ಶಿವಮೊಗ್ಗ ದಸರಾದಲ್ಲಿ ಇವತ್ತು ಏನೇನಿದೆ? ಇಲ್ಲಿದೆ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ

ದಸರಾ ಸುದ್ದಿ: ಶಿವಮೊಗ್ಗ ದಸರಾಗೆ (Dasara 2025) ಅದ್ಧೂರಿ ಚಾಲನೆ ಸಿಕ್ಕಿದೆ. ವಿವಿಧ ಸ್ಪರ್ಧೆಗಳು, ಕಾರ್ಯಕ್ರಮಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಇವತ್ತು ಎಲ್ಲೆಲ್ಲಿ ಯಾವ್ಯಾವ ಕಾರ್ಯಕ್ರಮ ಇದೆ. ಇಲ್ಲಿದೆ ಡಿಟೇಲ್ಸ್‌. (ಈ ಸುದ್ದಿಯನ್ನು ಇನ್ನು 67 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

 

» ಮಕ್ಕಳ ಜಾಥಾ – ಸಮಯ: ಬೆಳಗ್ಗೆ 9

ಸ್ಥಳ: ನಗರದ ವಿವಿಧೆಡೆಯಿಂದ

ಅಂತಾರಾಷ್ಟ್ರೀಯ ನೃತ್ಯಗಾರ್ತಿ, ಈಜುಗಾರ್ತಿ ಋತು ಸ್ಪರ್ಷ ಅವರಿಂದ ಉದ್ಘಾಟನೆ

ವಿವಿಧ ಶಾಲೆಗಳ ಮಕ್ಕಳಿಂದ ನಗರದ ವಿವಿಧೆಡೆಯಿಂದ ಜಾಥಾ ಆರಂಭವಾಗಿ ಶಿವಪ್ಪನಾಯಕ ಪ್ರತಿಮೆ ಬಳಿ ಮುಕ್ತಾಯ

JNNCE-Admission-Advt-scaled

 

» ಮಕ್ಕಳ ದಸರಾ ಸಮಾರೋಪ – ಸಮಯ: ಸಂಜೆ 5ಕ್ಕೆ

ಸ್ಥಳ: ಡಾ. ಅಂಬೇಡ್ಕರ್‌ ಭವನ

ಸರಿಗಮಪ ಖ್ಯಾತಿಯ ದಿಯಾ ಹೆಗಡೆ ಅವರಿಂದ ಉದ್ಘಾಟನೆ

 
ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ

» ಸುಗಮ ಸಂಗೀತ ಮತ್ತು ಯಕ್ಷ ಸಂಭ್ರಮ – ಸಮಯ: ಸಂಜೆ 5ರಿಂದ

ಸ್ಥಳ: ಕುವೆಂಪು ರಂಗಮಂದಿರ

ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಇಂಜಿನಿಯರ್‌ ಪುಟ್ಟಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್‌ ಹಾಲಾಡಿ ಉಪಸ್ಥಿತಿ

♦ ಯಕ್ಷ ಸಂಭ್ರಮ: ವಿದ್ವಾನ್‌ ದತ್ತಮೂರ್ತಿ ಭಟ್‌ ಅವರ ನಟ್ಯ ಶ್ರೀ ಕಲಾ ತಂಡದಿಂದ ಯಕ್ಷ ಸಂವರ್ಧನೆ ಮತ್ತು ಮಹಾಗಣಪತಿ ಯಕ್ಷ ಬಳಗ

♦ ಸುಗಮ ಸಂಗೀತ: ಸಹನಾ ಪಿ.ಜಿ ಮತ್ತು ಸಂಗಡಿಗರಿಂದ

♦ ಸುಗಮ ಸಂಗೀತಾ: ಹೊಸೂರು ಕೆ.ರಾಜಕುಮಾರ್‌ ಮತ್ತು ಸಂಗಡಿಗರು.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಇವತ್ತು ಕಾರು, ಬೈಕ್‌ ಖರೀದಿ ಜೋರು, ಕಾರಿನ ದರ ಎಷ್ಟು ಕಡಿಮೆಯಾಗಿದೆ? ಬೈಕ್‌ ರೇಟ್‌ ಎಷ್ಟು ಇಳಿದಿದೆ?

Dasara 2025

dasara-Programme-today

Leave a Comment