ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಜೂನ್ 2021
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರ ಸಂಬಂಧಿಗಳು ಧರಣಿ ನಡೆಸುತ್ತಿದ್ದಾರೆ. ತುರ್ತು ಚಿಕಿತ್ಸಾ ವಿಭಾಗದ ಗೇಟ್ ಬಳಿ ಆಸ್ಪತ್ರೆ ಸತ್ಯಾಗ್ರಹ ಆರಂಭಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮೆಗ್ಗಾನ್ ಆಸ್ಪತ್ರೆಯ ಆಡಳಿತ ಮಂಡಳಿ, ವೈದ್ಯರ ವಿರುದ್ಧ ಸೋಂಕಿತರ ಸಂಬಂಧಿಗಳು ಆರೋಪ ಮಾಡಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಬಂಧಿಗಳ ಆಕ್ರೋಶಕ್ಕೆ ಕಾರಣವೇನು?
ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ವಾರ್ಡ್‍ನಲ್ಲಿ ಈವರೆಗೂ ಸಂಬಂಧಿಗಳಿಗೆ ಅವಕಾಶವಿತ್ತು. ಆದರೆ ಕಳೆದ ಎರಡು ದಿನದಿಂದ ಸಂಬಂಧಿಗಳನ್ನು ಕೋವಿಡ್ ವಾರ್ಡ್‍ಗೆ ಬಿಡುತ್ತಿಲ್ಲ. ಇದು ಸಂಬಂಧಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸೋಂಕಿತರಿಗೆ ಆರೈಕೆ ಬೇಕಿದೆ. ಊಟ, ತಿಂಡಿ, ನೀರು ಕೊಡಲು ನಾವು ಇರಲೆಬೇಕು. ವೈದ್ಯರು, ನರ್ಸ್‍ಗಳು ಸರಿಯಾದ ಟೈಮಿಗೆ ಬರುವುದಿಲ್ಲ. ಹಾಗಾಗಿ ನಮ್ಮನ್ನು ವಾರ್ಡ್‍ಗೆ ಬಿಡಬೇಕು ಎಂದು ಸಂಬಂಧಿಗಳು ಒತ್ತಾಯಿಸಿದರು.
ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕು, ತಮ್ಮನ್ನು ಕೋವಿಡ್ ವಾರ್ಡ್‍ಗೆ ಬಿಡುವವರೆಗೆ ಧರಣಿ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]