ಜಾಗ ಗುರುತಿಸಬೇಕು, ಮಾರ್ಚ್‌ ಒಳಗೆ ಕಾಮಗಾರಿ ಪೂರ್ಣಗೊಳ್ಳಬೇಕು, ಡಿಸಿ ಖಡಕ್‌ ಸೂಚನೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಜಿಲ್ಲೆಯಲ್ಲಿ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ (Buildings) ನಿರ್ಮಿಸಲು ತಕ್ಷಣವೇ ಜಾಗ ಗುರುತಿಸುವಂತೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.

ಜಿಲ್ಲೆಯ ಅಂಗನವಾಡಿಗಳ ಸ್ಥಿತಿಗತಿ

ಜಿಲ್ಲೆಯಲ್ಲಿ ಒಟ್ಟು 2,563 ಅಂಗನವಾಡಿ ಕೇಂದ್ರಗಳಿದ್ದು, ಅವುಗಳ ವಿವರ ಹೀಗಿದೆ:

  • ಸ್ವಂತ ಕಟ್ಟಡ: 2,065
  • ಶಾಲಾ ಕಟ್ಟಡದಲ್ಲಿ: 106
  • ಇತರೆ ಕಟ್ಟಡಗಳಲ್ಲಿ: 96
  • ಬಾಡಿಗೆ ಕಟ್ಟಡಗಳಲ್ಲಿ: 296

ಇದನ್ನೂ ಓದಿ – ಕರೆಂಟ್‌ ಇದ್ದರು ಅಡಿಕೆ ತೋಟದ ಮೋಟರ್‌ ಆನ್‌ ಆಗಲಿಲ್ಲ, ಪರಿಶೀಲಿಸಿದ ರೈತನಿಗೆ ಕಾದಿತ್ತು ಆಘಾತ

ನಗರ ಪ್ರದೇಶದಲ್ಲಿ 180 ಮತ್ತು ಗ್ರಾಮೀಣ ಭಾಗದಲ್ಲಿ 70 ನಿವೇಶನಗಳ ಅವಶ್ಯಕತೆ ಇದ್ದು, ಶಿವಮೊಗ್ಗ ನಗರದಲ್ಲಿ ಆದ್ಯತೆಯ ಮೇಲೆ ಜಾಗ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ, ಅಮೃತ ನಗರೋತ್ಥಾನ ಯೋಜನೆಯಡಿ ಆರಂಭವಾಗಿರುವ ಕಟ್ಟಡ ಕಾಮಗಾರಿಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ.

DC-SP-and-CEO-meeting-at-Shimoga-DC-Office

ಸಭೆಯ ಪ್ರಮುಖ ನಿರ್ಧಾರಗಳು

  • ಅಪೌಷ್ಟಿಕತೆ ಮುಕ್ತ ಜಿಲ್ಲೆ: ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ 50 ಮಕ್ಕಳನ್ನು ಕಡ್ಡಾಯವಾಗಿ ಪೌಷ್ಟಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿ 14 ದಿನಗಳ ಚಿಕಿತ್ಸೆ ನೀಡಲು ಜಿ.ಪಂ. ಸಿಇಓ ಹೇಮಂತ್ ಎನ್ ಸೂಚಿಸಿದ್ದಾರೆ.
  • ಬಾಲ್ಯ ವಿವಾಹ ತಡೆ: ಕಳೆದ ಮೂರು ತಿಂಗಳಲ್ಲಿ ಜಿಲ್ಲೆಯಲ್ಲಿ 19 ಬಾಲ್ಯ ವಿವಾಹಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, 16 ವಿವಾಹಗಳನ್ನು ತಡೆಯಲಾಗಿದೆ.
  • ಸಂತ್ರಸ್ತರಿಗೆ ನೆರವು: ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ‘ಸಖಿ ಒನ್ ಸ್ಟಾಪ್ ಸೆಂಟರ್’ ಮೂಲಕ ವೈದ್ಯಕೀಯ, ಕಾನೂನು ಮತ್ತು ಪೊಲೀಸ್ ನೆರವು ನೀಡಲಾಗುತ್ತಿದೆ.
  • ಸೌಲಭ್ಯಗಳ ವಿತರಣೆ: ಲಿಂಗತ್ವ ಅಲ್ಪಸಂಖ್ಯಾತರಿಗೆ ಗುರುತಿನ ಚೀಟಿ, ಗೃಹಲಕ್ಷ್ಮಿ ಯೋಜನೆ ಮತ್ತು ಮಾಜಿ ದೇವದಾಸಿಯರಿಗೆ ಪುನರ್ವಸತಿ ಸೌಲಭ್ಯಗಳನ್ನು ವಿಳಂಬವಿಲ್ಲದೆ ತಲುಪಿಸಲು ನಿರ್ದೇಶನ ನೀಡಲಾಗಿದೆ.
  • ಮಾತೃವಂದನಾ ಯೋಜನೆ: ಮೊದಲ ಪ್ರಸವದ ಗರ್ಭಿಣಿಯರಿಗೆ 5,000 ರೂ. ಹಾಗೂ ಎರಡನೇ ಪ್ರಸವದಲ್ಲಿ ಹೆಣ್ಣು ಮಗು ಜನಿಸಿದರೆ 6,000 ರೂ. ನೀಡುವ ಯೋಜನೆಯಲ್ಲಿ ಜಿಲ್ಲೆ ಉತ್ತಮ ಪ್ರಗತಿ ಸಾಧಿಸಿದೆ.

ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್.ಎಂ.ಎಸ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್.ಬಿ, ಅಪರ ಜಿಲ್ಲಾಧಿಕಾರಿ ಅಭಿಷೇಕ್.ವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಡಿಸಿಪಿಓ ಮಂಜುನಾಥ್, ಸಿಡಬ್ಲುಸಿ ಅಧ್ಯಕ್ಷ ತಾಜುದ್ದೀನ್ ಖಾನ್, ಸಾಂತ್ವನ ಕೇಂದ್ರಗಳ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

JNNCE-COLLEGE-ADVT.

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ

HOME LOAN SERVICES
ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!

🏠 ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಇಂದೇ ಸಂಪರ್ಕಿಸಿ:


📞 99721 94422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment