ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
DASARA NEWS, 4 OCTOBER 2024 : ಶಿವಮೊಗ್ಗ ದಸರಾಗೆ ವೈಭವದ ಚಾಲನೆ ಸಿಕ್ಕಿದೆ. ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಅವರು ನಿನ್ನೆ ದಸರಾ ಮಹೋತ್ಸವ ಉದ್ಘಾಟಿಸಿದ್ದಾರೆ. ಇವತ್ತು ಶಿವಮೊಗ್ಗದಲ್ಲಿ ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ. ಯಾವೆಲ್ಲ ಕಾರ್ಯಕ್ರಮ, ಎಲ್ಲಿಲ್ಲಿ ನಡೆಯುತ್ತೆ. ಅದರ ವಿವರ ಇಲ್ಲಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
♦ ಶಾಖಾಹಾರಿ ಸಿನಿಮಾ ಪ್ರದರ್ಶನ | ಸ್ಥಳ : ಮಲ್ಲಿಕಾರ್ಜುನ ಚಿತ್ರಮಂದಿರ | ಸಮಯ : ಬೆಳಗ್ಗೆ 9 ಗಂಟೆಗೆ | ಉಚಿತ ಪ್ರವೇಶವಿರಲಿದೆ.
♦ ಚಲನಚಿತ್ರೋತ್ಸವ | ಸ್ಥಳ : ಡಾ. ಅಂಬೇಡ್ಕರ್ ಭವನ | ಸಮಯ : ಬೆಳಗ್ಗೆ 9.30ಕ್ಕೆ | ನಟಿ, ಮಾಜಿ ಸಚಿವೆ ಉಮಾಶ್ರೀ ಅವರಿಂದ ಉದ್ಘಾಟನೆ. ಚಲನಚಿತ್ರ ಮತ್ತು ಸಾಹಿತ್ಯ ಕುರಿತು ಕಾರ್ಯಾಗಾರ, ಸಂವಾದ ಚಿತ್ರ ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್ ಅವರಿಂದ. ಛಾಯಾಚಿತ್ರ – ಕ್ಯಾಮರಾ ಪ್ರದರ್ಶನ ಇರಲಿದೆ.
♦ ಮಹಿಳಾ ದಸರಾ | ಸ್ಥಳ : ಕುವೆಂಪು ರಂಗಮಂದಿರ | ಸಮಯ : ಸಂಜೆ 4.30ಕ್ಕೆ | ಭೀಮಾ ಚಿತ್ರದ ನಟಿ ಪ್ರಿಯಾ ಪಠಮರ್ಷಣ್ ಅವರಿಂದ ಉದ್ಘಾಟನೆ. ಹವ್ಯಾಸಿ ಗಾಯನ ಬಳದಿಂದ ಸುಗಮ ಸಂಗೀತ. ವಿವಿಧ ಮಹಿಳಾ ಸಂಘ – ಸಂಸ್ಥೆ ಹಾಗೂ ಕಲಾ ತಂಡದಿಂದ ನೃತ್ಯ ಕಾರ್ಯಕ್ರಮ. ಬಹುಮಾನ ವಿತರಣೆ.
♦ ಪತ್ರಕರ್ತರ ದಸರಾ | ಸ್ಥಳ : ಡಾ. ಅಂಬೇಡ್ಕರ್ ಭವನ | ಸಮಯ : ಸಂಜೆ 4.30ಕ್ಕೆ | ಕುವೆಂಪು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಸತ್ಯಪ್ರಕಾಶ್ ಅವರಿಂದ ಉದ್ಘಾಟನೆ. ವ್ಯಂಗ್ಯಚಿತ್ರ, ಛಾಯಾಚಿತ್ರ, ಕ್ಯಾಮರಾ ಪ್ರದರ್ಶನ. ಪದವಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ರೀಲ್ಸ್ ಸ್ಪರ್ಧೆ. ಪತ್ರಿಕೆಗಳ ಪ್ರದರ್ಶನ.
♦ ಶಿವಮೊಗ್ಗದ ಗೋಪಾಲಗೌಡ ಬಡಾವಣೆಯ ನಾಗಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲಿ ನವರಾತ್ರಿ ಉತ್ಸವ ಅಂಗವಾಗಿ ಇಂದು ಸಂಜೆ ವಿವಿಧ ಕಾರ್ಯಕ್ರಮ ನಡೆಯಲಿದೆ. ಸಂಜೆ 5.30ರಿಂದ ಶ್ರೀರಾಗರಂಜನಿ ಭಜನಾ ಮಂಡಲಿಯಿಂದ ಭಜನೆ. ಸಂಜೆ 6.30ರಿಂದ ವಿಶೇಷ, ವಿಶಿಷ್ಠ ಗಾನ ನೃತ್ಯಾಮೃತ ಆಯೋಜಿಸಲಾಗಿದೆ. ಶ್ರೀ ಶಾರದಾ ಸಂಗೀತ ನೃತ್ಯ ವಿದ್ಯಾಲಯದ ವಿದ್ವಾನ್ ಜಿ.ಆರುಣ್ ಕುಮಾರ್ ಕಾರ್ಯಕ್ರಮ ನಡಸಲಿದ್ದಾರೆ.
ಇದನ್ನೂ ಓದಿ » ಶಿವಮೊಗ್ಗ ದಸರಾಗೆ ವೈಭವದ ಚಾಲನೆ, ಹೇಗಿತ್ತು ಉದ್ಘಾಟನೆ?