ಶಿವಮೊಗ್ಗ ಲೈವ್
ತೀರ್ಥಹಳ್ಳಿ: ತಾಲೂಕಿನ ಲಿಂಗಾಪುರ ಗ್ರಾಮದ ರೈತರೊಬ್ಬರ ಅಡಿಕೆ ತೋಟಕ್ಕೆ ನೀರು ಹಾಯಿಸಲು ಅಳವಡಿಸಿದ್ದ ವಿದ್ಯುತ್ ಮೋಟಾರ್‌ನ (Pump) ಕೇಬಲ್ ವೈರ್ ಕಳ್ಳತನ ಮಾಡಲಾಗಿದೆ. ಸುಮಾರು 120 ಮೀಟರ್ ಉದ್ದದ ಕೇಬಲ್ ಕಳುವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಲಿಂಗಾಪುರ ಗ್ರಾಮದ ಎನ್. ವೆಂಕಟೇಶ್ ಎಂಬುವವರು ತಮ್ಮ 10 ಎಕರೆ ಅಡಿಕೆ ತೋಟಕ್ಕೆ ನೀರು ಹಾಯಿಸಲು ಮುಡುಬ ಸ್ಮಶಾನದ ಬಳಿ ಹೊಳೆಗೆ ಮೋಟಾರ್ ಅಳವಡಿಸಿದ್ದರು. ಮೋಟಾರ್ ಆಫ್ ಮಾಡಿ ಹೋಗಿದ್ದ ಅವರು ಮರುದಿನ ಸಂಜೆ ಮೋಟಾರ್ ಆನ್ ಮಾಡಲು ಹೋದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಈ ಸುದ್ದಿಯನ್ನೂ ಓದಿ
ಈದ್ ಮಿಲಾದ್, ಶಿವಮೊಗ್ಗ ಸಿಟಿಯಲ್ಲಿ ರೂಟ್ ಮಾರ್ಚ್, 3000 ಪೊಲೀಸರಿಂದ ಬಂದೋಬಸ್ತ್, ಹೇಗಿದೆ ಭದ್ರತೆ?

ವಿದ್ಯುತ್ ಕಂಬದಿಂದ ಪ್ಯಾನಲ್ ಬೋರ್ಡ್‌ಗೆ ಸಂಪರ್ಕ ಕಲ್ಪಿಸಿದ್ದ ವೈರ್ ಕತ್ತರಿಸಲಾಗಿದೆ. ಇದರ ಮೌಲ್ಯ ಅಂದಾಜು ₹18,000 ಎಂದು ಅಂದಾಜಿಸಲಾಗಿದೆ. ಘಟನೆ ಸಂಬಂಧ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಈ ಸುದ್ದಿಯನ್ನೂ ಓದಿ
ಖಾಸಗಿ ಆಸ್ಪತ್ರೆ, ಗೂಡ್ಸ್ ವಾಹನ ಡಿಕ್ಕಿ, ವಾಹನಗಳು ನಜ್ಜುಗುಜ್ಜು
ಇದನ್ನೂ ಓದಿ – ಒಂದೇ ಒಂದು ಈ ಮೇಲ್‌ನಿಂದ ಶಿವಮೊಗ್ಗದ ಕಾರ್ಖಾನೆಗೆ ₹8,89,950 ನಷ್ಟ, ಆಗಿದ್ದೇನು?
