ಶಿವಮೊಗ್ಗದ ಪ್ರತಿ ತಾಲೂಕಿನಲ್ಲೂ ಎಟಿಎಂ ಆರಂಭ, ಮೊಬೈಲ್ ಬ್ಯಾಂಕಿಂಗ್‌ಗೆ ಸಿದ್ಧವಾಗ್ತಿದೆ ಡಿಸಿಸಿ ಬ್ಯಾಂಕ್

ಶಿವಮೊಗ್ಗ ಲೈವ್.ಕಾಂ |SHIMOGA NEWS | 12 DECEMBER 2020

ಕರೋನ ಲಾಕ್‍ ಡೌನ್ ಅವಧಿಯಲ್ಲಿಯೂ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ‍ಬ್ಯಾಂಕ್ ದಾಖಲೆ ಪ್ರಮಾಣದಲ್ಲಿ ಲಾಭ ಗಳಿಸಿದೆ. ಅಲ್ಲದೆ ಪ್ರತಿ ತಾಲೂಕಿನಲ್ಲೂ ಎಟಿಎಂ ಸ್ಥಾಪನೆ, ಮೊಬೈಲ್ ಬ್ಯಾಂಕಿಂಗ್‍ ವ್ಯವಸ್ಥೆ ಮಾಡಲು ಸಿದ್ಧತೆ ಮಾಡಿಕೊಂಡಿದೆ.

ದಾಖಲೆ ಪ್ರಮಾಣದ ಲಾಭ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ, ಪ್ರಸಕ್ತ ಸಾಲಿನಲ್ಲಿ ಡಿಸಿಸಿ ಬ್ಯಾಂಕ್ 16.29 ಕೋಟಿ ರೂ. ಲಾಭ ಗಳಿಸಿದೆ. ಇದು ಈವರೆಗಿನ ದಾಖಲೆ ಪ್ರಮಾಣದ ಲಾಭವಾಗಿದೆ ಎಂದು ತಿಳಿಸಿದರು.

ಶೇ.93ರಷ್ಟು ಸಾಲ ವಸೂಲಿ

ಡಿಸಿಸಿ ಬ್ಯಾಂಕ್‍ನಲ್ಲಿ ಸಾಲ ವಸೂಲಾತಿ ಪ್ರಮಾಣ ಶೇ.93ರಷ್ಟಿದೆ. ಕರೋನ ಕಾಲದಲ್ಲಿಯೂ ಕೃಷಿ ಸಾಲ ವಸೂಲಿ ಪ್ರಮಾಣ ಚೆನ್ನಾಗಿದೆ. ಮುಂದಿನ ವರ್ಷದಲ್ಲಿ ಹೆಚ್ಚು ಸಾಲ ವಿತರಣೆ ಮತ್ತು 20 ಕೋಟಿ ರೂ. ಲಾಭ ಗಳಿಸುವ ನಿರೀಕ್ಷೆ ಇದೆ ಎಂದು ಚನ್ನವೀರಪ್ಪ ತಿಳಿಸಿದರು.

ಎಟಿಎಂ, ಡಿಜಿಟಲ್ ಬ್ಯಾಂಕಿಂಗ್

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಪ್ರತಿ ತಾಲೂಕಿನಲ್ಲೂ ಎಟಿಎಂ ಆರಂಭಿಸಲು ಯೋಜಿಸಲಾಗಿದೆ. ಹಾಗೆಯೇ ಡಿಜಿಟಲ್ ಬ್ಯಾಂಕಿಂಗ್‍ಗೂ ವ್ಯವಸ್ಥೆ ಮಾಡಲಾಗುತ್ತಿದೆ. ಮತ್ತೊಂದೆಡೆ ಐದು ಹೊಸ ಶಾಖೆಗಳನ್ನು ಆರಂಭಿಸಲಾಗುತ್ತದೆ ಎಂದು ತಿಳಿಸಿದರು.

ವಿಡಿಯೋ ವರದಿ

ಬ್ಯಾಂಕ್‍ನ ನಿರ್ದೇಶಕರಾದ ಎಸ್.ಪಿ.ದಿನೇಶ್, ಹೆಚ್.ಎಲ್.ಷಡಾಕ್ಷರಿ, ಬಿ.ಡಿ.ಭೂಕಾಂತ, ವ್ಯವಸ್ಥಾಪಕ ನಿರ್ದೇಶಕರಾದ ರಾಜಣ್ಣ ರೆಡ್ಡಿ ಇದ್ದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : December 12, 2020 at 6:13 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಡಿಸೆಂಬರ್ 12, 2020

Leave a Comment