ಶಿವಮೊಗ್ಗದಲ್ಲಿ ಅಡುಗೆ ಅನಿಲ ಸಿಲಿಂಡರ್‌ ಸ್ಪೋಟ, ಎಲ್ಲಿ? ಏನೇನು ಹಾನಿಯಾಗಿದೆ?

 ಶಿವಮೊಗ್ಗ  LIVE 

ಶಿವಮೊಗ್ಗ: ಅಡುಗೆ ಅನಿಲ ಸಿಲಿಂಡರ್‌ (cylinder) ಸ್ಪೋಟಗೊಂಡು ಮನೆ ಸಂಪೂರ್ಣ ಹಾನಿಯಾಗಿದೆ. ಸಿದ್ದೇಶ್ವರ ನಗರದ 4ನೇ ಅಡ್ಡರಸ್ತೆಯ ಇಂದು ಬೆಳಗ್ಗೆ ಘಟನೆ ಸಂಭವಿಸಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಹೇಗಾಯ್ತು ಘಟನೆ?

ಧರ್ಮಪ್ಪ ಎಂಬುವವರು ಬಾಡಿಗೆಗೆ ಇದ್ದ ಮನೆಯಲ್ಲಿ ಇಂದು ಬೆಳಗ್ಗೆ 11 ಗಂಟೆ ಹೊತ್ತಿಗೆ ಸಿಲಿಂಡರ್‌ ಸ್ಪೋಟಗೊಂಡಿದೆ. ಮನೆಯಲ್ಲಿದ್ದ ವಸ್ತುಗಳೆಲ್ಲ ಹಾನಿಯಾಗಿವೆ. ಶೀಟ್‌ ಛಾವಣಿ ಹಾರಿ ಹೋಗಿದೆ. ಇನ್ನು, ಧರ್ಮಪ್ಪ ಅವರ ಕುಟುಂಬದವರು ಮನೆಯಲ್ಲಿ ಇರಲಿಲ್ಲ. ಇದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಸ್ಪೋಟದ ರಭಸಕ್ಕೆ ಪಕ್ಕದ ಮನೆಗು ಹಾನಿಯಾಗಿದೆ.

ಇದನ್ನೂ ಓದಿ » ಬೆಂಗಳೂರು – ಶಿವಮೊಗ್ಗ – ಗೋಕರ್ಣ ಬಸ್‌ ಅಪಘಾತ, ಹಲವು ಪ್ರಯಾಣಿಕರು ಸಜೀವ ದಹನ

ಬೆಂಕಿ ಹೊತ್ತುಕೊಂಡ ಕೂಡಲೆ ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಈ ವೇಳೆ ಇಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಶಿವಮೊಗ್ಗ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಲಕ್ಷಾಂತರ ರುಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

LPG-cylinder-incident-at-Siddeshwara-nagara-in-Shimoga

LPG-cylinder-incident-at-Siddeshwara-nagara-in-Shimoga

LPG-cylinder-incident-at-Siddeshwara-nagara-in-Shimoga

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment