ಶಿವಮೊಗ್ಗ ಅಮೀರ್‌ ಅಹಮದ್‌ ಸರ್ಕಲ್‌ನಲ್ಲಿ ಪಟಾಕಿ ಅಬ್ಬರ

SHIMOGA NEWS, 17 SEPTEMBER 2024 : ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಸಂದರ್ಭ ಈ ಬಾರಿ ಪಟಾಕಿ ಅಬ್ಬರ ಜೋರಿತ್ತು. ಅಮೀರ್‌ ಅಹಮದ್‌ ಸರ್ಕಲ್‌ನಲ್ಲಿ ಬಹು ಹೊತ್ತು ಭಾರಿ ಪ್ರಮಾಣದ ಪಟಾಕಿ (Cracker) ಸಿಡಿಸಲಾಯಿತು. (ಈ ಸುದ್ದಿಯನ್ನು ಇನ್ನು 38 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಗಣಪತಿ ಮೆರವಣಿಗೆ ಅಮೀರ್‌ ಅಹಮದ್‌ ಸರ್ಕಲ್‌ಗೆ ತಲುಪುವ ಮುನ್ನ ಭಾರಿ ಪ್ರಮಾಣದ ಪಟಾಕಿ ಸಿಡಿಸಲಾಯಿತು. ಆರಂಭದಲ್ಲಿ ಪಟಾಕಿ ಸಿಡಿತಲೆ ಮನರಂಜನೆ ನೀಡಿತು. ಆದರೆ ಕೆಲವೇ ಕ್ಷಣದಲ್ಲಿ ಸರ್ಕಲ್‌ನಲ್ಲಿ ಮೂರ್ನಾಲ್ಕು ಕಡೆ ಪಟಾಕಿ ಹಚ್ಚಲಾಯಿತು. ಇದರಿಂದ ನೂಕು ನುಗ್ಗಲು ಉಂಟಾಯಿತು. ಬೆಂಕಿ ಕಿಡಿ ಜನರ ಮೈಮೇಲೆ ಬಿದ್ದಿದ್ದರಿಂದ ಆತಂಕದ ಪರಿಸ್ಥಿತಿ ಉಂಟಾಯಿತು.

ಇನ್ನೊಂದೆಡೆ ಪೊಲೀಸರು ತಕ್ಷಣ ಅಲರ್ಟ್‌ ಆದರು. ಒಂದೇ ಕಡೆ ಪಟಾಕಿ ಸಿಡಿಸುವಂತೆ ಸೂಚಿಸಿದರು. ಅಗ್ನಿಶಾಮಕ ಸಿಬ್ಬಂದಿ ಕೂಡ ಮುನ್ನೆಚ್ಚರಿಕೆ ಕ್ರಮ ಕೈಗೊಂಡರು. ಸುಮಾರು ಅರ್ಧ ಗಂಟೆ ಪಟಾಕಿ ಸಿಡಿಸಲಾಯಿತು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

Crackers-at-ameer-ahmed-circle-in-Shimogaಇದನ್ನೂ ಓದಿ » ಹಿಂದೂ ಮಹಾಸಭಾ ಮೆರವಣಿಗೆಯಲ್ಲಿ ಡಿ ಬಾಸ್‌ ಪರ ಘೋಷಣೆ

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Crackers-at-ameer-ahmed-circle-in-Shimoga

Leave a Comment