ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 12 ಡಿಸೆಂಬರ್ 2019
ತಮಿಳು ಸೂಪರ್ ಸ್ಟಾರ್ ವಿಜಯ ಅಭಿನಯದ ಮಹತ್ವಾಕಾಂಕ್ಷಿಯ ದಳಪತಿ 64 ಸಿನಿಮಾದ ಶೂಟಿಂಗ್ ಶಿವಮೊಗ್ಗದಲ್ಲಿ ನಡೆಯುತ್ತಿದೆ. ಲಕ್ಷ್ಮೀ ಟಾಕೀಸ್ ಬಳಿ ಇರುವ ಹಳೆ ಜೈಲು ಆವರಣದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ.
ಕಳೆದ ಮೂರು ದಿನದಿಂದ ನಿರಂತರ ಶೂಟಿಂಗ್ ನಡೆಯುತ್ತಿದೆ. ಚಿತ್ರದ ಪ್ರಮುಖ ಸೀಕ್ವೆನ್ಸ್ ಒಂದರ ಚಿತ್ರೀಕರಣವನ್ನು ಶಿವಮೊಗ್ಗದ ಹಳೆ ಜೈಲಿನಲ್ಲಿ ಮಾಡಲಾಗುತ್ತಿದೆ. ಇದಕ್ಕಾಗಿ ಜೈಲು ಕಟ್ಟಡದೊಳಗೆ ಸೆಟ್ ಕೂಡ ಹಾಕಲಾಗಿದೆ.
ಇಳಯ ದಳಪತಿ ನೋಡಲು ಫ್ಯಾನ್ಸ್ ಕಾತುರ
ಇನ್ನು, ಜೈಲು ಆವರಣದ ಹೊರಗೆ ಇಳಯ ದಳಪತಿ ವಿಜಯ್ ನೋಡಲು ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆಯಿಂದ ಅಭಿಮಾನಿಗಳು ಆಗಮಿಸಿದ್ದಾರೆ. ಒಂದು ಸರಿಯಾದರು ತಮ್ಮ ಹೀರೋನನ್ನು ಕಣ್ತುಂಬಿಕೊಳ್ಳಬೇಕು ಎಂದು ಕಾತುರದಿಂದ ಜೈಲಿನ ಗೇಟ್ ಮುಂದೆ ಕಾದು ನಿಂತಿದ್ದಾರೆ. ಕೆಲವರು ಸಿನಿಮಾ ಟೀಂ ಮತ್ತು ಪೊಲೀಸರ ಜೊತೆಗೂ ವಾಗ್ವಾದ ನಡೆಸುತ್ತಿದ್ದಾರೆ.
ಹೊಟೇಲ್ ಬಳಿ ಜನವೋ ಜನ
ನಟ ವಿಜಯ್ ಅವರು ಶಿವಮೊಗ್ಗದ ಬಿ.ಹೆಚ್.ರಸ್ತೆಯಲ್ಲಿರುವ ರಾಯಲ್ ಆರ್ಕೆಡ್ ಹೊಟೇಲ್’ನಲ್ಲಿ ಉಳಿದುಕೊಂಡಿದ್ದಾರೆ. ಬೆಳಗ್ಗೆ ಶೂಟಿಂಗ್’ಗೆ ತೆರಳುವಾಗ ಮತ್ತು ಶೂಟಿಂಗ್’ನಿಂದ ಮರಳುವಾಗ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಹೊಟೇಲ್ ಮುಂದೆ ಸೇರುತ್ತಿದ್ದಾರೆ. ವಿಜಯ್ ಕಾರು ಹೊಟೇಲ್ ಒಳಗೆ ಮತ್ತು ಹೊರಗೆ ಹೋಗಲು ಸಾದ್ಯವಾದಂತೆ ತಡೆಯುತ್ತಿದ್ದಾರೆ. ಈ ವೇಳೆ ಪೊಲೀಸರು ಮತ್ತು ವಿಜಯ್ ಬಾಡಿಗಾರ್ಡ್’ಗಳು ಅಭಿಮಾನಿಗಳನ್ನು ದೂರಕ್ಕೆ ಸರಿಸಲು ಹರಸಾಸಹಸ ಪಡುತ್ತಿದ್ದಾರೆ. ಮತ್ತೊಂದೆಡೆ, ಒಮ್ಮೆ ನಟ ವಿಜಯ್ ಅವರು ಅಭಿಮಾನಿಗಳತ್ತ ಕೈ ಬೀಸಿರುವ ವಿಡಿಯೋ ವೈರಲ್ ಆಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Tamil Dalapathi 64 Cinema Shooting in Shimoga’s Old Jail near Lakshmi Talkies. Actor Vijay is in the shooting for three days, where as the fans wait to see the their actor outside the jail premises.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422