ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 26 NOVEMBER 2024
ಹೈಲೈಟ್ ಪಾಯಿಂಟ್ಸ್
» ಅಪಾಯಕಾರಿ ಸ್ಥಿತಿಯಲ್ಲಿ ಎಂಟು ವಿದ್ಯುತ್ ಕಂಬ
» ಯಾವುದೇ ಸಂದರ್ಭ ರಸ್ತೆಗೆ ಉರುಳಬಹುದು ಕಂಬ
» ಎಚ್ಚರ ವಹಿಸದೆ ದೊಡ್ಡ ಅನಾಹುತ ನಿಶ್ಚಿತ
ಶಿವಮೊಗ್ಗ : ಶಿವಮೊಗ್ಗ – ಭದ್ರಾವತಿ ಹೆದ್ದಾರಿಯಲ್ಲಿ ಸುಮಾರು ಎಂಟಕ್ಕೂ ಹೆಚ್ಚು ವಿದ್ಯುತ್ ಕಂಬಗಳು ವಾಲಿದ್ದು, ಯಾವುದೇ ಸಂದರ್ಭ ಅಪಾಯ ಸಂಭವಿಸಲಿದೆ. ಅಪ್ಪಿತಪ್ಪಿ ಕಂಬಗಳು ರಸ್ತೆಗೆ ಬಿದ್ದರೆ ದೊಡ್ಡ ಅನಾಹುತ ಸಂಭವಿಸಲಿದೆ. ಮತ್ತೊಂದು ದಿಕ್ಕಿಗೆ ಉರುಳಿದರೆ ಅಡಿಕೆ ತೋಟಕ್ಕೆ ಹಾನಿಯಾಗುವ ಸಾಧ್ಯತೆ ಇದೆ.
ನಿದಿಗೆ ಕೆರೆ ಏರಿ ಮೇಲೆ ವಿದ್ಯುತ್ ಕಂಬಗಳು ಅಪಾಯಕಾರಿ ಸ್ಥಿತಿಯಲ್ಲಿವೆ. ಶಿವಮೊಗ್ಗದಿಂದ ಭದ್ರಾವತಿಗೆ ಹೋಗುವ ಬದಿಯ ತಿರುವಿನಲ್ಲಿರುವ ವಿದ್ಯುತ್ ಕಂಬಗಳು ವಾಲಿಕೊಂಡಿವೆ.
ಯಮಾರಿದರೆ ಅವಘಡ ಗ್ಯಾರಂಟಿ
ತಿರುವಿನಲ್ಲಿರುವ ಸುಮಾರು ಎಂಟು ವಿದ್ಯುತ್ ಕಂಬಗಳು ಅಪಾಯಕಾರಿ ಸ್ಥಿತಿಯಲ್ಲಿವೆ. ಈ ಪೈಕಿ ಮೂರ್ನಾಲ್ಕು ಕಂಬಗಳು ನೆಲಕ್ಕೆ ತಾಗುವಂತಿದೆ. ಜೋರು ಗಾಳಿ ಬೀಸಿದರೆ ಈ ಕಂಬಗಳು ಧರೆಗುರುಳುವುದು ನಿಶ್ಚಿತ. ಒಂದು ಕಂಬ ಉರುಳಿದರೆ ವಿದ್ಯುತ್ ತಂತಿಗಳು ಜಗ್ಗಿ ಮತ್ತಷ್ಟು ಕಂಬಗಳು ಉರುಳಲಿವೆ.
ಇಲ್ಲಿರುವ ಕಂಬಗಳು ಸುಮಾರು 60 ಡಿಗ್ರಿಯಷ್ಟು ವಾಲಿವೆ. ಒಂದೇ ಒಂದು ಕಂಬ ಉರುಳಿದರೆ ಎಲ್ಲವು ಬುಡಮೇಲಾಗುತ್ತವೆ. ದೊಡ್ಡ ಅನಾಹುತ ಸಂಭವಿಸುವ ಮೊದಲು ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.
ಬಸವರಾಜು, ಭದ್ರಾವತಿ ನಿವಾಸಿ
ಶಿವಮೊಗ್ಗ – ಭದ್ರಾವತಿ ರಸ್ತೆಯಲ್ಲಿ ಸದಾ ವಾಹನ ದಟ್ಟಣೆ ಇರುತ್ತದೆ. ಅಪ್ಪಿತಪ್ಪಿ ಕಂಬಗಳು ರಸ್ತೆಗೆ ಉರುಳಿದರೆ ದೊಡ್ಡ ಅವಘಡವಾಗಲಿದೆ.
ಇದನ್ನೂ ಓದಿ » ಗಾಂಧಿ ಬಜಾರ್‌ನ ಅಂಗಡಿಯಲ್ಲಿ ಬೆಂಕಿ, ಲಕ್ಷ ಲಕ್ಷದ ವಸ್ತುಗಳು ಆಹುತಿ
Pole
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422