ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುವ ದುಸ್ಥಿತಿ ಮುಂದುವರೆಯಲಿದೆ.

ಇದನ್ನೂ ಓದಿ » ಶಿವಮೊಗ್ಗ, ಭದ್ರಾವತಿ, ಶಿಕಾರಿಪುರದಲ್ಲಿ ಪೊಲೀಸರಿಂದ ರಾತ್ರಿ ದಿಢೀರ್ ಏರಿಯಾ ಡಾಮಿನೇಷನ್
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು





