ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಚುನಾವಣೆ, ಮಂಜುನಾಥ ಗೌಡ ಬಣಕ್ಕೆ ಭರ್ಜರಿ ಗೆಲುವು, ಯಾರೆಲ್ಲ ಎಷ್ಟು ಮತ ಗಳಿಸಿದ್ದಾರೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 29 JUNE 2024

SHIMOGA : ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ (DCC BANK) ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಮತ್ತೊಮ್ಮೆ ಆರ್‌.ಎಂ.ಮಂಜುನಾಥ ಗೌಡ ಬಣ ಜಯಭೇರಿ ಬಾರಿಸಿದೆ. ತೀವ್ರ ಪೈಪೋಟಿ ಒಡ್ಡಿದ್ದ ಸಹಕಾರ ಭಾರತಿ ಒಂದು ಸ್ಥಾನ ಗೆಲ್ಲುವ ಮೂಲಕ ಹೀನಾಯ ಸೋಲನುಭವಿಸಿದೆ.

12 ಸ್ಥಾನಕ್ಕೆ ನಡೆದ ಚುನಾವಣೆ

ಆಡಳಿತ ಮಂಡಳಿಯ 12 ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ 11 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಮಹಾಲಿಂಗಯ್ಯ ಶಾಸ್ತ್ರಿ ಮಾತ್ರ ಗೆದ್ದಿದ್ದಾರೆ. 13 ಪ್ಯಾಕ್ಸ್‌ಗಳ ಪೈಕಿ ಹೊಸನಗರ ಪ್ಯಾಕ್ಸ್‌ನ ಎಂ.ಎಂ.ಪರಮೇಶ್‌ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.

dcc-bank-new-elected-members.

ಎಲ್ಲೆಲ್ಲಿ ಯಾರೆಲ್ಲ ಗೆದ್ದಿದ್ದಾರೆ?

ತಾಲೂಕುವಾರು ಪ್ಯಾಕ್ಸ್‌ಗಳು

ಶಿವಮೊಗ್ಗ
ಅಭ್ಯರ್ಥಿಪಡೆದ ಮತ
ಕೆ.ಸಿ.ದುಗ್ಗಪ್ಪಗೌಡ (ಗೆಲುವು)13
ಶಿವನಂಜಪ್ಪ12

ಭದ್ರಾವತಿ
ಅಭ್ಯರ್ಥಿಪಡೆದ ಮತ
ಸಿ.ಹನುಮಂತಪ್ಪ (ಗೆಲುವು)9
ಹೆಚ್‌.ಎಲ್.ಷಡಾಕ್ಷರಿ7

ತೀರ್ಥಹಳ್ಳಿ
ಅಭ್ಯರ್ಥಿಪಡೆದ ಮತ
ಬಸವಾನಿ ವಿಜಯದೇವ್‌(ಗೆಲುವು)14
ಕೆ.ಎಸ್.ಶಿವಕುಮಾರ್‌9

ಸಾಗರ
ಅಭ್ಯರ್ಥಿಪಡೆದ ಮತ
ಗೋಪಾಲಕೃಷ್ಣ ಬೇಳೂರು (ಗೆಲುವು)15
ರತ್ನಾಕರ ಹೊನಗೋಡು14

ಶಿಕಾರಿಪುರ
ಅಭ್ಯರ್ಥಿಪಡೆದ ಮತ
ಚಂದ್ರಶೇಖರ ಗೌಡ (ಗೆಲುವು)26
ಅಗಡಿ ಅಶೋಕ್‌11

ಸೊರಬ
ಅಭ್ಯರ್ಥಿಪಡೆದ ಮತ
ಕೆ.ಪಿ.ರುದ್ರಗೌಡ (ಗೆಲುವು)14
ಶಿವಮೂರ್ತಿ ಗೌಡ10

ಹೊಸನಗರ
ಅಭ್ಯರ್ಥಿಗೆಲುವಿಗೆ ಕಾರಣ
ಎಂ.ಎಂ.ಪರಮೇಶ್‌ಅವಿರೋಧ ಆಯ್ಕೆ

ಕೃಷಿ ಉತ್ಪನ್ನ ಮಾರಾಟ ಕ್ಷೇತ್ರ

ಶಿವಮೊಗ್ಗ ಉಪ ವಿಭಾಗ

ಅಭ್ಯರ್ಥಿಪಡೆದ ಮತ
ಮಂಜುನಾಥ ಗೌಡ (ಗೆಲುವು)15
ವಿರೂಪಾಕ್ಷಪ್ಪ3

ಸಾಗರ ಉಪ ವಿಭಾಗ

ಅಭ್ಯರ್ಥಿಪಡೆದ ಮತ
ಜಿ.ಎನ್‌.ಸುಧೀರ್‌ (ಗೆಲುವು)23
ಬಿ.ಡಿ.ಭೂಕಾಂತ್‌21

ಬ್ಯಾಂಕ್‌ಗಳು

ಶಿವಮೊಗ್ಗ ಉಪ ವಿಭಾಗ

ಅಭ್ಯರ್ಥಿಪಡೆದ ಮತ
ಎಸ್.ಕೆ.ಮರಿಯಪ್ಪ (ಗೆಲುವು)39
ಎಸ್‌.ಪಿ.ದಿನೇಶ್‌16

ಸಾಗರ ಉಪ ವಿಭಾಗ

ಅಭ್ಯರ್ಥಿಪಡೆದ ಮತ
ಪಿ.ಎಲ್.ಬಸವರಾಜ್‌ (ಗೆಲುವು)32
ಹೆಚ್‌.ಎಸ್.ರವೀಂದ್ರ21

ಪಟ್ಟಣ ಸಹಕಾರ, ಇತರೆ ಸಹಕಾರ ಸಂಘಗಳು

ಶಿವಮೊಗ್ಗ ಉಪ ವಿಭಾಗ

ಅಭ್ಯರ್ಥಿಪಡೆದ ಮತ
ಮಹಾಲಿಂಗಯ್ಯ ಶಾಸ್ತ್ರಿ (ಗೆಲುವು)47
ಕೆ.ಎಲ್‌.ಜಗದೀಶ್ವರ್‌45
ಡಿ.ಆನಂದ್‌16
ಜೆ.ಪಿ.ಯೋಗೇಶ್‌14

ಸಾಗರ ಉಪ ವಿಭಾಗ

ಅಭ್ಯರ್ಥಿಪಡೆದ ಮತ
ಟಿ.ಶಿವಶಂಕರಪ್ಪ (ಗೆಲುವು)75
ಎಂ.ಡಿ.ಹರೀಶ್‌61

ಒಂದು, ಎರಡು ಮತಗಳ ಅಂತರದ ಗೆಲವು

ಪ್ಯಾಕ್ಸ್‌ಗಳ ಪೈಕಿ ಎರಡು ಕ್ಷೇತ್ರದಲ್ಲಿ ಒಂದು ಮತಗಳ ಅಂತರದಲ್ಲಿ ಗಲುವಾಗಿದೆ. ಶಿವಮೊಗ್ಗ ಪ್ಯಾಕ್ಸ್‌ನಲ್ಲಿ ಕೆ.ಸಿ.ದುಗ್ಗಪ್ಪ ಗೌಡ ಮತ್ತು ಸಾಗರದಲ್ಲಿ ಬೇಳೂರು ಗೋಪಾಲಕೃಷ್ಣ ಒಂದು ಮತದ ಅಂತರದಲ್ಲಿ ಗೆದ್ದಿದ್ದಾರೆ. ಇನ್ನು, ಭದ್ರಾವತಿ ಪ್ಯಾಕ್ಸ್‌ನಲ್ಲಿ ಸಿ.ಹನುಮಂತಪ್ಪ, ಕೃಷಿ ಉತ್ಪನ್ನ ಮಾರಾಟ ಕ್ಷೇತ್ರದಲ್ಲಿ ಸಾಗರ ಉಪ ವಿಭಾಗದ ಜಿ.ಎನ್.ಸುಧೀರ್‌, ಪಟ್ಟಣ ಸಹಕಾರ ಇತರೆ ಸಹಕಾರ ಸಂಘಗಳ ಕ್ಷೇತ್ರದಲ್ಲಿ ಶಿವಮೊಗ್ಗ ಉಪ ವಿಭಾಗದಲ್ಲಿ ಮಹಾಲಿಂಗಯ್ಯ ಶಾಸ್ತ್ರಿ ಎರಡು ಮತಗಳ ಅಂತರದಲ್ಲಿ ಗೆದ್ದಿದ್ದಾರೆ.

ಹಾಲಿ ನಿರ್ದೇಶಕರಿಗೆ ಸೋಲು

ಡಿಸಿಸಿ ಬ್ಯಾಂಕ್‌ ಹಾಲಿ ನಿರ್ದೇಶಕರ ಪೈಕಿ ಅಧ್ಯಕ್ಷ ಆರ್‌.ಎಂ.ಮಂಜುನಾಥಗೌಡ, ಹಿರಿಯ ಸಹಕಾರಿ ಬಸವಾನಿ ವಿಜಯದೇವ್‌, ಜಿ.ಎನ್.ಸುಧೀರ್‌ ಜಯಗಳಿಸಿದ್ದಾರೆ. ಉಪಾಧ್ಯಕ್ಷ ಹೆಚ್‌.ಎಲ್.ಷಡಾಕ್ಷರಿ, ನಿರ್ದೇಶಕರಾದ ಅಗಡಿ ಅಶೋಕ್‌, ಜೆ.ಪಿ.ಯೋಗೇಶ್‌, ಎಸ್‌.ಪಿ.ದಿನೇಶ್‌, ಬಿ.ಡಿ.ಭೂಕಾಂತ್‌ ಸೋಲನುಭವಿಸಿದ್ದಾರೆ.

ಈ ಬಾರಿಯ ಚುನಾವಣೆ ತೀವ್ರ ಕುತೂಹಲ ಮೂಡಿಸಿತ್ತು. ಒಟ್ಟು 621 ಮತಗಳ ಪೈಕಿ 5 ಮತಗಳು ತಿರಸ್ಕೃತಗೊಂಡಿವೆ.

ಇದನ್ನೂ ಓದಿ – ಬಸ್‌ನಲ್ಲಿ ಹಿಂದೆ ಕೂತಿದ್ದವರು ಕಾಯಿನ್‌ ಬಿದ್ದಿದೆ ಎತ್ತಿಕೊಡಿ ಅಂದರು, ಬಗ್ಗಿದ ಮಹಿಳೆಗೆ ಕಾದಿತ್ತು‌ ಆಘಾತ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment