ಜನರ ದುಡ್ಡಲ್ಲಿ ಶಿವಮೊಗ್ಗ ದಸರಾ, ಜನರಿಗೇನೆ ಮಾಹಿತಿ ಇಲ್ಲ, ಪಾಲಿಕೆ ಸದಸ್ಯರು, ಅಧಿಕಾರಿಗಳಿಗಷ್ಟೇನಾ ಕಾರ್ಯಕ್ರಮ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ ಲೈವ್.ಕಾಂ | SHIMOGA NEWS | 08 ಅಕ್ಟೋಬರ್ 2021

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಮೈಸೂರು ಬಳಿಕ ವೈಭವದ ದಸರಾ ನಡೆಯುವುದು ಶಿವಮೊಗ್ಗದಲ್ಲೇ. ನಾಡಹಬ್ಬವನ್ನು ಅದ್ಧೂರಿಯಾಗಿ ಆಚರಿಸುವುದರಿಂದ ಮಲೆನಾಡ ದಸರಾ ರಾಜ್ಯಮಟ್ಟದಲ್ಲಿ ಪ್ರಖ್ಯಾತಿ ಪಡೆಯುತ್ತಿದೆ. ಕರೋನ ಇದ್ದರೂ ಈ ಭಾರಿ ಎರಡು ಕೋಟಿ ರೂ. ವಚ್ಚದಲ್ಲಿ ದಸರಾ ಮಾಡಲು ನಿರ್ಧರಿಸಲಾಗಿದೆ. ಆದರೆ ಜನರ ತೆರಿಗೆ ಹಣದಲ್ಲಿ ನಡೆಯುತ್ತಿರುವ ನಾಡಹಬ್ಬದ ಬಗ್ಗೆ, ಜನರಿಗೇ ಮಾಹಿತಿ ಕೊಡದೆ ಹಬ್ಬದ ಸಡಗರ ಕಳೆಗುಂದಿದೆ.

ಮಾಹಿತಿ ನೀಡದೆ ದಸರಾ ಆಚರಣೆ

ಮಹಾನಗರ ಪಾಲಿಕೆ ವತಿಯಿಂದ ಶಿವಮೊಗ್ಗದಲ್ಲಿ ದಸರಾ ಆಚರಣೆ ನಡೆಯುತ್ತದೆ. ಒಂಭತ್ತು ದಿನ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಮಹಿಳೆಯರು, ಮಕ್ಕಳು ಸೇರಿದಂತೆ ವಿವಿಧ ವರ್ಗದ ಜನರಿಗೆ ಆಸಕ್ತಿ ಮೂಡಿಸುವ ಕಾರ್ಯಕ್ರಮಗಳು ಆಯೋಜಿಸಲಾಗಿದೆ. ಆದರೆ ಇದ್ಯಾವುದರ ಬಗ್ಗೆಯೂ ಜನರಿಗೆ ಮಾಹಿತಿ ಇಲ್ಲವಾಗಿದೆ.

ಸುದ್ದಿಗೋಷ್ಠಿಯು ಇಲ್ಲ, ಆಮಂತ್ರಣ ಪತ್ರಿಕೆಯೂ ಇಲ್ಲ

ಪ್ರತಿ ವರ್ಷ ದಸರಾ ಆಚರಣೆಗೂ ಮುನ್ನ ಮೇಯರ್, ಉಪಮೇಯರ್, ಕಮಿಷನರ್, ಪಾಲಿಕೆ ಸದಸ್ಯರು ಸುದ್ದಿಗೋಷ್ಠಿ ನಡೆಸುತ್ತಿದ್ದರು. ಪೂರ್ಣ ಮಾಹಿತಿ ಒದಗಿಸುತ್ತಿದ್ದರು. ಆದರೆ ಈ ಭಾರಿ ಇವೆಲ್ಲಕ್ಕೂ ಬ್ರೇಕ್ ಬಿದ್ದಿದೆ. ಆಮಂತ್ರಣ ಪತ್ರಿಕೆಯನ್ನೂ ಒದಗಿಸದೆ ನಾಡಹಬ್ಬ ಆಚರಣೆ ಮಾಡಲಾಗುತ್ತಿದೆ. ಇದರಿಂದಾಗಿ ಜನರಿಗೆ ಯಾವುದೆ ಮಾಹಿತಿ ಇಲ್ಲದೆ ದಸರಾ ನಡೆಯುತ್ತಿದೆ.

AVvXsEjYTJwutUeakDYV3coAla UPp18Lbn5vbTLBtula9VFMsbIPnhifQKFc7 Oz8N67kTADHgKCvWOETyYrJbRJ71sBT9B9rRPlRaSHGQ

ಜನರ ಹಣದ ಆಚರಣೆಯಲ್ಲಿ ಜನರೆ ಇಲ್ಲ

ಪ್ರತಿ ಭಾರಿಯಂತೆ ಈ ಭಾರಿಯೂ ಎರಡು ಕೋಟಿ ರೂ. ವೆಚ್ಚದಲ್ಲಿ ದಸರಾ ಆಚರಣೆಗೆ ನಿರ್ಧರಿಸಲಾಗಿದೆ. ಜನರ ತೆರಿಗೆ ಹಣದಲ್ಲಿ ಈ ಹಬ್ಬ ಮಾಡಲಾಗುತ್ತಿದೆ. ಆದರೆ ಜನರ ಸಹಭಾಗಿತ್ವವೇ ಇಲ್ಲವಾಗಿದೆ. ಮಹಿಳಾ ದಸರಾ, ಚಲನಚಿತ್ರೋತ್ಸವ ಸೇರಿದಂತೆ ಬಹುತೇಕ ಯಾವುದೆ ಕಾರ್ಯಕ್ರಮದಲ್ಲೂ ಜನ ಕಾಣಿಸುವುದಿಲ್ಲ. ಪ್ರಚಾರವನ್ನೇ ಮಾಡದೆ, ಜನರಿಗೆ ಮಾಹಿತಿಯನ್ನೇ ಒದಗಿಸದೆ ಆಚರಣೆ ಮಾಡಲಾಗುತ್ತಿದೆ.

ಎಲ್ಲಕ್ಕೂ ಕೋವಿಡ್ ಕಾರಣ

ಕರೋನ ಸಂಪೂರ್ಣ ತಗ್ಗಿಲ್ಲ. ಈಗಲೂ ಹಲವರು ಕೋವಿಡ್’ಗೆ ತುತ್ತಾಗುತ್ತಿದ್ದಾರೆ. ಜಿಲ್ಲೆಯಲ್ಲಿ ವಾರಕ್ಕೊಬ್ಬರಾದರೂ ಕೋವಿಡ್’ಗೆ ಬಲಿಯಾಗುತ್ತಿದ್ದಾರೆ. ಇದೆ ಕಾರಣಕ್ಕೆ ಅದ್ಧೂರಿ ದಸರಾಗೆ ಬ್ರೇಕ್ ಹಾಕಲಾಗಿದೆ ಎಂದು ಪಾಲಿಕೆ ಸಬೂಬು ಹೇಳುತ್ತಿದೆ. ಚಲನಚಿತ್ರೋತ್ಸವದ ಉದ್ಘಾಟನೆ ವೇಳೆಯೂ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಅವರು ಇದನ್ನೆ ಹೇಳಿದ್ದಾರೆ. ‘ಕೋವಿಡ್ ಕಾರಣದಿಂದಾಗಿ ಹೆಚ್ಚು ಜನರನ್ನು ಸೇರಿಸಲು ಆಗಿಲ್ಲ. ಜನ ಸೇರಿ ಒಂದು ವೇಳೆ ಹೆಚ್ಚುಕಡಿಮೆಯಾದರೆ ಪಾಲಿಕೆಯನ್ನೆ ಹೊಣೆ ಮಾಡಲಾಗುತ್ತದೆ’ ಎಂದಿದ್ದಾರೆ.

1632381453891714 0

ಯಾಕಾಗಿ ನಡೆಯುತ್ತಿದೆ ಕಾರ್ಯಕ್ರಮ?

ಈ ಭಾರಿ ಶಿವಮೊಗ್ಗ ದಸರಾದಲ್ಲಿ ಮಹಿಳಾ ದಸರಾ, ಆಹಾರ ದಸರಾ, ಸಾಂಸ್ಕೃತಿಕ ಕಾರ್ಯಕ್ರಮಗಳು, ಚಲನಚಿತ್ರೋತ್ಸವ, ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಆದರೆ ಜನರು ಪಾಲ್ಗೊಳ್ಳುವಂತಿಲ್ಲ. ಹೆಚ್ಚು ಜನರನ್ನು ಸೇರುವಂತಿಲ್ಲ ಎಂಬ ಸ್ವಯಂ ನಿಬಂಧನೆಗೆ ಪಾಲಿಕೆ ಒಳಗಾಗಿದೆ. ಹಾಗಿದ್ದಾಗ ಇಷ್ಟೊಂದು ಕಾರ್ಯಕ್ರಮಗಳನ್ನು ನಡೆಸುತ್ತಿರುವುದೇಕೆ? ಕೋಟಿ ಕೋಟಿ ಖರ್ಚು ಮಾಡುತ್ತಿರುವುದೇಕೆ ಅನ್ನುವುದು ಜನರ ಪ್ರಶ್ನೆ.

ಈ ಭಾರಿ ಶಿವಮೊಗ್ಗ ದಸರಾ ಅತಿಥಿಗಳು, ಮಹಾನಗರ ಪಾಲಿಕೆ ಸದಸ್ಯರು, ಅಧಿಕಾರಿಗಳು, ಇವರ ಪರಿಚಿತರು, ಬೆಂಬಲಿಗರಿಗೆ ಸೀಮಿತವಾಗಿದೆ. ಬಹುತೇಕ ಕಾರ್ಯಕ್ರಮಗಳು, ಆಟೋಟ ಸ್ಪರ್ಧೆಯಲ್ಲಿ ಇವರಷ್ಟೆ ಕಾಣಸಿಗುತ್ತಾರೆ. ಕೋವಿಡ್ ನೆಪದಲ್ಲಿ ಜನರ ಹಣದಲ್ಲಿ ಜನರೇ ಇಲ್ಲದೆ ನಾಡಹಬ್ಬ ಆಚರಿಸುತ್ತಿರುವುದು ಜನರ ಬೇಸರಕ್ಕೂ ಕಾರಣವಾಗಿದೆ.

ADVT JULY NANJAPPA HOSPITAL HOME LAB TESTING

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ ಮೂಲಕ ಸುದ್ದಿಗಾಗಿ 7411700200

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment