SHIVAMOGGA LIVE NEWS | 15 OCTOBER 2023
SHIMOGA : ನಮ್ಮೊಳಗಿರುವ ಕೆಟ್ಟ ಆಲೋಚನೆಗಳು ತೊಡೆದು, ಕತ್ತಲೆಯನ್ನು ದೂರಗೊಳಿಸುವುದೆ ನವರಾತ್ರಿಯ (Dasara) ಉದ್ದೇಶ. ಇದೆ ಕಾರಣಕ್ಕೆ ನವರಾತ್ರಿ ಸಂದರ್ಭ ಸರಸ್ವತಿ, ದುರ್ಗಾ, ಕಾಳಿಯ ಪೂಜೆ ನೆರವೇರಿಸಲಾಗುತ್ತದೆ ಎಂದು ಭಾರತೀಯ ಶಾಸ್ತ್ರಿಯ ನೃತ್ಯ ಕಲಾವಿದೆ ವೈಜಯಂತಿ ಕಾಶಿ ಹೇಳಿದರು.
ನಗರದ ಕೋಟೆ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಭಾನುವಾರ ನಾಡದೇವಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಶಿವಮೊಗ್ಗ ದಸರಾಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೆಟ್ಟ ಆಲೋಚನೆಗಳನ್ನು ದೂರಗೊಳಿಸಲು ಶಕ್ತಿಯ ಅಗತ್ಯವಿದೆ. ಇದೆ ಕಾರಣಕ್ಕೆ ದುರ್ಗೆಯನ್ನು ಪೂಜಿಸುತ್ತೇವೆ. ಆಕೆಯ ಕೈಯಲ್ಲಿರುವ ಆಯುಧಗಳು ನಮ್ಮ ಕೆಟ್ಟ ಆಲೋಚನೆಗಳನ್ನು ತೊಡೆದು ಹಾಕುವುದರ ಸಂಕೇತವಾಗಿದೆ. ಇನ್ನು ವಿದ್ಯೆ, ಬುದ್ಧಿಗಾಗಿ ಸರಸ್ವತಿಯನ್ನು ಪೂಜಿಸುತ್ತೇವೆ. ಪುಸ್ತಕಗಳನ್ನು ಓದುವುದಷ್ಟೆ ವಿದ್ಯೆಯಲ್ಲ. ಪ್ರತಿಯೊಂದರಲ್ಲಿಯು ಐಶ್ವರ್ಯ ಕಾಣಬೇಕು. ಪರಿಸರವೆ ನಮಗೆ ಐಶ್ವರ್ಯ. ಪರಿಸರ ಸಂರಕ್ಷಣೆಯಿಂದ ಮನುಷ್ಯನ ಬದುಕು ನೆಮ್ಮದಿಯಿಂದ ಇರಲು ಸಾಧ್ಯ ಎಂದರು.
ಇದನ್ನೂ ಓದಿ – ಸಿಗಂದೂರು ಚೌಡೇಶ್ವರಿ ಸೇರಿ ನವದೇವಿ ದರ್ಶನ, ಭದ್ರಾವತಿ FMನಲ್ಲಿ ನವರಾತ್ರಿ ವಿಶೇಷ ಕಾರ್ಯಕ್ರಮ, ಟೈಮಿಂಗ್ ಏನು?
ಮಧು ಕೈಟಭ ಎಂಬ ರಾಕ್ಷಸರು ವಿಷ್ಣುವಿನ ಕಿವಿಯಿಂದ ಹುಟ್ಟಿದರು. ಆ ರಾಕ್ಷಸರಿಗೆ ಪರಿವರ್ತನೆ ಆಗುವಂತೆ ವಿಷ್ಣು ಹಲವು ಅವಕಾಶ ಕಲ್ಪಿಸಿದ್ದ. ಆದರೆ ಅವರು ಮಾತು ಕೇಳದಿದ್ದಾಗ ಅವರ ವಧೆಯಾಗುತ್ತದೆ. ಇದೆ ರೀತಿ ನಮ್ಮೊಳಗಿನ ನಕಾರಾತ್ಮಕ ಆಲೋಚನೆಗಳನ್ನು ವಧೆ ಮಾಡಬೇಕು. ಹಬ್ಬಗಳ ನೈಜ ಉದ್ದೇಶ ಜೀವನಕ್ಕೆ ಅಳವಡಿಸಕೊಳ್ಳಬೇಕು ಎಂದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಶಿವಮೊಗ್ಗ ನಗರದಲ್ಲಿ ಈ ಹಿಂದೆ ಜನರಿಂದ ಹಣ ಸಂಗ್ರಹಿಸಿ ವಿಜಯ ದಶಮಿ ಆಚರಿಸಲಾಗುತ್ತಿತ್ತು. ಮೂರು ದಿನದ ದಸರಾ ಮಾಡಲಾಗುತ್ತಿತ್ತು. ಈಗ ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಇದಕ್ಕಾಗಿ 15 ಸಮಿತಿಗಳನ್ನು ಕೂಡ ರಚಿಸಲಾಗಿದೆ. ವಿಜಯದಶಮಿಯ ದಿನ ಸಕ್ರೆಬೈಲು ಆನೆಗಳು ಮೂಲಕ ಅಂಬಾರಿ ಉತ್ಸವ ನಡೆಯಲಿದೆ ಎಂದರು.
ನಾಡದೇವಿ ಬೆಳ್ಳಿ ಅಂಬಾರಿಯ ಮೆರವಣಿಗೆ
ದಸರಾ ಉದ್ಘಾಟನೆ ಹಿನ್ನೆಲೆ ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಕೋಟೆ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇಗುಲದವರೆಗೆ ನಾಡದೇವಿ ಚಾಮುಂಡೇಶ್ವರಿಯ ಮೆರವಣಿಗೆ ನಡೆಸಲಾಯಿತು. ಲಾರಿಯಲ್ಲಿ ದೇವಿಯ ಬೆಳ್ಳಿ ಮೂರ್ತಿ ಇರುವ ಅಂಬಾರಿಯ ಮೆರವಣಿಗೆ ಮಾಡಲಾಯಿತು. ಶಾಸಕ ಚನ್ನಬಸಪ್ಪ, ಮೇಯರ್ ಶಿವಕುಮಾರ್, ಪಾಲಿಕೆ ಸದಸ್ಯರು, ನಾಗರಿಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ವಿವಿಧ ಕಲಾತಂಡಗಳನ್ನು ಮೆರವಣಿಗೆಯಲ್ಲಿದ್ದವು. ಇದೇ ವೇಳೆ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನಪ್ರತಿನಿಧಿಗಳು ಕಲಾತಂಡಗಳ ವಾದ್ಯಕ್ಕೆ ಹೆಜ್ಜೆ ಹಾಕಿದರು.
ಮೇಯರ್ ಶಿವಕುಮಾರ್, ಉಪ ಮೇಯರ್ ಲಕ್ಷ್ಮಿ ಶಂಕರನಾಯ್ಕ್, ಕಮಿಷನರ್ ಮಾಯಣ್ಣ ಗೌಡ, ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200