ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 29 JUNE 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (DCC BANK) ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಮತ್ತೊಮ್ಮೆ ಆರ್.ಎಂ.ಮಂಜುನಾಥ ಗೌಡ ಬಣ ಜಯಭೇರಿ ಬಾರಿಸಿದೆ. ತೀವ್ರ ಪೈಪೋಟಿ ಒಡ್ಡಿದ್ದ ಸಹಕಾರ ಭಾರತಿ ಒಂದು ಸ್ಥಾನ ಗೆಲ್ಲುವ ಮೂಲಕ ಹೀನಾಯ ಸೋಲನುಭವಿಸಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
12 ಸ್ಥಾನಕ್ಕೆ ನಡೆದ ಚುನಾವಣೆ
ಆಡಳಿತ ಮಂಡಳಿಯ 12 ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ 11 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಮಹಾಲಿಂಗಯ್ಯ ಶಾಸ್ತ್ರಿ ಮಾತ್ರ ಗೆದ್ದಿದ್ದಾರೆ. 13 ಪ್ಯಾಕ್ಸ್‌ಗಳ ಪೈಕಿ ಹೊಸನಗರ ಪ್ಯಾಕ್ಸ್‌ನ ಎಂ.ಎಂ.ಪರಮೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.
ಎಲ್ಲೆಲ್ಲಿ ಯಾರೆಲ್ಲ ಗೆದ್ದಿದ್ದಾರೆ?
ತಾಲೂಕುವಾರು ಪ್ಯಾಕ್ಸ್‌ಗಳು
ಶಿವಮೊಗ್ಗ | |
ಅಭ್ಯರ್ಥಿ | ಪಡೆದ ಮತ |
ಕೆ.ಸಿ.ದುಗ್ಗಪ್ಪಗೌಡ (ಗೆಲುವು) | 13 |
ಶಿವನಂಜಪ್ಪ | 12 |
ಭದ್ರಾವತಿ | |
ಅಭ್ಯರ್ಥಿ | ಪಡೆದ ಮತ |
ಸಿ.ಹನುಮಂತಪ್ಪ (ಗೆಲುವು) | 9 |
ಹೆಚ್.ಎಲ್.ಷಡಾಕ್ಷರಿ | 7 |
ತೀರ್ಥಹಳ್ಳಿ | |
ಅಭ್ಯರ್ಥಿ | ಪಡೆದ ಮತ |
ಬಸವಾನಿ ವಿಜಯದೇವ್(ಗೆಲುವು) | 14 |
ಕೆ.ಎಸ್.ಶಿವಕುಮಾರ್ | 9 |
ಸಾಗರ | |
ಅಭ್ಯರ್ಥಿ | ಪಡೆದ ಮತ |
ಗೋಪಾಲಕೃಷ್ಣ ಬೇಳೂರು (ಗೆಲುವು) | 15 |
ರತ್ನಾಕರ ಹೊನಗೋಡು | 14 |
ಶಿಕಾರಿಪುರ | |
ಅಭ್ಯರ್ಥಿ | ಪಡೆದ ಮತ |
ಚಂದ್ರಶೇಖರ ಗೌಡ (ಗೆಲುವು) | 26 |
ಅಗಡಿ ಅಶೋಕ್ | 11 |
ಸೊರಬ | |
ಅಭ್ಯರ್ಥಿ | ಪಡೆದ ಮತ |
ಕೆ.ಪಿ.ರುದ್ರಗೌಡ (ಗೆಲುವು) | 14 |
ಶಿವಮೂರ್ತಿ ಗೌಡ | 10 |
ಹೊಸನಗರ | |
ಅಭ್ಯರ್ಥಿ | ಗೆಲುವಿಗೆ ಕಾರಣ |
ಎಂ.ಎಂ.ಪರಮೇಶ್ | ಅವಿರೋಧ ಆಯ್ಕೆ |
ಕೃಷಿ ಉತ್ಪನ್ನ ಮಾರಾಟ ಕ್ಷೇತ್ರ
ಶಿವಮೊಗ್ಗ ಉಪ ವಿಭಾಗ | |
ಅಭ್ಯರ್ಥಿ | ಪಡೆದ ಮತ |
ಮಂಜುನಾಥ ಗೌಡ (ಗೆಲುವು) | 15 |
ವಿರೂಪಾಕ್ಷಪ್ಪ | 3 |
ಸಾಗರ ಉಪ ವಿಭಾಗ | |
ಅಭ್ಯರ್ಥಿ | ಪಡೆದ ಮತ |
ಜಿ.ಎನ್.ಸುಧೀರ್ (ಗೆಲುವು) | 23 |
ಬಿ.ಡಿ.ಭೂಕಾಂತ್ | 21 |
ಬ್ಯಾಂಕ್‌ಗಳು
ಶಿವಮೊಗ್ಗ ಉಪ ವಿಭಾಗ | |
ಅಭ್ಯರ್ಥಿ | ಪಡೆದ ಮತ |
ಎಸ್.ಕೆ.ಮರಿಯಪ್ಪ (ಗೆಲುವು) | 39 |
ಎಸ್.ಪಿ.ದಿನೇಶ್ | 16 |
ಸಾಗರ ಉಪ ವಿಭಾಗ | |
ಅಭ್ಯರ್ಥಿ | ಪಡೆದ ಮತ |
ಪಿ.ಎಲ್.ಬಸವರಾಜ್ (ಗೆಲುವು) | 32 |
ಹೆಚ್.ಎಸ್.ರವೀಂದ್ರ | 21 |
ಪಟ್ಟಣ ಸಹಕಾರ, ಇತರೆ ಸಹಕಾರ ಸಂಘಗಳು
ಶಿವಮೊಗ್ಗ ಉಪ ವಿಭಾಗ | |
ಅಭ್ಯರ್ಥಿ | ಪಡೆದ ಮತ |
ಮಹಾಲಿಂಗಯ್ಯ ಶಾಸ್ತ್ರಿ (ಗೆಲುವು) | 47 |
ಕೆ.ಎಲ್.ಜಗದೀಶ್ವರ್ | 45 |
ಡಿ.ಆನಂದ್ | 16 |
ಜೆ.ಪಿ.ಯೋಗೇಶ್ | 14 |
ಸಾಗರ ಉಪ ವಿಭಾಗ | |
ಅಭ್ಯರ್ಥಿ | ಪಡೆದ ಮತ |
ಟಿ.ಶಿವಶಂಕರಪ್ಪ (ಗೆಲುವು) | 75 |
ಎಂ.ಡಿ.ಹರೀಶ್ | 61 |
ಒಂದು, ಎರಡು ಮತಗಳ ಅಂತರದ ಗೆಲವು
ಪ್ಯಾಕ್ಸ್‌ಗಳ ಪೈಕಿ ಎರಡು ಕ್ಷೇತ್ರದಲ್ಲಿ ಒಂದು ಮತಗಳ ಅಂತರದಲ್ಲಿ ಗಲುವಾಗಿದೆ. ಶಿವಮೊಗ್ಗ ಪ್ಯಾಕ್ಸ್‌ನಲ್ಲಿ ಕೆ.ಸಿ.ದುಗ್ಗಪ್ಪ ಗೌಡ ಮತ್ತು ಸಾಗರದಲ್ಲಿ ಬೇಳೂರು ಗೋಪಾಲಕೃಷ್ಣ ಒಂದು ಮತದ ಅಂತರದಲ್ಲಿ ಗೆದ್ದಿದ್ದಾರೆ. ಇನ್ನು, ಭದ್ರಾವತಿ ಪ್ಯಾಕ್ಸ್‌ನಲ್ಲಿ ಸಿ.ಹನುಮಂತಪ್ಪ, ಕೃಷಿ ಉತ್ಪನ್ನ ಮಾರಾಟ ಕ್ಷೇತ್ರದಲ್ಲಿ ಸಾಗರ ಉಪ ವಿಭಾಗದ ಜಿ.ಎನ್.ಸುಧೀರ್, ಪಟ್ಟಣ ಸಹಕಾರ ಇತರೆ ಸಹಕಾರ ಸಂಘಗಳ ಕ್ಷೇತ್ರದಲ್ಲಿ ಶಿವಮೊಗ್ಗ ಉಪ ವಿಭಾಗದಲ್ಲಿ ಮಹಾಲಿಂಗಯ್ಯ ಶಾಸ್ತ್ರಿ ಎರಡು ಮತಗಳ ಅಂತರದಲ್ಲಿ ಗೆದ್ದಿದ್ದಾರೆ.
ಹಾಲಿ ನಿರ್ದೇಶಕರಿಗೆ ಸೋಲು
ಡಿಸಿಸಿ ಬ್ಯಾಂಕ್ ಹಾಲಿ ನಿರ್ದೇಶಕರ ಪೈಕಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಹಿರಿಯ ಸಹಕಾರಿ ಬಸವಾನಿ ವಿಜಯದೇವ್, ಜಿ.ಎನ್.ಸುಧೀರ್ ಜಯಗಳಿಸಿದ್ದಾರೆ. ಉಪಾಧ್ಯಕ್ಷ ಹೆಚ್.ಎಲ್.ಷಡಾಕ್ಷರಿ, ನಿರ್ದೇಶಕರಾದ ಅಗಡಿ ಅಶೋಕ್, ಜೆ.ಪಿ.ಯೋಗೇಶ್, ಎಸ್.ಪಿ.ದಿನೇಶ್, ಬಿ.ಡಿ.ಭೂಕಾಂತ್ ಸೋಲನುಭವಿಸಿದ್ದಾರೆ.
ಈ ಬಾರಿಯ ಚುನಾವಣೆ ತೀವ್ರ ಕುತೂಹಲ ಮೂಡಿಸಿತ್ತು. ಒಟ್ಟು 621 ಮತಗಳ ಪೈಕಿ 5 ಮತಗಳು ತಿರಸ್ಕೃತಗೊಂಡಿವೆ.
ಇದನ್ನೂ ಓದಿ – ಬಸ್‌ನಲ್ಲಿ ಹಿಂದೆ ಕೂತಿದ್ದವರು ಕಾಯಿನ್ ಬಿದ್ದಿದೆ ಎತ್ತಿಕೊಡಿ ಅಂದರು, ಬಗ್ಗಿದ ಮಹಿಳೆಗೆ ಕಾದಿತ್ತು ಆಘಾತ